ಸಿಡಿ ಕೇಸ್ – ‘ರಮೇಶ್ ಜಾರಕಿಹೊಳಿ ಆಸ್ಪತ್ರೆಯಲ್ಲಿ ಇಲ್ಲ … ಇದ್ರೆ ಸಾಕ್ಷಿ ತೋರಿಸಿ’..!

1 min read
Ramesh Zarakiholi

ಸಿಡಿ ಕೇಸ್ – ‘ರಮೇಶ್ ಜಾರಕಿಹೊಳಿ ಆಸ್ಪತ್ರೆಯಲ್ಲಿ ಇಲ್ಲ … ಇದ್ರೆ ಸಾಕ್ಷಿ ತೋರಿಸಿ’..!

ಸಿಡಿ ಕೇಸ್ ವೇಳೆ ಅನೇಕ ತಿರುವುಗಳು ಸಿಗ್ತಿದೆ. ಹೀಗಿರೋವಾಗ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಇದೆ ಎಂಬ ಸುದ್ದಿ ವರದಿಯಾಗಿದ್ದು, ಅವರಿಗೆ ಬೆಳಗಾವಿಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ ಎನ್ನಲಾಗಿದೆ. ಆದ್ರೆ ರಮೇಶ್ ಜಾರಕಿಹೋಳಿ ಆಸ್ಪತ್ರೆಯಲ್ಲಿ ಇಲ್ಲ ಎಂಬ ಅನುಮಾನವನ್ನ ವ್ಯಕ್ತಪಡಿಸಿದ್ದಾರೆ ವಕೀಲರಾದ ಜಗದೀಶ್. ಅಲ್ಲಿದ್ದ ವೈದ್ಯಾಧಿಕಾರಿ ಹಾರೈಕೆಯ ಉತ್ತರ ಕೊಡ್ತಿದ್ದಾರೆ. ಬೆಳಗಾವಿಯ ನನ್ನ ಸ್ನೇಹಿತರ ಮುಖಾಂತರ ಮಾಹಿತಿ ಕಲೆಹಾಕಿದ್ದೇನೆ. ಗೋಕಾಕ್ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ರಮೇಶ್ ಜಾರಕಿಹೊಳಿ ಅಡ್ಮಿಟ್ ಆಗಿಲ್ಲ. ಸರ್ಕಾರ ನೀಡಿರುವ ಸವಲತ್ತುಗಳನ್ನ ಆರೋಪಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಕೋವಿಡ್ ನೆಪ ಹೇಳಿ ವಿಚಾರಣೆಗೆ ಗೈರಾಗುತ್ತಿದ್ದಾರೆ. ಬೆಳಗಾವಿ ಮೂಲದ ವಕೀಲರು ಸ್ನೇಹಿತ ಮಾಧ್ಯಮದವರ ಜೊತೆ ಆಸ್ಪತ್ರೆಗೆ ಹೋಗಿದ್ದಾರೆ. ಐಸಿಯುನಲ್ಲಿ ರಮೇಶ್ ಜಾರಕಿಹೊಳಿ ಇಲ್ಲ.  ವೈದ್ಯಾಧಿಕಾರಿಗಳನ್ನ ಕೇಳಿದರೆ ಸೂಕ್ತ ಉತ್ತರ ನೀಡುತ್ತಿಲ್ಲ. ರಮೇಶ್ ಜಾರಕಿಹೊಳಿ ಇರುವ ಫೋಟೋ ತೋರಿಸಿ, ಪಿಪಿಇ ಕಿಟ್ ಹಾಕಿ ಮಾಧ್ಯಮದವರ ಮುಂದೆ ತೋರಿಸುವಂತೆ ಕೇಳಲಾಗಿದೆ. ಆದರೂ ಸಹ ಆಸ್ಪತ್ರೆಯವರಿಂದ ಸೂಕ್ತ ಉತ್ತರ ಸಿಗುತ್ತಿಲ್ಲ ಎಂದು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ. ಸಾಕ್ಷಿ ತೋರಿಸಿ ಎಂದು ಆಗ್ರಹಿಸಿದ್ದಾರೆ.

ಸಿಎಂ ಬಿಎಸ್ ವೈ ಕುರಿತಾಗಿ ಸಿ ಟಿ ರವಿ ಹೀಗೆ ಹೀಳಿದ್ದೇಕೆ..?

ಸಾರಿಗೆ ಪ್ರತಿಭಟನೆಯಲ್ಲಿ ರಾಜಕೀಯ ಆಟ – ನೀವು ದಾಳ ಆಗಬೇಡಿ – ಸಿ.ಟಿ. ರವಿ  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd