RRR ಸೆನ್ಸಾರ್ ರಿವ್ಯೂ .. ಮೈಂಡ್ ಬ್ಲೋವಿಂಗ್ .. ಇದು ಟಾಕ್ ಆಫ್ ದಿ ಟೌನ್ ..

1 min read

RRR ಸೆನ್ಸಾರ್ ರಿವ್ಯೂ .. ಮೈಂಡ್ ಬ್ಲೋವಿಂಗ್ .. ಇದು ಟಾಕ್ ಆಫ್ ದಿ ಟೌನ್ ..

ನಿರ್ದೇಶಕ ರಾಜಮೌಳಿ ಅವರ ಮಹತ್ವಾಕಾಂಕ್ಷೆಯ ಚಿತ್ರ RRR. ಯಂಗ್ ಟೈಗರ್ ಎನ್ ಟಿಆರ್ ಹಾಗೂ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಈ ಚಿತ್ರಕ್ಕಾಗಿ ಮೆಗಾ ಹಾಗೂ ನಂದಮೂರಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಮೂಡಿಸಿದೆ. ಹೆಚ್ಚುತ್ತಿರುವ ಓಮಿಕ್ರಾನ್ ಮತ್ತು ಕರೋನಾ ಪ್ರಕರಣಗಳಿಂದಾಗಿ ತಯಾರಕರು ಈಗಾಗಲೇ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ.

ಇದರ ಮಧ್ಯೆ RRR ಚಿತ್ರದ ಕುರಿತು ಖುಷಿ ಸುದ್ದಿಯೊಂದು ಸಿಕ್ಕಿದೆ. RRR  ಚಿತ್ರ ತಂಡ ಸೆನ್ಸಾರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಚಿತ್ರಕ್ಕೆ ಯಾವ ಸರ್ಟಿಫಿಕೇಟ್ ಕೊಟ್ಟಿದ್ದಾರೋ ಗೊತ್ತಿಲ್ಲ ಆದರೆ.. ಸೆನ್ಸಾರ್ ರಿವ್ಯೂ ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದೆ. ಚಲನಚಿತ್ರ ವಿಮರ್ಶಕ, ಸೆನ್ಸಾರ್ ಮಂಡಳಿ ಸದಸ್ಯ ಉಮೈನ್ ಸಂಧು ತಮ್ಮ ಟ್ವಿಟರ್ ಖಾತೆಯ ಮೂಲಕ RRR ಸೆನ್ಸಾರ್ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. “ಮೈಂಡ್ ಬ್ಲೋವಿಂಗ್ .. ಜೂನಿಯರ್ ಎನ್ ಟಿಆರ್, ರಾಮ್ ಚರಣ್ ಪರ್ಫಾರ್ಮೆನ್ಸ್ ಟಾಕ್ ಆಫ್ ದಿ ಟೌನ್. ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿದರು.  ಎಂದು ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.  ಬಾಹುಬಲಿ 2 ದಾಖಲೆಗಳನ್ನು ಮುರಿಯಲಿದೆ ಎಂದು ಹೇಳಿದ್ದಾರೆ.

ಇದನ್ನ ನೋಡಿದ  ಮೆಗಾ  ಹಾಗೂ ನಂದಮೂರಿ ಫ್ಯಾನ್ಸ್  ಫುಲ್ ಖುಷ್ ಆಗಿದ್ದಾರೆ. RRR ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ  ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜನಾಗಿ ಕಾಣಿಸಿಕೊಂಡರೆ, ತಾರಕ್ ಬುಡಕಟ್ಟು ಜನಾಂಗದ ನಾಯಕ ಕೊಮುರಂ ಭೀಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್‌ಗಳು, ಟೀಸರ್‌ಗಳು ಮತ್ತು ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd