RCB ABD Villiers-ಕಾಂತಾರವನ್ನ ಸಿನಿಮಾ ತಾರೆಯರು , ರಾಜಕಾರಣಿಗಳು ಜನ ಮೆಚ್ಚಿಯಾಯ್ತು.. ಈಗ ವಿದೇಶಿ ಕ್ರಿಕೆಟಿಗರು ಅದ್ರಲ್ಲೂ RCB ಯ ಕ್ರಿಕೆಟ್ ಅಭಿಮಾನಿಗಳ ಫೇವರೇಟ್ 360 ಡಿಗ್ರಿ ಬ್ಯಾಟ್ಸ್ ಮೆನ್ ಎಬಿಡಿ ವಿಲ್ಲರ್ಸ್ ಗೂ ಕಾಂತಾರಾ ಕ್ರೇಜ್ ಹಿಡಿಸಿದ್ದಾರೆ ರಿಷಬ್ ಶೆಟ್ರು…!!
ಹೌದು..!!
ಕರಾವಳಿ ಸೊಗಡು , ನಮ್ಮ ನೆಲ ,ಜಲ , ಇಲ್ಲಿನ ಸಂಸ್ಕೃತಿಯ ಅಚ್ಚುಕಟ್ಟಾಗಿ ಅನಾವರಣ ಮಾಡಿರುವ ಕಾಂತಾರ ಸಿನಿಮಾ ದಿನಕ್ಕೊಂದು ದಾಖಲೆ ಬರೆಯುತ್ತಾ , ಬಾಕ್ಸ್ ಆಫೀಸ್ ಲೂಟಿ ಮಾಡ್ತಿದೆ.. 16 ಕೋಟಿ ಬಜೆಟ್ ಸಿನಿಮಾ 300 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿಯೂ ಇನ್ನೂ ಥಿಯೇಟರ್ ಗಳಲ್ಲಿ ಅಬ್ಬರ ಮುಂದುವರೆಇಸಿದೆ ಅಂದ್ರೆ ಸಾಮಾನ್ಯದ ಮಾತಲ್ಲ..
ಸಿನಿಮಾ ಯುಗದಲ್ಲಿ ಹೊಸ ರಾ ಕಾಂತಾರ.. ಇದೀಗ ಬೆಂಗಳೂರಿಗೆ ಆಗಮಿಸಿದ್ದ ಆರ್ ಸಿಬಿ ಆಟಗಾರ ಎಬಿಡಿ ವಿಲಿಯರ್ಸ್ ಅವರು ಕಾಂತಾರ ಸಿನಿಮಾದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಭೇಟಿ ಆಗಿದ್ದಾರೆ. ಅಲ್ಲದೇ ಈ ವೇಳೆ ರಿಷಬ್ ಮತ್ತು ಎಬಿಡಿ ಇಬ್ಬರೂ ಕಾಂತಾರ ಚಿತ್ರದ ಡೈಲಾಗ್ ಹೇಳಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗ್ತಿದೆ..
ಈ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇದು ಪಂದ್ಯ. ನಿಜವಾದ 360ಯನ್ನು ಇಂದು ಭೇಟಿ ಮಾಡಿದ್ದೇನೆ. ನಮ್ಮ ಬೆಂಗಳೂರಿಗೆ ಸೂಪರ್ ಹೀರೋ ಮರಳಿ ಬಂದಿದ್ದಾರೆ’ ಎಂದು ರಿಷಬ್ ಶೆಟ್ಟಿ ಅವರು ಬರೆದುಕೊಂಡಿದ್ದಾರೆ.
ಇನ್ನು, ಆರ್ಸಿಬಿ ಆಟಗಾರ ಮತ್ತು ದಕ್ಷಿಣ ಆಪ್ರಿಕಾ ಮಾಜಿ ಆಟಗಾರ ಮಿಸ್ಟರ್ 360 ಖ್ಯಾತಿಯ ಎಬಿಡಿ ವಿಲಿಯರ್ಸ್ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಆದರೆ ಅವರು ಐಪಿಎಲ್ ಹರಾಜಿಗೂ ಮುನ್ನ ಬಂದಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ..
ಅಂದ್ಹಾಗೆ ಸಿನಿಮಾದಲ್ಲಿ ಕ್ಲೈಮಾಕ್ಸ್ ನೋಈಡಿಯೇ ಜನ ಥ್ರಿಲ್ ಗೊಂಡಿದ್ದು , ರಿಷಬ್ ಶೆಟ್ಟಿ ಕ್ಲೈಮಾಕ್ಸ್ ತಜ್ಞ ಎನ್ನಬಹುದು,, ಇನ್ನೂ ವಿಲ್ಲರ್ಸ್ ಕೂಡ ಕ್ಲೈಮ್ಯಾಕ್ಸ್ ತಜ್ಞ ಅಂತಲೇ ಹೆಸರುವಾಸಿ.. ಇಬ್ಬರೂ ಮ್ಯಾಚ್ ಫಿನಿಷರ್ ಗಳ ಟ್ಟಿಗೆ ಕಂಡು ಕ್ರಿಕೆಟ್ , ಸಿನಿಮಾ ಅಭಿಮಾನಿಗಳು ಅದ್ರಲ್ಲೂ ಆರ್ ಸಿ ಬಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ..