ಪ್ರಾದೇಶಿಕ ಪಕ್ಷಗಳಿಗೆ ಈ ದೇಶದಲ್ಲಿ ಯಾವತ್ತೂ ಸ್ಥಾನ ಇಲ್ಲ: ಈಶ್ವರಪ್ಪ

1 min read
eshwarappa saaksha tv

ಪ್ರಾದೇಶಿಕ ಪಕ್ಷಗಳಿಗೆ ಈ ದೇಶದಲ್ಲಿ ಯಾವತ್ತೂ ಸ್ಥಾನ ಇಲ್ಲ: ಈಶ್ವರಪ್ಪ

ಶಿವಮೊಗ್ಗ : ಈ ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಯಾವತ್ತೂ ಸ್ಥಾನ ಇಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶದ ಪ್ರಕಟವಾಗಿದೆ.

ಸಿಂದಗಿಯಲ್ಲಿ ಬಿಜೆಪಿ ವಿಸಿಲ್ ಹಾಕಿದ್ರೇ ಹಾನಗಲ್ ನಲ್ಲಿ ಕಾಂಗ್ರೆಸ್ ಕೇಕೆ ಹಾಕಿದೆ.

ಆದ್ರೆ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಮಕಾಡೆ ಮಲಗಿದೆ. ಅದರಲ್ಲೂ ಠೇವಣಿ ಕಳೆದುಕೊಂಡಿದೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಪ್ರಾದೇಶಿಕ ಪಕ್ಷಗಳಿಗೆ ಈ ದೇಶದಲ್ಲಿ ಯಾವತ್ತೂ ಸ್ಥಾನ ಇಲ್ಲ ಎಂಬುದು ಯಾವೊತ್ತೋ ಗೊತ್ತಾಗಿದೆ.

ಈಗ ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದು ಕುಟುಕಿದ್ದಾರೆ.

 Ishwarappa saaksha tv

ಇನ್ನು ಹಾನಗಲ್ ನಲ್ಲಿ ಬಿಜೆಪಿ ಸೋಲಿನ ಬಗ್ಗೆ ಮಾತನಾಡಿ, ಕುಟು ಕುಟು ಅಂತಾ ಸಾಯುತ್ತಿರುವ ಕಾಂಗ್ರೆಸ್ ಗೆ ಬದುಕಲಿ ಎಂದು ಹಾನಗಲ್ ಜನ ದಯೆ ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಅಲ್ಲದೆ 2023ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಸಾಮೂಹಿಕ ಓಡಾಟ ಮಾಡಿ ಸ್ಪಷ್ಟ ಬಹುಮತ ಪಡೆದು 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd