Rohit Sharma | ಹೊಸ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ!
ಏಷ್ಯಾಕಪ್ ನಲ್ಲಿ ದಾಖಲೆ ಬರೆದ ಹಿಟ್ ಮ್ಯಾನ್
ಏಷ್ಯಾಕಪ್ ನಲ್ಲಿ 28ನೇ ಪಂದ್ಯವಾಡಿದ ರೋಹಿತ್
ಅತ್ಯಧಿಕ ಪಂದ್ಯಗಳನ್ನಾಡಿದ ಭಾರತೀಯ ಪ್ಲೇಯರ್
ಮಹೇಲ ಜಯವರ್ಧನೆ ದಾಖಲೆ ಸರಿಗಟ್ಟಿದ ಶರ್ಮಾ
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಭಾರತದ ಪರ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.
ಏಷ್ಯಾಕಪ್ ಭಾಗವಾಗಿ ಭಾರತ ತಂಡ ಪಾಕ್ ವಿರುದ್ಧ ಸೆಣಸಿ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ದಾಖಲೆ ಪುಟ ಸೇರಿದ್ದಾರೆ.
ರೋಹಿತ್ ಶರ್ಮಾ 2008ರಿಂದ ಏಷ್ಯಾಕಪ್ ಆಡುತ್ತಿದ್ದಾರೆ.
ಅವರಿಗೆ ಪಾಕಿಸ್ತಾನ ವಿರುದ್ಧದ ಪಂದ್ಯ 28ನೇ ಯದ್ದು.
ಇದರೊಂದಿಗೆ ಏಷ್ಯಾಕಪ್ ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ಟೀಂ ಇಂಡಿಯಾದ ಆಟಗಾರ ಎನಿಸಿಕೊಂಡಿದ್ದಾರೆ.

ಅಲ್ಲದೆ ಏಷ್ಯಾಕಪ್ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಶ್ರೀಲಂಕಾದ ಮಹೇಲ ಜಯವರ್ಧನೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಶ್ರೀಲಂಕಾದ ಬ್ಯಾಟರ್ ಮಹೇಲಾ, ಏಷ್ಯಾಕಪ್ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದಾರೆ.
ಲಂಕಾ ತಂಡದ ಮಾಜಿ ನಾಯಕ ಜಯವರ್ಧನೆ 28 ಏಷ್ಯಾಕಪ್ ಪಂದ್ಯಗಳನ್ನಾಡಿದ್ದರು.
ಇದೀಗ ರೋಹಿತ್ ಶರ್ಮಾ ಈ ದಾಖಲೆಯನ್ನು ಸರಿಗಟ್ಟುವ ಮೂಲಕ ಹೊಸ ಇತಿಹಾಸ ನಿರ್ಮಿಸುವತ್ತ ಹೆಜ್ಜೆಯಿನ್ನಿಟ್ಟಿದ್ದಾರೆ.
ರೋಹಿತ್ ಶರ್ಮಾ ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿದರೆ ಅತೀ ಹೆಚ್ಚು ಏಷ್ಯಾಕಪ್ ಪಂದ್ಯವಾಡಿದ ಹೊಸ ದಾಖಲೆ ಬರೆಯಲಿದ್ದಾರೆ.








