Ranbir Kapoor Accident: ರಣಬೀರ್ ಕಪೂರ್ ಕಾರು ಅಪಘಾತ

1 min read

Ranbir Kapoor Accident: ರಣಬೀರ್ ಕಪೂರ್ ಕಾರು ಅಪಘಾತ

ಬಾಲಿವುಡ್ ಹೀರೋ ರಣಬೀರ್ ಕಪೂರ್ ಅಭಿನಯದ ಇತ್ತೀಚಿನ ಚಿತ್ರ ಶಂಶೇರಾ. ಈ ಸಿನಿಮಾ ಟೀಸರ್ ಗೆ ಒಂದು ರೇಂಜ್ ನಲ್ಲಿ ರೆಸ್ಪಾನ್ಸ್ ಸಿಕ್ಕಿದ್ದು ಗೊತ್ತೇ ಇದೆ!

ಕರಣ್ ಮಲ್ಹೋತ್ರಾ ನಿರ್ದೇಶನದ ಚಿತ್ರದ ಟ್ರೈಲರ್ ಶುಕ್ರವಾರ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸುತ್ತಿರುವಾ  ರಣಬೀರ್ ಕಾರಿಗೆ ಅಪಘಾತವಾಗಿದೆ.

ಆದರೆ, ಅಪಘಾತದಲ್ಲಿ ನಾಯಕನಿಗೆ ಯಾವುದೇ ಗಾಯಗಳಾಗಿಲ್ಲ, ಶಂಶೇರಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಣಬೀರ್ ತಮ್ಮ ಕಾರು ಅಪಘಾತಕ್ಕೀಡಾದ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿಜ ಹೇಳಬೇಕಾದರೆ ನಾನು ಕರೆಕ್ಟ್ ಸಮಯಕ್ಕೆ ಮನೆ ಬಿಟ್ಟಿದ್ದೆ. ಆದ್ರೆ ದಾರಿಯಲ್ಲಿ ಕಾರಿಗೆ ಆಕ್ಸಿಡೆಂಟ್ ಆಯ್ತು.

Ranbir Kapoor Accident saaksha tv
Ranbir Kapoor Accident saaksha tv

ಕಾರಿನ ಗ್ಲಾಸ್ ಹೊಡೆದು ಹೋಗಿವೆ. ಆದ್ರೆ ನಮಗೆ ಯಾವುದೇ ತೊಂದರೆ, ಗಾಯಗಳಾಗಿಲ್ಲ.

ಇನ್ನು ನಾನು ಸಂಜಯ್ ದತ್ ಅವರ ದೊಡ್ಡ ಅಭಿಮಾನಿ.

ನಾವು ಜೊತೆಯಾಗಿ ನಟಿಸಿದ ಸಿನಿಮಾ ಪ್ರೇಕ್ಷಕರನ್ನು ಖಂಡಿತವಾಗಿ ರಂಜಿಸುತ್ತದೆ ಎಂದು ರಣಬೀರ್ ಹೇಳಿದ್ದಾರೆ.

ಶಂಶೇರಾ ಸಿನಿಮಾ ಜುಲೈ 22ಕ್ಕೆ ರಿಲೀಸ್ ಆಗಲಿದೆ.

ಆ ನಂತರ ರಣ್ ಬೀರ್, ಆಲಿಯಾ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟಂಬರ್ 9 ರಂದು ರಿಲೀಸ್ ಆಗಲಿದೆ.  

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd