ಅಮೃತಸರದ ಗೋಲ್ಡನ್ ಟೆಂಪಲ್ ಗೆ ಬೇಟಿ ನೀಡಿ ಆಶಿರ್ವಾದ ಪಡೆದ RRR ಟೀಮ್
ಎಸ್.ಎಸ್.ರಾಜಮೌಳಿ ನಿರ್ದೇಶನದ ಅದ್ಭುತ ಕೃತಿ RRR ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಪಂಜಾಬ್ ಗೆ ವಿಸಿಟ್ ಮಾಡಿದೆ. ಈ ವೇಳೆ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಮತ್ತು ರಾಜಮೌಳಿ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿ ತಮ್ಮ ಸಿನಿಮಾ ಬಿಡುಗಡೆಗೆ ಮುನ್ನ ಆಶೀರ್ವಾದ ಪಡೆದಿದ್ದಾರೆ.
ಬೆಂಗಳೂರು, ಹೈದರಾಬಾದ್ ಮತ್ತು ದುಬೈ ನಗರಗಳಲ್ಲಿ ಪ್ರಚಾರ ಮುಗಿಸಿದ ನಂತರ ನಿರ್ದೇಶಕ ರಾಜಮೌಳಿ ಮತ್ತು ನಟರಾದ ಎನ್‌ಟಿಆರ್ ಮತ್ತು ರಾಮ್ ಚರಣ್ ಸೇರಿದಂತೆ ‘RRR’ ಚಿತ್ರದ ಎಲ್ಲಾ ಪಾತ್ರವರ್ಗವೂ ಬರೋಡಾದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಏಕತಾ ಪ್ರತಿಮೆಗೆ ಭೇಟಿ ನೀಡಿದರು.
ಚಿತ್ರದಲ್ಲಿ ಪ್ರಮುಖ ನಟರಾದ ರಾಮ್ ಚರಣ್ ಮತ್ತು ಎನ್‌ಟಿಆರ್ ಜೂನಿಯರ್, ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಸಮುದ್ರಕನಿ, ರೇ ಸ್ಟೀವನ್‌ಸನ್ ಮತ್ತು ಅಲಿಸನ್ ಡೂಡಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
PEN ಸ್ಟುಡಿಯೋಸ್‌ನ ಜಯಂತಿ ಲಾಲ್ ಗಡ ಅವರು ಉತ್ತರ ಭಾರತದಾದ್ಯಂತ ಥಿಯೇಟ್ರಿಕಲ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಮತ್ತು ಎಲ್ಲಾ ಭಾಷೆಗಳಿಗೆ ವಿಶ್ವದಾದ್ಯಂತ ಎಲೆಕ್ಟ್ರಾನಿಕ್ ಹಕ್ಕುಗಳನ್ನು ಖರೀದಿಸಿದ್ದಾರೆ. ತೆಲುಗು ಭಾಷೆಯ ಆಕ್ಷನ್ ಡ್ರಾಮಾ ಚಿತ್ರವನ್ನು ಡಿವಿವಿ ಎಂಟರ್‌ಟೈನ್‌ಮೆಂಟ್ಸ್‌ನ ಡಿ ವಿ ವಿ ದಾನಯ್ಯ ನಿರ್ಮಿಸಿದ್ದಾರೆ. RRR ಚಿತ್ರ ಮಾರ್ಚ್ 25 ರಂದು ಬಿಡುಗಡೆಯಾಗುತ್ತಿದೆ.