ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕ
ಯಾದಗಿರಿ : ಭಿಕ್ಷುಕಿ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.. ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ..
ಇದೆ ನವೆಂಬರ್ 23 ರ ರಾತ್ರಿ , ಪಾನಮತ್ತ ಕಾಮುಕನೋರ್ವ ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.. ಇನ್ನೂ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಭಿಕ್ಷುಕಿಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರವೆಸಗಿದ್ದಾನೆ.
ಹನುಮಂತ (40) ಎಂಬಾತ ಇಂತಹ ನೀಚ ಕೃತ್ಯವೆಸಗಿದ್ದಾನೆ..
ಈತ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ನಿವಾಸಿಯಾಗಿದ್ದಾನೆ. ಅಲ್ಲದೇ ಈತ ಆಕೆಯ ಜೊತೆಗೆ ವರ್ತಿಸಿದ್ದನ್ನ ಅನುಮಾನಿಸಿ ಸ್ಥಳೀಯರು ಪ್ರಶ್ನಿಸಿದ್ದಾಗ ಈಕೆ ನನ್ನ ಹೆಂಡ್ತಿ ಎಂದು ನಾಟಕ ಮಾಡಿದ್ದಾನೆ. ಆದ್ರೂ ಸ್ಥಳೀಯರು ಪೊಲೀಸರನ್ನ ಸ್ಥಳಕ್ಕೆ ಕರೆಸಿದ್ದಾರೆ.
ನವೆಂಬರ್ 24 ರಂದು ಘಟನೆ ನಡೆದ ಮಾರನೇ ದಿನ ಬೆಳಗ್ಗೆ ಕೇಸ್ ದಾಖಲು ಮಾಡಲಾಗಿದೆ.. ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಕಾಮುಕನನ್ನ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ..
ಮಹಾನಗರ ಪಾಲಿಕೆ ಆಯುಕ್ತರ ಲವ್ ಸೆಕ್ಸ್ ದೋಖಾ..!