Ram charan : ರಾಮ್ ಚರಣ್ ‘ಬೀಸ್ಟ್’ ಎಂದ ರಣವೀರ್ ಸಿಂಗ್….!!!
ಪ್ರಸ್ತುತ ಬಾಲಿವುಡ್ ನಲ್ಲೂ ಸೌತ್ ಸಿನಿಮಾಗಳದ್ದೇ ಹವಾ,,,, ಸೌತ್ ಸಿನಿಮಾ ಸ್ಟಾರ್ ಗಳದ್ದೇ ಕ್ರೇಜ್ , ಕೆಜಿಎಫ್ ಮೂಲಕ ರಾಕಿಂಗ್ ಸ್ಟಾರ್ ಯಶ್ , ಪುಷ್ಪ ಮೂಲಕ ಅಲ್ಲು ಅರ್ಜುನ್ , RRR ಸಿನಿಮಾದ ಮೂಲಕ ಜ್ಯೂ. NTR ಬಾಲಿವುಡ್ ನಲ್ಲಿ ಸ್ಟಾರ್ ಡಮ್ ಗಿಟ್ಟಿಸಿಕೊಂಡಿದ್ದು,,, ಉತ್ತರ ಭಾರತದ ಭಾಗದಲ್ಲಿ ಸದ್ಯಕ್ಕೆ ಜನರ ಫೇವರೇಟ್ ಆಗಿದ್ದಾರೆ…
ಆದ್ರೆ ಇಷ್ಟು ದಿನ ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ಸ್ಟಾರ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ಬಾಲಿವುಡ್ ನಲ್ಲಿ ಅಲ್ಲು , ಯಶ್ , ಎನ್ ಟಿ ಆರ್ ನಂತೆಯೇ ಇದೀಗ ಪಾಪ್ಯುಲಾರಿಟಿ ಪಡೆಯುತ್ತಿದ್ದಾರೆ…
ಹೌದು… ಖ್ಯಾತ ಟಾಲಿವುಡ್ ನಟ ರಾಮ್ ಚರಣ್ ಅವರ ಯಶಸ್ಸು ಟಾಲಿವುಡ್ ಗೆ ಮಾತ್ರ ಸೀಮಿತವಾಗಿಲ್ಲ. ಈ ನಟ ಬಾಲಿವುಡ್ ವಲಯದಲ್ಲಿಯೂ ಸಹ ಫೇಮಸ್ ಆಗ್ತಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಬಾಲಿವುಡ್ ಸ್ಟಾರ್ರಣವೀರ್ ಸಿಂಗ್ ಅವರು ಹೈದರಾಬಾದ್ ನಲ್ಲಿ ಮಾತನಾಡುತ್ತಾ ರಾಮ್ ಚರಣ್ ಅವರನ್ನು ತಮ್ಮ ನೆಚ್ಚಿನ ನಟ ಎಂದು ಹೆಸರಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಸಂದರ್ಶನವೊಂದರಲ್ಲಿ, ರಣವೀರ್ ಸಿಂಗ್ ಆಶ್ಚರ್ಯಕರ ವಿಚಾರವನ್ನ ಬಹಿರಂಗಪಡಿಸಿದ್ದಾರೆ… ಅಲ್ಲದೇ ರಾಮ್ ಚರಣ್ ಅವರನ್ನ ಬೀಸ್ಟ್ ಅಂಡ್ ಮಷೀನ್ ಎಂದು ಹೊಗಳಿದ್ದಾರೆ…
ಮೊದಲಿಗೆ ನಾನು ಅವರ ಮಗಧೀರ ಸಿನಿಮಾವನ್ನ ನೋಡಿದಾಗಿನಿಂದಲೂ ನಾನು ಅವರನ್ನು ಪ್ರೀತಿಸುತ್ತೇನೆ. ಹಾಗೆಯೇ ನಾನು RRR ಸಿನಿಮಾದ ಬಗ್ಗೆ ಅಷ್ಟೇ ಉತ್ಸುಕನಾಗಿದ್ದೇನೆ ಎಂದು ರಣವೀರ್ ಸಿಂಗ್ ಹೇಳಿಕೊಂಡಿದ್ದಾರೆ. ಅಲ್ಲದೇ ರಣವೀರ್ ಸಿಂಗ್ ಅವರು ರಾಮ್ ಚರಣ್ ಅಭಿಮಾನಿಗಳಿಗೆ “ನಾಟು ನಾಟು” ಹಾಡನ್ನು ಹಾಡಿದ್ದು ವಿಶೇಷ..