ಭಯಕ್ಕೆ ಭಾಷಣ ಮರೆತಾಗ
ಶಾಲಾ ದಿನಗಳಲ್ಲಿ ನಾನು ತುಂಬಾ ಆಕ್ಟೀವ್ ಆಗಿರುತ್ತಿದ್ದೆ ತುಂಬಾ ಬುದ್ದಿವಂತೆ.. ಆಗಿನಿಂದಲೂ ನನಗೆ ಸ್ವಲ್ಪ ಧೈರ್ಯ ಜಾಸ್ತಿಯೇ.. ಹಾಗಂತ ಎಲ್ಲರೂ ಹೇಳುತ್ತುದ್ದರು..
ನನಗೆ ಈ ಸ್ಟೇಜ್ ಫಿಯರ್ ಅಂತಾರಲ್ಲ ಅದಿರಲಿಲ್ಲ… ಆಗಿನಿಂದಲೂ ನನ್ನ ಮೇಲೆ ನನಗೆ ಆತ್ಮವಿಶ್ವಾಸವಿರುತಿತ್ತು…
ಇನ್ ಫ್ಯಾಕ್ಟ್ ಪರೀಕ್ಷೆ ಸಂದರ್ಭದಲ್ಲೂ ನಾನೂ ಕೂಲಾಗಿರುತ್ತಿದ್ದೆ.. 10 ನೇ ತರಗರಿ ಪಬ್ಲಿಕ್ ಎಕ್ಸಾಮ್ಸ್ ಟೈಮ್ ನಲ್ಲಿ ಹಿಂದಿನ ದಿನ ಕೂತು ಮಕ್ಕಳ ಜೊತೆಗೆ ಕೇರಮ್ ಅಡ್ತಿದ್ದವಳು..
ಏನಂದ್ರೆ ಭಯ ಬೀಳದೇ ಎಲ್ಲವನ್ನೂ ಕಾನ್ಫಿಡೆನ್ಸ್ ಜೊತೆಗೆ ಎದುರಿಸುತ್ತಿದ್ದೆ ಮುಂಚೆಯಿಂದಲೂ … ಪ್ರತಿಬಾ ಕಾರಂಜಿ ಇರಲಿ, ಕಬಡ್ಡಿ ಕೊಕ್ಕೋ ಇರಲಿ , ಡ್ರಾಯಿಂಗ್ ಹ್ಯಾಂಡ್ರೈಟಿಂಗ್ ಡಿಬೇಟ್ ಕಾಂಪಿಟೇಷನ್ , ರನ್ನಿಂಗ್ ರೇಸ್ ನಲ್ಲೂ ಪ್ರೈಸ್ ಗಳನ್ನ ಗೆದ್ದಿರುವೆ …
ಪ್ರಾರ್ಥನಾ ಸಮಯದಲ್ಲಿ ದಿನ ಮೈಕ್ ಮುಂದೆ ನಿಂತು ನ್ಯೂಸ್ ಪೇಪರ್ ಹೆಡ್ ಲೈನ್ಸ್ ಓದಲು ಬಿಡ್ತಿದ್ದರು ನನ್ನ ಧೈರ್ಯ ಜಾಸ್ತಿ ಅಂತ ನಮ್ಮ ಮೇಡಮ್.. ಅವರಂದ್ ಮಾತು ಹೇಳ್ತಿದ್ರೂ ನನಗೆ ಯಾವಾಗಲೂ .. ನಿನಗೆ ಡಬಲ್ ಗುಂಡಿಗೆ ಅಂತ..
ಸಾಂಗ್ಸ್ , ಡ್ಯಾನ್ಸ್ ಅಂದ್ರೆ ನನ್ನ ಹೆಸರುಮಿಸ್ ಆಗ್ತಿರಲಿಲ್ಲ.. ಆದ್ರೆ ಇಷ್ಟೆಲ್ಲಾ ನಿರ್ಭೀತವಾಗಿದ್ದವಳು ನಾನೂ ಸಹ ಒಮ್ಮೆ ಅವಮಾನಿತಳಾದೆ..
ಅವತ್ತು ಆಗಸ್ಟ್ 15 ನಾನು ಇಷ್ಟುದ್ದ ಭಾಷಣ ಮಾಡಬೇಕಾಗಿತ್ತು… ಓದಿ ಗಟ್ಟು ಹೊಡೆದಿದ್ದೆ… ಎಲ್ಲಾ ಆಗಿತ್ತು..ಸಾಮಾನ್ಯವಾಗಿ ನಾನು ಏನಾದ್ರೂ ತಯಾರಿ ನಡೆಸಿದ್ರೆ ತುಂಬಾ ಬೇಗ ಅದನ್ನ ಕಲಿತೋ , ಆ ಬಗ್ಗೆ ಪ್ರಾಕ್ಟೀಸ್ ಮಾಡಿ ಆ ನಂತರ ತುಂಬಾ ಸಮಯ ಫ್ರೀ ಇರುತ್ತಿದ್ದೆ…
ಆದರೆ ಅಂದು ಭಾಷಣಕ್ಕೆ ಒಂದು ಗಂಟೆ ಮುಂಚೆ ನನಗೆ ಸ್ಕ್ರಿಪ್ಟ್ ಕೊಟ್ಟಿದ್ರು ಮೇಡಮ್… ಅಂದು ಭಾಷಣವನ್ನ ಓದಿ ಗಟ್ಟು ಹೊಡೆಯುವಾಗಲೂ ನಾನು ಹೆದರಿದ್ದೆ… ಅವತ್ತು ಸ್ಟೇಜ್ ಫಿಯರ್ ಉದಯಿಸುತ್ತು ಬಹುಶಃ ನನ್ನಲ್ಲಿ ….
ಹೆದರುತ್ತಾ ನಡುಗುತ್ತಾ… ಓದಿದ್ದನ್ನೆಲ್ಲಾ ನೆನಪು ಮಾಡಿಕೊಳ್ತಿದ್ದವಳಿಗೆ.. ಅದ್ಯಾವಾಗ ಸ್ಟೇಜ್ ಮೇಲೆ ಕರೆದರೋ ಆಗ ಆತ್ಮವಿಶ್ವಾಸ ಕುಂದಿತ್ತು… ಸ್ಟೇಜ್ ಮೇಲೆ ನಿಂತು ಅಷ್ಟೂ ಜನರನ್ನೊಮ್ಮೆ ನೋಡಿದಾಗ ನಡುಕ ಹುಟ್ಟಿತ್ತು..
ಎಷ್ಟು ಭಯಭೀತಳಾಗಿದ್ದೆ ಎಂದರೆ,,, ಎಲ್ಲರಿಗೂ ನಮಸ್ಕಾರ ಎಂದವಳು 1 ನಿಮಿಷ ಆಯ್ತು 2 ನಿಮಿಷವಾಗಿ ನಮ್ಮ ಮೇಡಮ್ ಬಂದು ಹಿಂದೆಯಿಂದ ಕಿವಿಯಲ್ಲಿ ಥ್ಯಾಂಕ್ಸ್ ಅಂದು ಮುಗಿಸು ಅನ್ನುವವರೆಗೂ ಮೌನವಾಗಿಯೇ ಇದ್ದೆ… ಆ ನಂತರ ಭಯದಲ್ಲಿ ಥ್ಯಾಂಕ್ಸ್ ಹೇಳಿ ಬಂದವಳಿಗೆ ಆ ದಿನ ಆ ಘಟನೆ ನೆನಪಾದರೆ ಇಂದಿಗೂ ಮುಜುಗರ….
– ನಿಹಾರಿಕಾ ರಾವ್ –








