Virat kohli | ಐಪಿಎಲ್ ಗೆ ವಿರಾಟ್ ಕೊಹ್ಲಿ ಗುಡ್ ಬೈ..!
ಟೀಂ ಇಂಡಿಯಾದ ಮಾಜಿ ನಾಯಕ, ವಿಶ್ವಕ್ರಿಕೆಟ್ ನ ಕಿಂಗ್ಸ್ ವಿರಾಟ್ ಕೊಹ್ಲಿ 15ನೇ ಸೀಸನ್ ಐಪಿಎಲ್ ನಲ್ಲಿ ಘನಘೋರ ವೈಫಲ್ಯ ಅನುಭವಿಸುತ್ತಿದ್ದಾರೆ.
15ನೇ ಆವೃತ್ತಿಯ ಆರಂಭದಲ್ಲಿ ವಿರಾಟ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ನಿರಾಸೆ ಅನುಭವಿಸಿದ್ದರು.
ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಗೆ ಭಡ್ತಿ ನೀಡಿ ಇನ್ನಿಂಗ್ಸ್ ಆರಂಭಿಸಲು ಅವಕಾಶ ನೀಡಲಾಯ್ತು.
ಆದ್ರೆ ಆಡುವ ಕ್ರಮಾಂಕ ಬದಲಾದ್ರೂ ವಿರಾಟ್ ನಸೀಬು ಬದಲಾಗಲಿಲ್ಲ. ರಾಜಸ್ಥಾನ್ ನೀಡಿದ ಸುಲಭ ಗುರಿಯನ್ನ ಬೆನ್ನತ್ತಿದ್ದ ತಂಡಕ್ಕೆ ಉತ್ತಮ ಆರಂಭ ನೀಡಬೇಕಿದ್ದ ವಿರಾಟ್, ಕೇವಲ 9 ರನ್ ಗಳಿಗೆ ಪ್ರಸಿದ್ಧ ಕೃಷ್ಣಾಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಇದು ತಂಡದ ಮೇಲೆ ಪರಿಣಾಮ ಬೀರಿದ್ದು ಅಲ್ಲದೇ ಸೋಲಿಗೂ ಪ್ರಮುಖ ಕಾರಣವಾಗಿದೆ.
ಅಂದಹಾಗೆ ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮೊದಲು ಮೂರನೇ ಕ್ರಮಾಂಕದಲ್ಲಿ 8 ಪಂದ್ಯಗಳನ್ನಾಡಿದ್ದಾರೆ. ಈ ಪೈಕಿ 17ರ ಸರಾಸರಿಯಲ್ಲಿ 119 ರನ್ ಕಲೆ ಹಾಕಿದ್ದಾರೆ.
ಅಲ್ಲದೆ ಒಂದೇ ಪಂದ್ಯದಲ್ಲಿ 48 ರನ್ ಬಾರಿಸಿ ಮಿಂಚಿದ್ದಾರೆ. ಇವರ ಪ್ರಸಕ್ತ ಸಾಲಿನ ಸ್ಟ್ರೈಕ್ ರೇಟ್ ಸಹ 122.68 ಆಗಿದೆ. ಬೌಂಡರಿ ಸಿಕ್ಸರ್ ಗಳ ಚಿತ್ತಾರ ಬಿಡಿಸುತ್ತಿದ್ದ ಕೊಹ್ಲಿ ಈ ಬಾರಿ ಕೇವಲ 9 ಬೌಂಡರಿ, 2 ಸಿಕ್ಸರ್ ಬಾರಿಸಿದ್ದಾರೆ.

ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಟ್ರೋಲ್ ಗಳು ನಡೆಯುತ್ತಿವೆ. ಅಲ್ಲದೇ ವಿರಾಟ್ ಕೊಹ್ಲಿ ಕ್ರಿಕೆಟ್ ಜೀವನ ಮುಗೀತು ಎನ್ನುತ್ತಾ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.
ಈ ಟೀಕೆಗಳ ನಡುವೆ ಟೀಂ ಇಂಡಿಯಾದ ಮಾಜಿ ಹೆಡ್ ಕೋಚ್ ಹಾಗೂ ಕೊಹ್ಲಿಯ ಆಪ್ತರೂ ಆಗಿರುವ ರವಿಶಾಸ್ತ್ರಿ ವಿರಾಟ್ ಫಾರ್ಮ್ ಬಗ್ಗೆ ಮಾತನಾಡಿದ್ದು, ಆರ್ ಸಿಬಿ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಯಾಕಂದರೇ ರವಿಶಾಸ್ತ್ರಿ ವಿರಾಟ್ ಗೆ ಐಪಿಎಲ್ ಆಡದಂತೆ ಸಲಹೆ ನೀಡಿದ್ದಾರೆ.
ಹೌದು..! ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರೆಯಬೇಕಾದರೇ ವಿರಾಟ್ ಕೊಹ್ಲಿ ಐಪಿಎಲ್ ಗೆ ಗುಡ್ ಬೈ ಹೇಳಬೇಕು.
ನನ್ನ ಸಲಹೆ ಕೇವಲ ಕೊಹ್ಲಿಗೆ ಮಾತ್ರವಲ್ಲ, ಕೊಹ್ಲಿಯಂತೆ ಫಾರ್ಮ್ ಕಳೆದುಕೊಂಡಿರುವ ಆಟಗಾರರು ಕೂಡ ಐಪಿಎಲ್ ನಿಂದ ದೂರ ಇರಿ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಎಲ್ಲಾ ಮಾದರಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಕ್ರಿಕೆಟ್ ಆಡುತ್ತಲೇ ಬಂದಿದ್ದಾರೆ.
ಆತನಿಗೆ ಬ್ರೇಕ್ ಅತ್ಯಗತ್ಯವಾಗಿದೆ. ಈ ವರ್ಷ ವಿರಾಟ್ ಕೊಹ್ಲಿ ಐಪಿಎಲ್ ಆಡುತ್ತಿದ್ದಾರೆ. ಆದ್ರೆ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರೆಯಬೇಕಾದ್ರೆ ಐಪಿಎಲ್ ನಿಂದ ಹೊರಬೇಕು ಎಂದಿದ್ದಾರೆ ರವಿಶಾಸ್ತ್ರಿ.
ಇದು ಆರ್ ಸಿಬಿಯನ್ಸ್ ಗೆ ಆಘಾತ ತಂದೊಡ್ಡಿದ್ದು, ವಿರಾಟ್ ಕೊಹ್ಲಿ ರವಿಶಾಸ್ತ್ರಿಯವರ ಸಲಹೆಗಳನ್ನು ಎಂದಿಗೂ ತಳ್ಳಿ ಹಾಕುವುದಿಲ್ಲ. ಹೀಗಾಗಿ ಶಾಸ್ತ್ರಿ ಮಾತಿನಂತೆ ಐಪಿಎಲ್ ಗೆ ಗುಡ್ ಬೈ ಹೇಳ್ತಾರಾ ಅನ್ನೋ ಆತಂಕ ಎಲ್ಲರಲ್ಲೂ ಮೂಡಿದೆ. ravi-shastri-advice-virat-kohli-pull-out IPL