ತ್ರಿವಳಿ ತಲಾಕ್ ನಂತೆ ಬುರ್ಖಾವನ್ನ ನಿಷೇಧಿಸಬೇಕು : ರಿಷಿ ಕುಮಾರ್ ಶ್ರೀ
ಮೈಸೂರು : ತ್ರಿಬಲ್ ತಲಾಕ್ ನಿಷೇಧ ಮಾಡಿದ ರೀತಿಯಲ್ಲಿಯೇ ಬುರ್ಖಾವನ್ನು ನಿಷೇಧ ಮಾಡಬೇಕು ಎಂದು ಚಿಕ್ಕಮಗಳೂರಿನ ಕಾಳಿ ಮಠದ ರಿಷಿ ಕುಮಾರ್ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. rishi-kumara-swamiji press meet in mysore saaksha tv
ಬುರ್ಕಾ ವಿವಾದ ಬಗ್ಗೆ ಮೈಸೂರಿನ ಪ್ಲೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯಲ್ಲಿ ಎಲ್ಲರೂ ಸಮವಸ್ತ್ರವನ್ನು ಪಾಲಿಸುತ್ತಾರೆ.
ಆದ್ರೆ ಬುರ್ಖಾ ಹಾಕಿಕೊಂಡು ಬರೋದ್ರಿಂದ ನೀವು ಬರ್ತೀರೋ ಅಥವಾ ನಿಮ್ಮ ಅಕ್ಕ – ತಂಗಿ ಬರ್ತೀರೋ ಹೇಗೆ ಗೊತ್ತಾಗುತ್ತದೆ..? ಎಂದು ಪ್ರಶ್ನಿಸಿದರು.
ಅಲ್ಲದೇ ಶಿಕ್ಷಕರು ತಂದೆ-ತಾಯಿಗೆ ಸಮಾನ, ಸಹಪಾಠಿಗಳು ಸಹೋದರಿದಂತೆ, ನೀವು ಹೀಗೆ ಬುರ್ಖಾ ಹಾಕಿಕೊಂಡು ಬಂದರೇ ಅವರಿಗೆ ಅವಮಾನ ಮಾಡಿದಂತೆ.
ಹೀಗಾಗಿ ಶಾಲೆಗಳಲ್ಲಿ ಬುರ್ಖಾವನ್ನು ನಿಷೇಧ ಮಾಡುವುದಲ್ಲದೇ ತಲಾಕ್ ರಂತೆ ಇದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಇದೇ ವೇಳೆ ತಮ್ಮ ಹೇಳಿಕೆ ಬದ್ಧ ಎಂದ ರಿಷಿ ಕುಮಾರ್ ಶ್ರೀ, ಶ್ರೀರಂಗಪಟ್ಟಣದ ಮಸೀದಿ ತೆರವು ಮಾಡಿ ಅಲ್ಲಿ ಹನುಮನ ದೇವಸ್ಥಾನ ಕಟ್ಟಬೇಕು ಎಂದು ಆಗ್ರಹಿಸಿದ್ದಾರೆ.