ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Ravichandran: ರವಿಚಂದ್ರನ್, ರವಿಚಂದ್ರರನ್ನೇ ಗೆಲ್ಲೋಕೆ ಆಗ್ತಿಲ್ಲ… .

ಇಂದು ಏನೇ ಆದರೂ ರವಿಚಂದ್ರನ್, ರವಿಚಂದ್ರನ್ ಅವರನ್ನು ಗೆಲ್ಲೋಕೆ ಆಗ್ತಿಲ್ಲ. ನಾನು ಯಾರಿಗೂ ಕಾಂಪಿಟೇಟರ್ ಅಲ್ಲ, ನನ್ನನ್ನು ನಾನು ಗೆಲ್ಲಬೇಕು. ಎಲ್ಲರೂ ಮೆಚ್ಚುವಂತ ಸಿನಿಮಾವನ್ನು ನಾನು ಮಾಡುತ್ತೇನೆ ಎನ್ನುವ ನಂಬಿಕೆ ನನಗೆ ಇದೆ.. ಜನ ಮತ್ತೆ ಅದೇ ಕ್ರೇಜ್ ನಲ್ಲಿ ನನ್ನ ಸಿನಿಮಾ ನೋಡೋಕೆ ಥಿಯೇಟರ್ ಗೆ ಬಂದೇ ಬರುತ್ತಾರೆ..

Naveen Kumar B C by Naveen Kumar B C
October 11, 2022
in Newsbeat, Cinema, ಮನರಂಜನೆ
Share on FacebookShare on TwitterShare on WhatsappShare on Telegram

Ravichandran : ರವಿಚಂದ್ರನ್, ರವಿಚಂದ್ರನ್ ಅವರನ್ನು ಗೆಲ್ಲೋಕೆ ಆಗ್ತಿಲ್ಲ…..

 

Related posts

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

December 5, 2025
ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

December 5, 2025

ಕ್ರೇಜಿ ಸ್ಟಾರ್ ರವಿಚಂದ್ರನ್…. ಆ ಕಾಲದಲ್ಲಿ ಕ್ರೇಜಿಸ್ಟಾರ್ ಕ್ರೇಜ್ ಹೇಗಿತ್ತು ಅನ್ನೋದನ್ನ ಮತ್ತೆ ಹೇಳೋ ಅವಶ್ಯಕತೆ ಇಲ್ಲ… ಅವರ ಒಂದು ಸಿನಿಮಾ ಬರುತ್ತಿದೆ ಅಂದ್ರೆ ರಾತ್ರಿ ಥಿಯೇಟರ್ ಗಳ ಮುಂದೆ ಜನ ಕ್ಯೂ ನಿಂತಿದ್ದ ದಾಹರಣೆಗಳಿವೆ.. ಥಿಯೇಟರ್ ಗೆ ಜನರು ನಗುತ್ತಿದ್ದರು ರವಿಚಂದ್ರನ್ ಸಿನಿಮಾಗಳಂದ್ರೆ ಆಗ ಅಷ್ಟು ಕ್ರೇಜ್.. ಅದ್ರಲ್ಲೂ ಪ್ರೇಮಲೋಕ ರಣಧೀರ ಸಿನಿಮಾಗಳ ಕ್ರೇಜ್ ಈಗಲೂ ಕಡಿಮೆಯಾಗಿಲ್ಲ.. ಪ್ರೇಮಲೋಕ ಕ್ರಿಯೇಟ್ ಮಾಡಿದ್ದ ಹವಾ..!! ಆ ಸಿನಿಮಾದ ಅಲೆ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿತ್ತು..
ವರ್ಷಗಳ ಕಾಲ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನ ನೀಡಿದ್ದ ರವಿಮಾಮ ಅದಾದ ನಂತರ ಕೊಂಚ ಬಾಕ್ಸ್ ಆಫೀಸ್ ನಲ್ಲಿ ಡಲ್ ಆಗಿಬಿಟ್ಟರು.. ಸಿನಿಮಾಗಳು ಕಡಿಮೆಯಾಯ್ತು.. ಅಂದುಕೊಂಡ ಮಟ್ಟಿಗೆ ಯಾವ ಸಿನಿಮಾಗಳು ಯಶಸ್ಸು ಕಾಣುತ್ತಿರಲಿಲ್ಲ.. ಅದಾದ ನಂತರ ರವಿಚಂದ್ರನ್ ಅವರ ದೃಶ್ಯಂ ಸಿನಿಮಾ ಭಾರೀ ಹಿಟ್ ಆಯ್ತು.. ರವಿಚಂದ್ರನ್ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡರು.. ದೃಶ್ಯಂ 2 ಕೂಡ ಹಿಟ್ ಆಯ್ತು.. ಆಧ್ರೆ ಅವರ ರವಿ ಬೋಪಣ್ಣ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಆಯ್ತು..
ಬೆಳ್ಳಿ ತೆರಯಿಂದ ಕಿರುತೆರೆಗೆ ಬಂದರು.. ರಿಯಾಲಿಟಿ ಶೋಗಳಿಗೆ ಜಡ್ಜ್ ಆದರು.. ಆಧ್ರೆ ರವಿಚಂದ್ರಬ್ ಅವರು ಜೀವನದಲ್ಲಿ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ, ಎಷ್ಟೆಲ್ಲಾ ನಷ್ಟ ಅನುಭವಿಸಿದ್ದಾರೆ ಈ ಎಲ್ಲದರ ಬಗ್ಗೆ ಇತ್ತೀಚೆಗೆ ಕಾಮಿಡಿ ಕಿಲಾಡಿಗಳು , ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಸರಿಗಮಪ ರಿಯಾಲಿಟಿ ಶೋಗಳ ಮಹಾಸಂಚಿಕೆಯ ವೇದಿಕೆ ಮೇಲೆ ಹಂಚಿಕೊಳ್ಳುತ್ತಾ ಭಾವುಕರಾಗಿದ್ದರು..
ರವಿಚಂದ್ರನ್ ಅವರ ಮಾತುಗಳನ್ನ ಕೇಳಿ ಅಲ್ಲಿ ಉಪಸ್ಥಿತರಿದ್ದ ಜಡ್ಜ್ ಗಳು , ನಿರೂಪಕಿ ಅನುಶ್ರೀ , ಪ್ರೇಕ್ಷಕರು ಭಾವುಕರಾಗಿದ್ದಾರೆ.. ಅನುಶ್ರೀ ಅವರಂತೂ ವೇದಿಕೆಯ ಮೇಲೆಯೇ ಕಣ್ಣೀರಿಟ್ಟಿದ್ದಾರೆ.. ರವಿಚಂದ್ರನ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು , ನೆಟ್ಟಿಗರ ಕಣ್ ಒದ್ದೆಯಾಗಿಸಿದೆ..
ಅಂದ್ಹಾಗೆ ಇದು ರವಿಚಂದ್ರನ್ ಅವರ ಮಾತು…
ಪ್ರೇಮಲೋಕ , ರಣಧೀರ ಸಿನಿಮಾಗಳ ಬಗ್ಗೆ ಏನೇ ಬಂದ್ರು ಅದು ನಮ್ಮನ್ನ ಎಲ್ಲಿಗೋ ಕರೆದುಕೊಂಡು ಹೋಗುತ್ತೆ.. ಹಿಂದಕ್ಕೆ ಕರೆದುಕೊಂಡು ಹೋಗುತ್ತೆ.. ಇತ್ತೀಚೆಗೆ ನನ್ನ ಸಿನಿಮಾಗಳನ್ನ ಜನರು ನೋಡುತ್ತಿಲ್ಲವೋ ಅಥವ ಇಷ್ಟಪಡುತ್ತಿಲ್ಲವೋ ಅಂದಾಗ ನನಗೆ ಬೇರೆ ಅವರ ಜೊತೆಗೆ ಕಾಂಪೀಟ್ ಮಾಡೋದಕ್ಕೆ ಆಗುತ್ತಿಲ್ಲ ಅನಿಸೋದಿಲ್ಲ.. ನನಗೆ ಖುದ್ದು ನನ್ನ ಜೊತೆಗೆ ಕಾಂಪೀಟ್ ಮಾಡೋಕೆ ಆಗ್ತಿಲ್ಲ.. ದಕ್ಕಿಂತ ನ್ನೇನು ಮಾಡೋದು ಎಂಬ ಪ್ರಶ್ನೆ ಮೂಡುತ್ತದೆ..
ನಾನು 30 ವರ್ಷದ ಹಿಂದೆಯೇ ಇದನ್ನೆಲ್ಲ ಮಾಡಿ ಬಿಟ್ಟಿದ್ದೇನೆ, ಈಗ ನಾನು ಏನೇ ಮಾಡಿದರೂ ಚಿಕ್ಕದಾಗಿ ಕಾಣುತ್ತಿದೆ. 20 ವರ್ಷದಿಂದ ನನ್ನ ಮನಸ್ಸಿಗೆ ಬಂದದ್ದೇ ನಾನು ಮಾಡಿದ್ದು, ಈ ಮನಸ್ಸಿಂದ ಮಾಡಿರುವುದು ಹೋಗ್ತ ಹೋಗ್ತ ಪಾತ್ರವಾಗಿ ನಮ್ಮೊಳಗೆ ಸೇರಿಕೊಳ್ಳತ್ತೆ.
ಕಳಕಳಿಯಿಂದ, ಲವಲವಿಕೆಯಿಂದ ಸಿನಿಮಾ ಮಾಡುವ ವಿಧ ಇರತ್ತೆ, ಲವಲವಿಕೆಯಿಂದ ಸಿನಿಮಾ ಮಾಡುತ್ತಿದ್ದವನು ನಾನು. ಕಟೌಟ್‌ ನಲ್ಲಿ ಹಾರ ಬಿದ್ದರೆ ಇಷ್ಟ ಆಗಲ್ಲ, ಥಿಯೇಟರ್‌ ನಲ್ಲಿ ಜನ ಇಲ್ಲ ಅಂದರೆ ಕಪಾಳಕ್ಕೆ ಹೊಡೆದಷ್ಟು ಬೇಜಾರಾಗುತ್ತದೆ.

ನಾನು ಈ ವೇದಿಕೆಗೆ ಬಂದಿರೋದು ನನ್ನನ್ನು ಬದಲಾಯಿಸಿಕೊಳ್ಳೋಕೆ. ನಾನು ಇನ್ನು ಏಕಾಂಗಿ ಪಾತ್ರ ಮಾಡೋದಿಲ್ಲ, ಒಬ್ಬರೇ ಖುಷಿಯಾಗಿರಿ ಎನ್ನುತ್ತಿದ್ದೆ, ಈಗ ಎಲ್ಲರೂ ಖುಷಿಯಾಗಿರೋಣ ಅಂತ ಹೇಳುವೆ. ಒಂದು ತಿಂಗಳ ಹಿಂದೆ ನಾನು ಮನೆ ಖಾಲಿ ಮಾಡಿದಾಗ, ದುಡ್ಡು ಕಳೆದುಕೊಂಡ, ಮನೆ ಖಾಲಿ ಮಾಡಿದ ಅಂತ ಕೆಲವರು ಹೇಳಿದರು. ನಾನು ಈಗ ದುಡ್ಡು ಕಳೆದುಕೊಂಡಿಲ್ಲ, 30 ವರ್ಷದಿಂದ ನಿಮಗೋಸ್ಕರ, ನಿಮ್ಮನ್ನು ಮೆಚ್ಚಿಸಲು ದುಡ್ಡು ಕಳೆದುಕೊಂಡೆ.
ಇಂದು ಏನೇ ಆದರೂ ರವಿಚಂದ್ರನ್, ರವಿಚಂದ್ರನ್ ಅವರನ್ನು ಗೆಲ್ಲೋಕೆ ಆಗ್ತಿಲ್ಲ. ನಾನು ಯಾರಿಗೂ ಕಾಂಪಿಟೇಟರ್ ಅಲ್ಲ, ನನ್ನನ್ನು ನಾನು ಗೆಲ್ಲಬೇಕು. ಎಲ್ಲರೂ ಮೆಚ್ಚುವಂತ ಸಿನಿಮಾವನ್ನು ನಾನು ಮಾಡುತ್ತೇನೆ ಎನ್ನುವ ನಂಬಿಕೆ ನನಗೆ ಇದೆ.. ಜನ ಮತ್ತೆ ಅದೇ ಕ್ರೇಜ್ ನಲ್ಲಿ ನನ್ನ ಸಿನಿಮಾ ನೋಡೋಕೆ ಥಿಯೇಟರ್ ಗೆ ಬಂದೇ ಬರುತ್ತಾರೆ..
ದುಡ್ಡಿಗಾಗಿ ನಾನು ದುಡಿಯಲಿಲ್ಲ. ನಾನು ಇಂದು ಸಂಪಾದನೆ ಮಾಡುತ್ತಿರುವುದು, ಯಾಕೆ ಇಲ್ಲಿಗೆ ಬಂದು ಕೂರುತ್ತೀನಿ ಅಂದರೆ ನನಗೆ ಹಣ ಬೇಕು, ನಾನು ಐಷಾರಾಮಿಯಾಗಿ ಬದುಕಲಿಕ್ಕೆ ನನಗೆ ಹಣ ಬೇಡ.. ಅದಕ್ಕಾಗಿ ನಾನು ಸಂಪಾದನೆ ಮಾಡುತ್ತಿಲ್ಲ, ಅದ್ದೂರಿಯಾಗಿ ಸಿನಿಮಾ ಮಾಡಲು ದುಡಿಯುತ್ತಿದ್ದೇನೆ.
ನಾನು ಆಗ ಯಾವ ಹುಡುಗನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದೆನೋ ಅವನು ಇವತ್ತು 1.5 ಕೋಟಿ ರೂಪಾಯಿ ಕೊಟ್ಟು ಅವನ ಸಿನಿಮಾದಲ್ಲಿ ನಟಿಸಲು ನನ್ನ ಕರೆಯುತ್ತಾನೆ ಎನ್ನುವಷ್ಟರ ಮಟ್ಟಿಗೆ ನನ್ನ ಜೊತೆಯಲ್ಲಿರುವ ಹುಡುಗರು ಬೆಳೆದಿದ್ದಾರೆ. ಇದಕ್ಕಿಂತ ನ್ನೇನು ಬೇಕು ನನಗೆ..
ಮಾತೆತ್ತಿದರೆ ಪ್ರೇಮಲೋಕ , ರಣಧೀರ ಅಂತ ಹೇಳ್ತಾರೆ ಇವರು ಅಂತ ಕೆಲವರು ಲೇವಡಿ ಮಾಡ್ತಾರೆ.. ನೀವು ಹುಟ್ಟಿಸಿದ ಅಪ್ಪ ಅಮ್ಮನನ್ನು ಬದಲಾಯಿಸೋಕೆ ಆಗತ್ತಾ.. ಅದೇ ನಮ್ಮನ್ನು ಇಲ್ಲಿಯವರೆಗೆ ಕರೆದುಕೊಂಡು ಬಿಟ್ಟಿದೆ. ಆ ಸಿನಿಮಾ ನೋಡಿ ನಿಮ್ಮ ಅಪ್ಪ ಅಮ್ಮ ಪ್ರೀತಿಸಲು ಶುರು ಮಾಡಿದರು.
ನನ್ನ ಜೀವನದಲ್ಲಿ ಭಯ ಅನ್ನೋದು ಇರಲಿಲ್ಲ. ಆದರೆ ನನಗೆ ಮಕ್ಕಳು ಹುಟ್ಟಿದಾಗ ಭಯವಾಯ್ತು.. ಇಲ್ಲಿಯವರೆಗೂ ಆಗಿದ್ದಾಯ್ತು.. ಮುಂದೆ ಅವರಿಗೇನು..?? ಅವರಿಗಾಗಿ ಏನೂ ಮಾಡಿಲ್ವಲ್ಲ ಯೋಚನೆ ಬಂದಾಗ ಭಯವಾಯ್ತು.. ನಾವು ಹೇಗೋ ಬದುಕುಬಿಡ್ತೀವಿ, ಮಕ್ಕಳಿಗೋಸ್ಕರ ಏನಾದರೂ ಮಾಡಬೇಕಲ್ಲವಾ ಎಂದು ಅನಿಸುತ್ತದೆ.
ಕಂಠೀರವ ಪಕ್ಕ ಒಂದು ಎಕರೆಗೆ ಆಗ 10000 ರೂಪಾಯಿ. ನಾನು 10000 ಸಾವಿರ ಎಕರೆ ಖರೀದಿ ಮಾಡಿದ್ದರೆ ಆ ಆಸ್ತಿಗೂ ನಿಮಗೂ ಏನು ಸಂಬಂಧ ಅದನ್ನು ನೋಡಿ ನೀವು ನನ್ನನ್ನು ಪ್ರೀತಿಸಿದರೆ ಆ ಪ್ರೀತಿ ಬೇಡ ನಂಗೆ, ಜೀವನವೂ ಬೇಡ ನಂಗೆ. ನನ್ನ ಮುಖ ನೋಡಿ ಪ್ರೀತಿಸಿದರೆ ಜೀವನ ಪೂರ್ತಿ ನಿಮ್ಮ ಕಾಲಡಿ ಬಿದ್ದಿರ್ತೀನಿ… ಎಂದಿದ್ದು ಭಾವುಕರಾಗಿದ್ದಾರೆ.. ರವಿಚಂದ್ರನ್ ಅವರ ಮಾತು ಕೇಳಿ ಆಡಿಯನ್ಸ್ ಕೂಡ ಭಾವುಕರಾಗಿ ಜೋರಾಗಿ ಚಪ್ಪಾಳೆ ತಟ್ಟುತ್ತಾ ರವಿಮಾಮನನ್ನ ಹುರಿದುಂಬಿಸಿದ್ದಾರೆ.

Ravichandran : Sandalwood hero Ravichandran emotional word

Tags: #RavichandranSandalwood
ShareTweetSendShare
Join us on:

Related Posts

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

by admin
December 5, 2025
0

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ...! ಅಡಕೆ ಕೃಷಿ ನಮ್ಮ ಜೀವಾಳ..ಇಡೀ ಕರಾವಳಿ, ಮಲೆನಾಡು ಕೃಷಿಕರ ಬದುಕನ್ನು ಹಸನಾಗಿಸಿರೋದು ಇದೇ ಅಡಕೆ ಬೆಳೆ. ಹೌದು.. ಹಚ್ಚ ಹಸಿರಿನಿಂದ ಕಂಗೊಳಿಸುವ...

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

by Shwetha
December 5, 2025
0

ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಎಂದು ಸುಳ್ಳು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ತೊಟ್ಟಿಯಲ್ಲಿ ಮುಳುಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ...

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

by Shwetha
December 5, 2025
0

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವ ಹಿನ್ನೆಲೆ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಿಡಿ ಕಾರಿದ್ದಾರೆ. ರೂಪಾಯಿ...

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

by Shwetha
December 5, 2025
0

ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಸೈಬರ್​ ಭದ್ರತಾ ಆಪ್ ಅನ್ನು ಕಡ್ಡಾಯವಾಗಿ ಪೂರ್ವ ಅಳವಡಿಕೆ ಮಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಇದೀಗ ಹಿಂಪಡೆಯಲಾಗಿದೆ. ಈ...

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಎನ್‌ಪಿಎಸ್ ರದ್ದು, ಹಳೆ ಪಿಂಚಣಿ ಮರುಜಾರಿ ವರದಿ ಸಿದ್ಧ; ಶೀಘ್ರದಲ್ಲೇ ಅಂತಿಮ ನಿರ್ಧಾರ

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಎನ್‌ಪಿಎಸ್ ರದ್ದು, ಹಳೆ ಪಿಂಚಣಿ ಮರುಜಾರಿ ವರದಿ ಸಿದ್ಧ; ಶೀಘ್ರದಲ್ಲೇ ಅಂತಿಮ ನಿರ್ಧಾರ

by Shwetha
December 5, 2025
0

ಬೆಂಗಳೂರು: ಕರ್ನಾಟಕದ ಲಕ್ಷಾಂತರ ಸರ್ಕಾರಿ ನೌಕರರ ಪಾಲಿಗೆ ಅತ್ಯಂತ ಮಹತ್ವದ ಮತ್ತು ಬಹುದಿನದ ನಿರೀಕ್ಷೆಯೊಂದು ಅಂತಿಮ ಹಂತಕ್ಕೆ ತಲುಪಿದೆ. ನೌಕರರ ಬದುಕಿನ ಸಂಧ್ಯಾಕಾಲದ ಆರ್ಥಿಕ ಭದ್ರತೆಯ ಪ್ರಶ್ನೆಯಾಗಿರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram