ಐಪಿಎಲ್ 17ನೇ ಆವೃತ್ತಿಯಲ್ಲಿ ಆರ್ ಸಿಬಿ ತಂಡ ಕಳಪೆ ಪ್ರದರ್ಶನ ತೋರುತ್ತಿದ್ದು, ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.
ಈಗಾಗಲೇ ಬೆಂಗಳೂರು ತಂಡ ಆಡಿದ 5 ಪಂದ್ಯಗಳಲ್ಲಿ 4 ರಲ್ಲಿ ಸೋತಿದೆ. ಈ ಹಿಂದೆ ಸಿಎಸ್ಕೆ, ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಿದ್ದರೆ ಈಗ ರಾಜಸ್ಥಾನ್ ವಿರುದ್ಧ ಸೋಲು ಕಂಡಿದೆ. ಹೀಗಾಗಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದು, ಅದರಲ್ಲೂ ವಿರಾಟ್ ಕೊಹ್ಲಿ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿರುವುದು. ಅಂದರೆ ಐಪಿಎಲ್ ಇತಿಹಾಸದಲ್ಲಿ 8 ಶತಕ ಬಾರಿಸಿ ದಾಖಲೆ ಬರೆದಿರುವ ಕೊಹ್ಲಿ ಇದೇ ಮೊದಲ ಬಾರಿಗೆ ಅತ್ಯಂತ ನಿಧಾನಗತಿ ಬ್ಯಾಟ್ ಮಾಡಿದ್ದಾರೆ. ಒಟ್ಟು 11.1 ಓವರ್ ತೆಗೆದುಕೊಂಡು ಅಂದರೆ 67 ಎಸೆತ ಎದುರಿಸಿ ಶತಕ ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ನಿಧಾನಗತಿಯಲ್ಲಿ ಶತಕ ಸಿಡಿಸಿ ಕಳಪೆ ದಾಖಲೆ ಬರೆದಿದ್ದ ಮನೀಶ್ ಪಾಂಡೆ ದಾಖಲೆ ಸರಿಗಟ್ಟಿದ್ದಾರೆ. ಈ ಕೆಟ್ಟ ದಾಖಲೆ ಈಗ ಅಭಿಮಾನಿಗಳು ಆಕ್ರೋಶಕ್ಕೆ ಕಾರಣವಾಗಿದೆ.
ಇದು ಬ್ಯಾಟಿಂಗ್ ಪಿಚ್ ಆಗಿತ್ತು. ವಿರಾಟ್ ಗೆ ಯಾವುದೇ ಒತ್ತಡ ಇರಲಿಲ್ಲ. ಅವರು ಇನ್ನೂ ವೇಗವಾಗಿ ಬ್ಯಾಟ್ ಬೀಸಬಹುದಿತ್ತು. ರನ್ ಕಲೆ ಹಾಕಬೇಕಿತ್ತು. ವಿಕೆಟ್ ಕೂಡ ಹೆಚ್ಚು ಬಿದ್ದಿಲ್ಲ. ಆದರೆ, ಸ್ಕೋರ್ ಮಾತ್ರ ತುಂಬಾ ಕಡಿಮೆಯಾಗಿದೆ ಎಂಬುವುದು ಅಭಿಮಾನಿಗಳ ಆರೋಪ ಹಾಗೂ ಬೇಸರ.
ಇನ್ನೊಂದೆಡೆ ರನ್ ಚೇಸ್ ಮಾಡುತ್ತಿದ್ದರೂ ಒತ್ತಡ ಇದ್ದರೂ ರಾಜಸ್ಥಾನ್ ತಂಡದ ಜೋಸ್ ಬಟ್ಲರ್ 58 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಇನ್ನೊಂದೆಡೆ ಕೈಯಲ್ಲಿ ವಿಕೆಟ್ ಗಳಿದ್ದವು. ಆದರೂ ಕೊಹ್ಲಿ ಸೆಂಚುರಿ ಕಡೆ ಗಮನ ನೀಡಿದರೆ ಹೊರತೂ ತಂಡದ ರನ್ ಹೆಚ್ಚಿಸಲಿಲ್ಲ. ಕೊನೆಯ ಓವರ್ ಗಳಲ್ಲಿ ವೇಗದಿಂದ ರನ್ ಗಳಿಸಲಿಲ್ಲ. ಇದು ಸ್ಕೋರ್ ಮೇಲೆ ಪರಿಣಾಮ ಬೀರಿತು ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ.
ಅಂತಿಮ 5 ಓವರ್ ಗಳ ವಿರಾಟ್ ಬ್ಯಾಟ್ ಬಿರುಸಾಗಿದ್ದರೆ 200 ರನ್ ಗಳ ಗಡಿ ದಾಟಬಹುದಿತ್ತ. ಕೊನೆಯ 2 ಓವರ್ಗಳಲ್ಲಿ ಆರ್ಸಿಬಿ ಕೇವಲ 18 ರನ್ ಗಳಿಸಿದೆ. 19ನೇ ಓವರ್ನಲ್ಲಿ ತಮ್ಮ ಶತಕ ಪೂರೈಸಲು ಹೆಚ್ಚಿನ ಒತ್ತು ನೀಡಿದ್ದರು. ಹೀಗಾಗಿಯೇ ಸ್ಕೋರ್ ಇಳಿಕೆಯಾಯಿತು ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ವಿರಾಟ್ ಮೇಲೆ ಹಾಕುತ್ತಿದ್ದಾರೆ.