RR vs KKR Match | ರಾಯಲ್ ತಂಡದ playing 11
1 min read
lsg-vs-rr-match-RR beat LGS saaksha tv
RR vs KKR Match | ರಾಯಲ್ ತಂಡದ playing 11
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 30ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಗೆಲುವಿಗಾಗಿ ಗುದ್ದಾಟ ನಡೆಸಲಿವೆ.
ರಾಜಸ್ತಾನ ರಾಯಲ್ಸ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸ್ಥಿರ ಪ್ರದರ್ಶನ ನೀಡಬೇಕಿದೆ.
ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್ ಉತ್ತಮ ಆರಂಭವನ್ನು ನೀಡಿದ್ರೆ, ನಾಯಕ ಸಂಜು ಸ್ಯಾಮ್ಸನ್, ರಸೆಯ್ ವಾನ್ ಡೆರ್ ಡುಸೆನ್ ಮತ್ತು ಶಿಮ್ರೋನ್ ಹೆಟ್ಮೇರ್ ಪಂದ್ಯದ ಗತಿಯನ್ನು ಬದಲಾಯಿಸುವಂತಹ ಸಾಮಥ್ರ್ಯವಿದೆ.
ಅದೇ ರೀತಿ ರಿಯಾನ್ ಪರಾಗ್ ಬದಲು ಕರುಣ್ ನಾಯರ್ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಬೌಲಿಂಗ್ ನಲ್ಲಿ ಆರ್. ಅಶ್ವಿನ್ ಮತ್ತು ಯುಜುವೇಂದ್ರ ಚಾಹಲ್ ಅವರ ಸ್ಪಿನ್ ಮ್ಯಾಜಿಕ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಜೇಮ್ಸ್ ನಿಶಾಮ್, ಪ್ರಸಿದ್ಧ್ ಕೃಷ್ಣ ಮತ್ತು ಕುಲದೀಪ್ ಸೇನ್ ತಂಡದಲ್ಲಿರುವ ವೇಗದ ಅಸ್ತ್ರಗಳು.
ಇನ್ನು ಕೆಕೆಆರ್ ತಂಡದಲ್ಲಿ ಫೇಮಸ್ ಆಟಗಾರರು ಇದ್ರೂ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಆರೋನ್ ಫಿಂಚ್ ಮತ್ತು ವೆಂಕಟೇಶ್ ಅಯ್ಯರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಆಂಡ್ರೂ ರಸೆಲ್, ನಿತೇಶ್ ರಾಣಾ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗುತ್ತಿರುವುದು ತುಸು ಸಮಾಧಾನಕರ ಸಂಗತಿ.
ಈ ನಡುವೆ, ಸುನೀಲ್ ನರೇನ್ ಆಲ್ ರೌಂಡ್ ಪ್ರದರ್ಶನ ನೀಡುತ್ತಿಲ್ಲ. ಪ್ಯಾಟ್ ಕಮಿನ್ಸ್ ಮತ್ತು ಉಮೇಶ್ ಯಾದವ್ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ. ಹಾಗೇ ವರುಣ್ ಚಕ್ರವರ್ತಿ ಕೂಡ ಲಯ ಕಂಡುಕೊಳ್ಳಬೇಕಿದೆ.
ರಾಜಸ್ತಾನ ರಾಯಲ್ಸ್ ಪ್ಲೇಯಿಂಗ್ ಇಲೆವೆನ್
ಜೋಸ್ ಬಟ್ಲರ್
ದೇವದತ್ ಪಡಿಕ್ಕಲ್
ಸಂಜು ಸ್ಯಾಮ್ಸನ್ (ನಾಯಕ-ವಿ.ಕಿ.)
ರಸೆಯ್ ವಾನ್ ಡೆರ್ ಡುಸೆನ್
ಶಿಮ್ರೋನ್ ಹೆಟ್ಮೇರ್
ಕರುಣ್ ನಾಯರ್
ಆರ್. ಅಶ್ವಿನ್
ಜೇಮ್ಸ್ ನಿಶಾಮ್
ಪ್ರಸಿದ್ಧ್ ಕೃಷ್ಣ
ಕುಲದೀಪ್ ಸೇನ್
ಯುಜುವೇಂದ್ರ ಚಾಹಲ್
rr-vs-kkr-match-royal-team-playing-11