ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಕುರಿತ ನಕಲಿ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗುತ್ತಿತ್ತು. ಯಾವುದೋ ಹುಡುಗಿಯ ಹಾಟ್ ಅವತಾರದ ವಿಡಿಯೋಗೆ ರಶ್ಮಿಕಾರ ಮುಖ ಎಡಿಟ್ (Deepfake) ಮಾಡಿ ಹರಿಬಿಡಲಾಗಿತ್ತು. ಈ ಕುರಿತು ಸಾಕಷ್ಟು ಚರ್ಚೆಯಾದ ನಂತರ ಇದರ ಅಸಲಿ ಹೊರ ಬಂದಿತ್ತು.
ಜರಾ ಪಟೇಲ್ (Zara Patel) ಎಂಬ ಯುವತಿಯ ಒರಿಜಿನಲ್ ವಿಡಿಯೋ ಅದಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಡಿಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಮಿತಾಭ್ ಬಚ್ಚನ್ ಒತ್ತಾಯಿಸಿದ್ದರು. ಇದಕ್ಕೆ ರಶ್ಮಿಕಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈ ಘಟನೆ ಕುರಿತು ಅಸಲಿ ಹುಡುಗಿ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಆಗಿದ್ದರಲ್ಲಿ ತಮ್ಮ ಕೈವಾಡ ಇಲ್ಲ ಎಂದು ಅವರು ಹೇಳಿದ್ದಾರೆ.
ನನ್ನ ದೇಹ ಮತ್ತು ಫೇಮಸ್ ಬಾಲಿವುಡ್ ನಟಿಯ ಮುಖ ಜೋಡಿಸಿ ಡೀಪ್ಫೇಕ್ ವಿಡಿಯೋ ಮಾಡಿದ ಕುರಿತು ನನಗೆ ಈಗ ಗೊತ್ತಾಗಿದೆ. ಇದರಲ್ಲಿ ನನ್ನದೇನು ಇಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ಅಪ್ಲೋಡ್ ಮಾಡುವ ಮಹಿಳೆಯರು ಮತ್ತು ಹುಡುಗಿಯರ ಭವಿಷ್ಯದ ಕುರಿತು ನನಗೆ ಚಿಂತೆಯಾಗಿದೆ ಎಂದು ಆ ಯುವತಿ ಹೇಳಿದ್ದಾರೆ.
ಫೇಕ್ ವಿಡಿಯೋ ಕುರಿತು ರಶ್ಮಿಕಾ ತೀವ್ರ ವಿಷಾಧ ವ್ಯಕ್ತಪಡಿಸಿದ್ದರು.