Ranji Trophy 2022 : ರಣಜಿಯಲ್ಲಿ ಸೆಂಚೂರಿ ಸಿಡಿಸಿದ ಕ್ರೀಡಾ ಮಂತ್ರಿ..
ರಣಜಿ ಟ್ರೋಫಿ 2022 ರ ಭಾಗವಾಗಿ ಬಂಗಾಳ ಮತ್ತು ಜಾರ್ಖಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವು ಶುಕ್ರವಾರ ಡ್ರಾದಲ್ಲಿ ಕೊನೆಗೊಂಡಿತು.
ಆದರೆ, ಮೊದಲ ಇನಿಂಗ್ಸ್ ನಲ್ಲಿ ಬೃಹತ್ ಮುನ್ನಡೆ ಸಾಧಿಸಿದ್ದ ಬೆಂಗಾಲ್ ತಂಡ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
ಜೂನ್ 14-18ರ ನಡುವಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳ ಮತ್ತು ಮಧ್ಯಪ್ರದೇಶ ಸೆಣಸಲಿವೆ.
ಆಟದ ಅಂತ್ಯದ ವೇಳೆಗೆ ಬೆಂಗಾಲ್ ಎರಡನೇ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿತ್ತು.
ಟೀಂ ಇಂಡಿಯಾ ಕ್ರಿಕೆಟಿಗ.. ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ ಸೂಪರ್ ಸೆಂಚುರಿ ಮೂಲಕ ಮಿಂಚಿದ್ರು.

152 ಎಸೆತಗಳಲ್ಲಿ 14 ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ ಮನೋಜ್ ತಿವಾರಿ ಶತಕ ಗಳಿಸಿದರು.
ಅಭಿಷೇಕ್ ಪೊರೆಲ್ (34) ಅವರೊಂದಿಗೆ ಐದನೇ ವಿಕೆಟ್‌ಗೆ ಅಮೂಲ್ಯ 92 ರನ್ ಸೇರಿಸಿದರು.
ನಂತರ ಶಹಬಾಜ್ ಅಹ್ಮದ್ (46) ಅವರೊಂದಿಗೆ ಆರನೇ ವಿಕೆಟ್‌ಗೆ 96 ರನ್ ಸೇರಿಸಿದರು.
ಒಟ್ಟಾರೆ ಮನೋಜ್ ತಿವಾರಿ 185 ಎಸೆತಗಳಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 136 ರನ್ ಗಳಿಸಿದರು.
ಇದಕ್ಕೂ ಮುನ್ನ ಬೆಂಗಾಲ್ 773ಕ್ಕೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಜಾರ್ಖಂಡ್ ಮೊದಲ ಇನಿಂಗ್ಸ್ ನಲ್ಲಿ 298ಕ್ಕೆ ಕುಸಿದಿತ್ತು. ಈ ಮೂಲಕ ಬೆಂಗಾಲ್‌ಗೆ 475 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ದೊರಕಿತು.








