ಇಂದಿನಿಂದ ಮತ್ತೆ ಮಳೆ ಆರಂಭ : ಹವಾಮಾನ ಇಲಾಖೆ ಎಚ್ಚರಿಕೆ karnataka saaksha tv
ಬೆಂಗಳೂರು : ರಾಜ್ಯದಲ್ಲಿ ಸೋಮವಾರ ರಜೆ ತೆಗೆದುಕೊಂಡಂತೆ ಕಾಣಿಸಿದ್ದ ಮಳೆರಾಯ ಇಂದಿನಿಂದ ಮತ್ತೆ ಅಬ್ಬರಿಸಿಲಿದ್ದಾರಂತೆ.
ಈ ಬಗ್ಗೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇಂದಿನಿಂದ ಮತ್ತೆ ಕೆಲವು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಬೀಸುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಕೆಲದಿನಗಳಿಂದ ನಿರಂತರವಾಗಿ ಅಬ್ಬರಿಸಿದ್ದ ಮಳೆರಾಯ ಸೋಮವಾರ ಬಿಡುವು ನೀಡಿದ್ದ.
ಇಂದು ಬೆಳಗ್ಗೆ ಸೂರ್ಯನ ದರ್ಶನ ಕೂಡ ಆಗಿತ್ತು.
ಆದ್ರೆ ಮಧ್ಯಾಹ್ನದ ಬಳಿಕ ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಇಂದಿನಿಂದ ಕೆಲವು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆಯಂತೆ.
ಇನ್ನುಳಿದಂತೆ ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು ಭಾಗದಲ್ಲಿ ಮಳೆ ಬೀಳಲಿದೆ.









