ಕಡಬ : ಧರ್ಮ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

1 min read
Dharma Nimotsava

ಕಡಬ : ಧರ್ಮ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಡಬ : ತಾಲೂಕಿನ ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರು ಧರ್ಮ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಧರ್ಮ ನೇಮೋತ್ಸದ ಎಪ್ರಿಲ್ ಆರರಿಂದ 9ರ ವರೆಗೆ ನಡೆಯಲಿದೆ.

ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಧರ್ಮನೇಮೋತ್ಸವ ಕುಂಜಾಡಿ ತರವಾಡಿನ ನೇಮೋತ್ಸವವಾಗದೇ ಇಡೀ ಊರಿನ ಹಬ್ಬವಾಗಬೇಕು.

Dharma Nimotsava

ಈ ದಿಸೆಯಲ್ಲಿ ಧರ್ಮನೇಮೋತ್ಸವಕ್ಕೆ ಜಿಲ್ಲೆಯ ಎಲ್ಲಾ ಬಂಧುಗಳನ್ನ ಆಹ್ವಾನಿಸಲಾಗುತ್ತದೆ. ಈ ನೇಮೋತ್ಸವದಲ್ಲಿ ಹಿಂದೂಗಳ ಐಕ್ಯತೆಯ ಉತ್ಸವವಾಗಬೇಕಿದೆ ಎಂದು ತಿಳಿಸಿದ್ರು.

ಅಲ್ಲದೆ ಈ ನೇಮೋತ್ಸವದ ಯಶಸ್ವಿಗಾಗಿ ಎಲ್ಲರು ಕೈ ಜೋಡಿಸಬೇಕು ಎಂದು ಕರೆ ಕೊಟ್ಟ ಕಟೀಲ್, ಕಾರ್ಯಕ್ರಮಕ್ಕೆ ದೇಣಿಗೆ, ಹೊರೆ ಕಾಣಿಕೆಯನ್ನ ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ರು.

ಇನ್ನು ಈ ಕಾರ್ಯಕ್ರಮದಲ್ಲಿ ಕುಂಜಾಡಿ ಮಂಜುನಾಥ್ ರೈ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಟಿ. ಸುವರ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd