ಜನವರಿ 1ರಿಂದ ಬದಲಾದ ರೈಲು ಟಿಕೆಟ್ ಕಾಯ್ದಿರಿಸುವ ವಿಧಾನ IRCTC new website
ಹೊಸದಿಲ್ಲಿ, ಜನವರಿ02: ರೈಲು ಟಿಕೆಟ್ಗಳನ್ನು ಕಾಯ್ದಿರಿಸುವ ವಿಧಾನವು ಜನವರಿ ಒಂದರಿಂದ ಬದಲಾಗಿದೆ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಐಆರ್ಸಿಟಿಸಿಯ ಹೊಸ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈಗ ಟಿಕೆಟ್ ಕಾಯ್ದಿರಿಸುವುದು ಮೊದಲಿಗಿಂತ ಸುಲಭ ಮತ್ತು ವೇಗವಾಗಿರುತ್ತದೆ. IRCTC new website

ಐಆರ್ಸಿಟಿಸಿಯ ಹೊಸ ವೆಬ್ಸೈಟ್ https://www.irctc.co.in/nget/train-search ಸಂಪೂರ್ಣವಾಗಿ ಬದಲಾಗಿದೆ.
ಐಆರ್ಸಿಟಿಸಿಯ ಆರಂಭಿಕ ಪುಟದಲ್ಲಿ, ಎಲ್ಲಾ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಸರ್ಚ್ ಆಯ್ಕೆಯನ್ನು ಮಾಡಬಹುದು. ಮುಂದಿನ ಪುಟದಲ್ಲಿ ರೈಲುಗಳ ಸಲಹೆಗಳ ಲಿಸ್ಟ್ ತೆರೆದುಕೊಳ್ಳುತ್ತವೆ. ಈ ಪುಟದಲ್ಲಿ ನೀವು ರೈಲುಗಳ ಹೆಸರುಗಳು, ಅವುಗಳ ಸಮಯಗಳು, ಎಲ್ಲಾ ವರ್ಗ ದರಗಳನ್ನು ಒಂದೇ ಸ್ಥಳದಲ್ಲಿ ಪಡೆಯುತ್ತೀರಿ. ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬಯಸಿದರೆ, ಲಾಗ್ ಇನ್ ಪುಟ ತೆರೆಯುತ್ತದೆ.
ಹೂಡಿಕೆದಾರರಿಗೆ ಸಿಹಿ ಸುದ್ದಿ – ಇಲ್ಲಿ ಹೂಡಿಕೆ ಮಾಡಿದರೆ ವರ್ಷಕ್ಕೆ 9.95 ಪ್ರತಿಶತಕ್ಕಿಂತ ಹೆಚ್ಚಿನ ಬಡ್ಡಿ
ಹೊಸ ವೆಬ್ಸೈಟ್ ನಿಮ್ಮ ಹಿಂದಿನ ಪಾವತಿಯ ವಿವರಗಳನ್ನು ಸಹ ಉಳಿಸುತ್ತದೆ. ಅದನ್ನು ನೀವು ಬಯಸಿದಾಗ ನೋಡಬಹುದು. ಐಆರ್ಸಿಟಿಸಿಯ ಹೊಸ ವೆಬ್ಸೈಟ್ ನಲ್ಲಿ ನಿಮ್ಮ ಹಳೆಯ ಪ್ರಯಾಣದ ವಿವರಗಳು ಸಹ ದೊರಕುತ್ತದೆ. ಪಾವತಿ ವಿವರಗಳನ್ನು ಭರ್ತಿ ಮಾಡಲು ಪ್ರತ್ಯೇಕ ಪೇಜ್ ತೆರೆಯುತ್ತದೆ. ಇದರಿಂದ ಯಾವುದೇ ತಪ್ಪು ಕಂಡುಬಂದಲ್ಲಿ ಅದನ್ನು ಸರಿಪಡಿಸಬಹುದು.

ಜನವರಿ 1 ರಂದು ಆನ್ಲೈನ್ನಲ್ಲಿ 83% ಟಿಕೆಟ್ಗಳನ್ನು ಕಾಯ್ದಿರಿಸಲಾಗಿದೆ. ರೈಲ್ವೆ ಸಚಿವ ಪಿಯೂಷ್ ಗೋಯಲ್ ಎಸ್ಬಿಐ -ಐಆರ್ಟಿಸಿ ಕ್ರೆಡಿಟ್ ಕಾರ್ಡ್ ಬಗ್ಗೆ ಸಹ ಮಾಹಿತಿ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಹಲ್ಲುನೋವಿಗೆ ಪರಿಣಾಮಕಾರಿ ಮನೆಮದ್ದುಗಳುhttps://t.co/HhYDoJETEb
— Saaksha TV (@SaakshaTv) December 31, 2020
ವರ್ಷದ ಆರಂಭದಲ್ಲೇ ಗ್ರಾಹಕರಿಗೆ ಶಾಕ್ ಕೊಟ್ಟ ತೈಲ ಮಾರುಕಟ್ಟೆ ಕಂಪನಿಗಳು – ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆhttps://t.co/SKMAW3KcKb
— Saaksha TV (@SaakshaTv) January 1, 2021








