ರಾಜ್ಯದ 30 ಥಿಯೇಟರ್ ಗಳಲ್ಲಿ RRR ಟ್ರೈಲರ್ ರಿಲೀಸ್..! ಬೆಂಗಳೂರಿಗೆ ಬರುತ್ತಿದೆ ‘ಜಕ್ಕಣ್ಣ’ನ ಟೀಮ್..!
ರಾಜಮೌಳಿ ಅವರ ನಿರ್ದೇಶನದ ರಾಮ್ ಚರಣ್ , ಜ್ಯು. NTr ನಟನೆಯ ಬಹುನಿರೀಕ್ಷೆಯ RRR ಸಿನಿಮಾ ರಿಲೀಸ್ ಗೆ ಇನ್ನೇನು ಒಂದು ತಿಂಗಳು ಬಾಕಿಯಿದೆ.. ಜನವರಿ 7 ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ತಂಡ ಒಂದೊಂದೇ ಹಾಡನ್ನ ರಿಲೀಸ್ ಮಾಡ್ತಾ ಆಫ್ ಲೈನ್ ಪ್ರಚಾರವನ್ನ ಕೂಡ ಶುರು ಮಾಡಿದೆ..
RRR ಸಿನಿಮಾದ ಈ ಟ್ರೈಲರ್ ಡಿಸೆಂಬರ್ 03ರಂದು ರಿಲೀಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಈ ಟ್ರೈಲರ್ ರಿಲೀಸ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇದೇ ಡಿಸೆಂಬರ್ 9ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಒಂದೇ ಸಮಯಕ್ಕೆ ಥಿಯೇಟರ್ ಗಳಲ್ಲಿ ಟ್ರೈಲರ್ ರಿಲೀಸ್ ಮಾಡಲು ರಾಜಮೌಳಿ ಸಜ್ಜಾಗಿದ್ದಾರೆ. ಕನ್ನಡದ ಟ್ರೈಲರ್ ಕೂಡ ಥಿಯೇಟರ್ ಗಳಲ್ಲಿ ರಿಲೀಸ್ ಆಗುತ್ತಿದೆ.
ವಂಚಕನೊಂದಿಗೆ ಲಿಂಕ್ – ‘ಲಂಕಾ’ ಸುಂದರಿಗೆ ಕಂಟಕ : ಇಡಿ ವಿಚಾರಣೆಗೆ ಹಾಜರ್
ರಾಜಮೌಳಿ ಕರ್ನಾಟಕದಾದ್ಯಂತ ಸುಮಾರು 30ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ RRR ಟ್ರೈಲರ್ ಅನ್ನು ಪ್ರದರ್ಶನ ಮಾಡಲಿದ್ದಾರೆ. ಕರ್ನಾಟಕದ ಸುಮಾರು 30 ಚಿತ್ರಮಂದಿರಗಳಲ್ಲಿ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕನ್ನಡದ RRR ಟ್ರೈಲರ್ ಪ್ರದರ್ಶನ ಕಾಣಲಿದೆ. ಪ್ರಮುಖವಾಗಿ ಅಂಜನ್, ಊರ್ವಶಿ, ಸೇರಿದಂತೆ ಬೆಂಗಳೂರಿನ ಪ್ರಮುಖ ಚಿತ್ರಮಂದಿಗಳಲ್ಲಿ ಪ್ರದರ್ಶನ ಕಾಣಲಿದೆ.
ಅಲ್ಲದೇ ಸಿನಿಮಾ ಪ್ರಚಾರಕ್ಕಾಗಿ ಬಾಲಿವುಡ್ ಬೆಡಗಿ ಸಿನಿಮಾದ ನಾಯಕಿ ಆಲಿಯಾ ಭಟ್ ಬೆಂಗಳೂರಿಗೆ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡ ಟ್ರೈಲರ್ ತೆರೆಕಂಡ ಒಂದು ದಿನದ ಬಳಿಕ ರಾಜಮೌಳಿ , ಆಲಿಯಾ ಭಟ್ , ರಾಮ್ ಚರಣ್ , ಜ್ಯೂನಿಯರ್ ಎನ್ ಟಿ ಆರ್ ಬೆಂಗಳೂರಿಗೆ ಬಂದು ಪ್ರಚಾರ ಮಾಡಲಿದ್ದಾರೆ. ಡಿಸೆಂಬರ್ 10ರಂದು RRR ಟೀಮ್ ಬೆಂಗಳೂರಿಗೆ ಬಂದು ಭರ್ಜರಿ ಪ್ರಚಾರ ಮಾಡಲಿದ್ದಾರೆ..