ಹಿಟ್ಲರ್ ನ್ಯದೊಂದಿಗೆ ಬಂದು ರಷ್ಯಾದೊಂದಿಗೆ ಯುದ್ಧ ಮಾಡಿದ್ದ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಗೊತ್ತಿಲ್ಲದಿದ್ದರೆ ತಿಳಿದಲ್ಲ ಎಂದಾದರೆ ಅವರೊಬ್ಬ ಮುರ್ಖ, ಶಾಲೆಗೆ ಹೋಗಿಲ್ಲ ಎಂದು ರಷ್ಯಾ ಅಧ್ಯಕ್ಷ ಪುಟೀನ್ ಅವರು ಕೆನಡಾದ ಮಾಜಿ ಸ್ಪೀಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯ ಗೊತ್ತಿದ್ದರೂ ಸುಮ್ಮನಿದ್ದರೆ, ಅವರೊಬ್ಬ ದ್ವೇಷಿ. ಒಟ್ಟಿನಲ್ಲಿ ಅವರು ಒಬ್ಬ ಮೂರ್ಖ ಅಥವಾ ದ್ವೇಷಿ ವ್ಯಕ್ತಿ” ಎಂದು ಹೇಳಿದ್ದಾರೆ.
ಕೆನಡಾದ ಲೋಕಸಭೆಯಲ್ಲಿ ಮಾಜಿ ನಾಜಿ ಸೈನಿಕನೊಬ್ಬನಿಗೆ ಎಲ್ಲರೂ ಜೈಕಾರ ಹಾಕಿರುವ ನೋಟ ಖಂಡಿತವಾಗಿಯೂ ಅಸಭ್ಯವಾಗಿದೆ. ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಆ ಸಂದರ್ಭದಲ್ಲಿ ಪಾಲ್ಗೊಂಡಿದ್ದು, ಅವರ ದೇಹದಲ್ಲೂ ಯಹೂದಿ ರಕ್ತವಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಇತ್ತೀಚಿಗಷ್ಟೇ ಕೆನಡಾಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ವಿನಂತಿಯ ಮೆರೆಗೆ ಕೆನಡಾದ ಸ್ಪೀಕರ್ ಆಗಿದ್ದ ಅಂಟೋನಿ ಅವರ ಜಿಲ್ಲೆಯಲ್ಲೇ ನೆಲೆಸಿದ್ದ ಉಕ್ರೇನಿಯನ್ ಕೆನಡಿಯನ್ ಆಗಿದ್ದ ಮಾಜಿ ನಾಜಿಯ ಹಿರಿಯ ಯೋಧ ಸಭೆಯಲ್ಲಿ ಕರೆಸಿ ಅವರಿಗೆ ಜೈಕಾರ ಹಾಕಿದ್ದರು.
ನಂತರ ಆ ಯೋಧ ಹಿಟ್ಲರ್ ಪಡೆ ಪರವಾಗಿ ಹೋರಾಡಿದ ನಾಜಿ ಎಂದು ತಿಳಿದ ನಂತರ ಕೆನಡಾ ಹಾಗೂ ಸ್ಪೀಕರ್ ತೀವ್ರ ಮುಜುಗರಕ್ಕೊಳಗಾಗಬೇಕಾಯಿತು. ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವಿಷಯವಾಗಿ ಮಾತನಾಡಿದ ಪುಟಿನ್, ಕೆನಡಾದ ಲೋಕಸಭೆಯ ಸ್ಪೀಕರ್ ಎರಡನೇ ವಿಶ್ವಯುದ್ಧದಲ್ಲಿ ಈ ಯೋಧ ರಷ್ಯನ್ನರ ವಿರುದ್ಧ ಹೋರಾಡಿದ್ದರು ಎಂದು ಹೇಳಿದರೆ ಅದರ ಅರ್ಥ ಸ್ವಾಭಾವಿಕವಾಗಿ ಆತ ಹಿಟ್ಲರ್ ಪಡೆಯ ಪರವಾಗಿ ಯುದ್ದ ಮಾಡಿದ್ದನೆಂದು ತಿಳಿಯಬಹುದು.
ಹಿಟ್ಲರ್ ತನ್ನ ಸೈನ್ಯದೊಂದಿಗೆ ಆ ಸಂದರ್ಭದಲ್ಲಿ ರಷ್ಯನ್ನರ ವಿರುದ್ಧ ಯುದ್ಧ ಮಾಡಿದ್ದ. ಇದು ಎಲ್ಲರಿಗೂ ತಿಳಿದ ಸಂಗತಿ ಗೊತ್ತಿಲ್ಲದವರು ಮುರ್ಖರು ಎಂದು ಲೇವಡಿ ಮಾಡಿದ್ದಾರೆ.