ರಾಹುಲ್ ನಾಯಕತ್ವಕ್ಕೆ ಶಾನ್ ಪೊಲಾಕ್ ಮೆಚ್ಚುಗೆ RSA vs IND test match kl-rahul-captaincy saaksha tv
ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಕೆ.ಎಲ್.ರಾಹುಲ್ ಅವರನ್ನು ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಶಾನ್ ಪೊಲಾಕ್ ಹಾಡಿ ಹೊಗಳಿದ್ದಾರೆ.
ಕೊಹ್ಲಿ ಇಂಜೂರಿ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ರಾಹುಲ್, ಮೊದಲ ಇನ್ನಿಂಗ್ಸ್ ನಲ್ಲಿ ನಾಯಕತ್ವದ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು.
ಇದಾದ ಬಳಿಕ ಟೀಂ ಇಂಡಿಯಾದ ಬೌಲರ್ ಮೊಹಮ್ಮದ್ ಸಿರಾಜ್ ಇಂಜೂರಿಯಾಗ, ಶರ್ದೂಲ್ ಅವರನ್ನು ಬಳಸಿಕೊಂಡ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.
ಶರ್ದೂಲ್ ಠಾಕೂರ್ ಅವರ ಕೈಯಲ್ಲಿ ಮ್ಯಾರಥಾನ್ ಬೌಲಿಂಗ್ ಮಾಡಿಸಿದ ರಾಹುಲ್, ಆಫ್ರಿಕಾ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದರು.
ಇತ್ತ ರಾಹುಲ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಠಾಕೂರ್, ಮೊದಲ ಇನ್ನಿಂಗ್ಸ್ ನಲ್ಲಿ ಏಳು ವಿಕೆಟ್ ಪಡೆದು ಮಿಂಚಿದರು.
ಈ ಮಧ್ಯೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಶಾನ್ ಪೊಲಾಕ್, ರಾಹುಲ್ ಅವರ ಈ ನಿರ್ಧಾರಕ್ಕೆ ಶಹಬ್ಬಾಷ್ ಎಂದಿದ್ದಾರೆ.
“ಎರಡನೇ ದಿನದ ಆಟದಲ್ಲಿ ಟೀಂ ಇಂಡಿಯಾದ ಮುಂದೆ ನಿಜವಾಗಿಯೂ ಕೆಲವು ಸವಾಲುಗಳಿದ್ದವು. ಸಿರಾಜ್ ಗಾಯಗೊಂಡಿದ್ದು, ಟೀಂ ಇಂಡಿಯಾಗೆ ಹಿನ್ನಡೆಯಾಗಿತ್ತು.
ಈ ಸಂದರ್ಭದಲ್ಲಿ ಯಾವುದೇ ನಾಯಕನಿಗೆ ಒತ್ತಡ ಉಂಟಾಗುವುದು ಸಹಜ. ಆದ್ರೆ ರಾಹುಲ್ ಈ ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿದರು.
ಟೀಂ ಇಂಡಿಯಾದ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡುತ್ತಿದ್ದರೂ ವಿಕೆಟ್ ಬೀಳುತ್ತಿರಲಿಲ್ಲ.
ಈ ಸಂದರ್ಭದಲ್ಲಿ ಶಾರ್ದೂಲ್ ಅವರ ಕೈಗೆ ರಾಹುಲ್ ಬಾಲ್ ನೀಡಿದ್ದು, ನಿಜಕ್ಕೂ ಒಳ್ಳೆಯ ನಡೆ ಎಂದು ರಾಹುಲ್ ನಾಯಕತ್ವದ ಗುಣಗಳನ್ನು ಪೊಲಾಕ್ ಹೊಗಳಿದ್ದಾರೆ.