Ravi Belagere
ದಿನದ ಪ್ರಮುಖ ಸುದ್ದಿಗಳು : ಟಾಪ್ 10 ನ್ಯೂಸ್ @ 8PM
ಹಿರಿಯ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ: ಅಕ್ಷರ ಲೋಕದ `ರವಿ’ ಅಸ್ತಂಗತ..!
ಬೆಂಗಳೂರು : ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಸಂಪಾದಕ ಹಾಗೂ ಲಕ್ಷಾಂತರ ಅಭಿಮಾನಿಗಳು ಹಾಗೂ ಓದುಗರ ನೆಚ್ಚಿನ ಬರಹಗಾರ ರವಿ ಬೆಳಗೆರೆ (Ravi Belagere) ವಿಧಿವಶರಾಗಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದ ರವಿಬೆಳಗೆರೆ, ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಗುರುವಾರ ತಡರಾತ್ರಿ ಹಾಯ್ ಬೆಂಗಳೂರ್ ಪತ್ರಿಕೆ ಕಚೇರಿಯಲ್ಲೇ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
`ಸೋಲು ಸಾಧ್ಯವಿಲ್ಲ’ : ಇವಿಎಂ ಬಗ್ಗೆ ಡಿ.ಕೆ.ಸುರೇಶ್ ಅನುಮಾನ
ಬೆಂಗಳೂರು : ಆರ್.ಆರ್. ನಗರದಲ್ಲಿ ಅಷ್ಟೊಂದು ಅಂತರದ ಸೋಲು ಸಾಧ್ಯವಿಲ್ಲ. ಇವಿಎಂ ದುರ್ಬಳಿಕೆ ಮಾಡಿಕೊಳ್ಳೋಕೆ ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ದುರ್ಬಳಕೆ ಆರೋಪ ಕೇಳಿ ಬರ್ತಿದೆ. ಅಮೆರಿಕಾದಲ್ಲೂ ಬ್ಯಾಲೆಟ್ ಪೇಪರ್ ನಡೆಯುತ್ತೆ. ಇವಿಎಂ ಯಾರು ಮಾಡಿರೋದು, ಮನುಷ್ಯರೇ ಮಾಡಿರುವುದು. ದುರ್ಬಳಕೆ ಮಾಡಿಕೊಳ್ಳೋಕೆ ಅವಕಾಶವಿದೆ. ಆದ್ರೂ ಚುನಾವಣೆ ಆಯೋಗ ಮೂಕ ಪ್ರೇಕ್ಷಕವಾಗಿದೆ. ಇದೇ ರೀತಿ ಆದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗಲಿದೆ ಎಂದರು.
ಬಸವನಗೌಡ ಬಿಜೆಪಿಗೆ ಚೂರಿ ಹಾಕಿ ಕಾಂಗ್ರೆಸ್ ಸೇರಿದ್ದಾರೆ : ರವಿಕುಮಾರ್
ರಾಯಚೂರು : ಆರ್. ಬಸವನಗೌಡ ತುರುವಿಹಾಳ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಆದ್ರೆ ಆರ್. ಬಸವನಗೌಡ ತುರುವಿಹಾಳರನ್ನ ಬಿಜೆಪಿ ಪರಿಚಯಸಿದ್ದು, ಬಿಜೆಪಿ ಬೆನ್ನಿಗೆ ಚೂರಿಹಾಕಿ ಕಾಂಗ್ರೆಸ್ ಸೇರಿದ್ದಾರೆ. ಮುಂಬರುವ ದಿನಗಳಲ್ಲಿ ಮತದಾರ ಅವರಿಗೆ ತಕ್ಕ ಪಾಠವನ್ನ ಕಲಿಸುತ್ತಾನೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ಹೇಳೀದ್ದಾರೆ. ಮುಂಬರುವ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಮತಗಳಿಸಿ, ಜಯ ಗಳಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಅನ್ನದಾತ ಸಜ್ಜು
ಬೆಂಗಳೂರು : ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮತ್ತೆ ಬೃಹತ್ ಪ್ರತಿಭಟನೆ ನಡೆಸಲು ಅನ್ನದಾತರು ಸಜ್ಜಾಗಿದ್ದಾರೆ. ಇದೇ ತಿಂಗಳ 26 ಹಾಗೂ 27ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಈ ಕುರಿತು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ದೆಹಲಿಯಲ್ಲಿ ನವೆಂಬರ್ 26 ಹಾಗೂ 27ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಯುವಕನ ತಲೆಗೆ ಲಾಠಿಯಿಂದ ಹಲ್ಲೆ ನಡೆಸಿರುವ ಪೊಲೀಸರು
ಮೈಸೂರು: ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಪೊಲೀಸರು ಯುವಕನ ತಲೆಗೆ ಲಾಠಿಯಿಂದ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ತಿಪುರ ಚೆಕ್ ಪೊಲೀಸ್ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರು ಯುವಕ ಆಕರ್ಶ್‍ನ ಬೈಕ್‍ನ್ನು ತಡೆದಿದ್ದಾರೆ. ನಾನು ಬೈಕ್ ನಲ್ಲಿ ತೆರಳುತ್ತಿದ್ದಾಗ ಹೆಬ್ಬಾಳ ಠಾಣೆ ಪೇದೆ ಏಕಾಏಕಿ ಏನನ್ನೂ ವಿಚಾರಿಸದೆ, ಬೈಕ್ ನಿಲ್ಲಿಸಲು ಸೂಚಿಸದೆ ಲಾಠಿಯಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ.
ಬೈಕ್ ಸವಾರನ ಮೇಲೆ ಪೊಲೀಸ್ ದೌರ್ಜನ್ಯ: ಏಕಾಏಕಿ ಲಾಠಿಯಿಂದ ಹಲ್ಲೆ ವಿಡಿಯೋ ವೈರಲ್..!
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪತ್ರಕರ್ತರ ಕತ್ತು ಹಿಸುಕಲಾಗ್ತಿದೆ : ರಾಹುಲ್
ನವದೆಹಲಿ : ಅಸ್ಸಾಂನಲ್ಲಿ ಪತ್ರಕರ್ತ ಪರಾಗ್ ಭುಯಾನ್ ಹಿಟ್ ಅಂಡ್ ರನ್ ಅಪಘಾತದಲ್ಲಿ ಮೃತಪಟ್ಟಿದ್ದು, ಇದು ಕೊಲೆ ಎಂದು ಆರೋಪಿಸಲಾಗುತ್ತಿದೆ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರ ಬಯಲಿಗೆಳೆಯುವ ಪತ್ರಕರ್ತರನ್ನು ಸದೆ ಬಡಿಯಲಾಗುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ. “ಬಿಜೆಪಿ ನಾಯಕರ ಭ್ರಷ್ಟಾಚಾರ ಬಯಲಿಗೆಳೆದ ಪತ್ರಕರ್ತರನ್ನು ಅನುಮಾನಾಸ್ಪದವಾಗಿ ಹತ್ಯೆ ಮಾಡಲಾಗಿದೆ. ಅವರ ಕುಟುಂಬಕ್ಕೆ ತನ್ನ ಸಂತಾಪಗಳು. ಇದು ಮಧ್ಯಪ್ರದೇಶ ಅಥವಾ ಉತ್ತರ ಪ್ರದೇಶವಿರಲಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟರನ್ನು ರಕ್ಷಿಸಲು ನೈಜ ಪತ್ರಕರ್ತರ ಕತ್ತು ಹಿಸುಕಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಗುಡ್ ನ್ಯೂಸ್ : ಕೇಂದ್ರದಿಂದ ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ
ನವದೆಹಲಿ : ಪ್ರವಾಹ ಹೊಡೆತಕ್ಕೆ ಸಿಲುಕಿ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿದ್ದು, ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಡಿ 577.84 ಕೋಟಿ ಮುಂಗಡ ಪರಿಹಾರ ಮಂಜೂರು ಮಾಡಿದೆ. ಭಾರೀ ಮಳೆಯಿಂದಾಗಿ ಪ್ರವಾಹದಿಂದಾಗಿ ರಾಜ್ಯದಲ್ಲಿ ಸುಮಾರು 24,941 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಿ, ರಾಜ್ಯ ಸರ್ಕಾರ 10 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿ ಇದೀಗ ಕೇಂದ್ರ ಸರ್ಕಾರ ಮುಂಗಡವಾಗಿ ಎನ್ ಡಿಆರ್ ನಿಧಿಯಿಂದ 577 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ನವಾಜ್ ಶರೀಫ್ ಪುತ್ರಿ ಇದ್ದ ಕೋಣೆಯ ಬಾತ್ ರೂಂನಲ್ಲಿ ಕ್ಯಾಮೆರಾ
ಇಸ್ಲಾಮಾಬಾದ್ : ತಾವು ಜೈಲಿನಲ್ಲಿದ್ದ ವೇಳೆ ಇಮ್ರಾನ್ ಸರ್ಕಾರ ತಮ್ಮ ಕೋಣೆ ಮತ್ತು ಬಾತ್ ರೂಮಿನಲ್ಲಿ ಕ್ಯಾಮೆರಾ ಅಳವಡಿಸಿತ್ತು ಎಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪುತ್ರಿ ಮರಿಯಮ್ ನವಾಜ್ ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡುತ್ತ ತಾವು ಜೈಲಿನಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ. ಸಂದರ್ಶನದಲ್ಲಿ ಮರಿಯಮ್, ಇಮ್ರಾನ್ ಸರ್ಕಾರ ಮಹಿಳೆಯನ್ನ ಅವಮಾನಿಸಿದೆ. ನಾನು ಜೈಲಿನ ಮಹಿಳೆಯರ ಹೇಗೆ ನಡೆದುಕೊಳ್ಳಲಾಗುತ್ತೆ ಎಂಬ ಸತ್ಯ ಹೇಳಿದ್ರೆ ಆಡಳಿತದಲ್ಲಿರೋರಿಗೆ ಮುಖ ತೋರಿಸೋದಕ್ಕೆ ಆಗಲ್ಲ. ಪಾಕಿಸ್ತಾನದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಎಂದು ಆರೋಪಿಸಿದ್ದಾರೆ.
ಕೊರೊನಾ ಪರೀಕ್ಷೆ ಎಡವಟ್ಟು: ಚಿರಂಜೀವಿಗೆ ಕೊರೊನಾ ನೆಗೆಟಿವ್..!
ಟಾಲಿವುಡ್ ಮೆಘಾಸ್ಟಾರ್ ಚಿರಂಜೀವಿಗೆ ಕೊರೊನಾ ಪಾಸಿಟಿವ್ ಇದ್ದದ್ದು, ಇತ್ತೀಚೆಗಷ್ಟೇ ಗೊತ್ತಾಗಿತ್ತು. ಹೀಗಾಗಿ ಚಿರಂಜೀವಿ ಅವರು ಮನೆಯಲ್ಲಿಯೇ ಹೋ ಕ್ವಾರಂಟೈನಲ್ಲಿದ್ದು ರೆಸ್ಟ್ ಮಾಡ್ತಿದ್ರು. ಆದರೆ ಇದೀಗ ಅವರಿಗೆ ಕೋವಿಡ್ ನೆಗೆಟಿವ್ ಬಂದಿದೆ. ಗುರುವಾರ ನಡೆಸಲಾದ ಕೋವಿಡ್-19 ಪರೀಕ್ಷೆಯ ರಿಪೋರ್ಟ್ ನಲ್ಲಿ ನೆಗೆಟಿವ್ ಇರುವುದು ದೃಢವಾಗಿದೆ. ಈ ವಿಚಾರವನ್ನ ನಟ ಚಿರಂಜೀವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ಮೆಗಾ ಸ್ಟಾರ್ ಗೆ ಕೊರೊನಾ ಪಾಸಿಟಿವ್ ಅಂತ ವರದಿ ನೀಡಲಾಗಿತ್ತು. RT PCR ಕಿಟ್ ದೋಷದಿಂದ ಕೊರೊನಾ ಪಾಸಿಟಿವ್ ಎಂದು ಬಂದಿತ್ತು. ಆದರೆ ಕೊರೊನಾ ಸೋಂಕು ಇಲ್ಲದೇ ಇರುವುದಾಗಿ ಇದೀಗ ಚಿರಂಜೀವಿ ಅವರು ಸ್ಪಷ್ಟನೆ ನೀಡಿದ್ದು, ಅಬಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
‘ಅಕ್ಷರ ರಾಕ್ಷಸ’ನ ನಿಧನಕ್ಕೆ ಕಂಬನಿ ಮಿಡಿದ ‘ಕಿಚ್ಚ’
ಆಗಿದ್ದ ರವಿ ಬೆಳಗೆರೆ ಅವರ ನಿಧನಕ್ಕೆ ಸಿನಿಮಾರಂಗದ ಗಣ್ಯರು, ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ. ಅದರಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ‘ಅಕ್ಷರ ಮಾಂತ್ರಿಕ’ನ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ‘ಕೊನೆ ಬಾರಿ ನಾನು ಅವರನ್ನು ನೋಡಿದ ಕ್ಷಣದ ಫೋಟೋ ಅತ್ಯಮೂಲ್ಯವಾಗಿರುತ್ತೆ. ಅದು ಎಲ್ಲಾ ಸ್ಪರ್ಧಿಗಳ ಪಾಲಿಗೂ ಅದ್ಭುತವಾದ ಕ್ಷಣವಾಗಿತ್ತು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನಿಮಗೆ ನೀಡಲಿ’ ಎಂದು ಬಿಗ್ ಬಾಸ್ ನೆನಪನ್ನು ಮೆಲುಕು ಹಾಕಿದ್ದಾರೆ.
Ravi Belagere
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel