ಜಲಜೀರಾದ ಆರೋಗ್ಯ ಪ್ರಯೋಜನಗಳು ಮತ್ತು ತಯಾರಿಸುವ ವಿಧಾನ
ಬೇಸಿಗೆಯಲ್ಲಿ ಆರೋಗ್ಯವಾಗಿರಲು, ಹೆಚ್ಚು ಹೆಚ್ಚು ನೀರು ಕುಡಿಯಬೇಕು. ತಜ್ಞರ ಪ್ರಕಾರ, ಬೇಸಿಗೆಯ ದಿನಗಳಲ್ಲಿ ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ದೇಹದಲ್ಲಿ ನೀರಿನ ಕೊರತೆಯಿಂದಾಗಿ, ಅನೇಕ ರೀತಿಯ ರೋಗಗಳು ಉದ್ಭವಿಸುತ್ತವೆ. ಈ ಋತುವಿನಲ್ಲಿ ಆರೋಗ್ಯವಾಗಿರುವುದು ಸವಾಲಿನ ವಿಷಯ. ಬೇಸಿಗೆಯ ದಿನಗಳಲ್ಲಿ ಆರೋಗ್ಯವಾಗಿರಲು ಬಯಸಿದರೆ, ಪ್ರತಿದಿನ ಜಲಜೀರಾವನ್ನು ತೆಗೆದುಕೊಳ್ಳಬೇಕು. ಹಲವಾರು ಮಸಾಲೆಗಳನ್ನು ಬೆರೆಸಿ ಜಲಜೀರಾ ತಯಾರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ಹೆಚ್ಚಿದ ತೂಕವನ್ನು ಅದರ ಸೇವನೆಯಿಂದ ನಿಯಂತ್ರಿಸಬಹುದು. ರಕ್ತಹೀನತೆ ಮತ್ತು ಹೊಟ್ಟೆಯ ಸಮಸ್ಯೆಗೆ ಕೂಡ ಪರಿಣಾಮಕಾರಿ.
ಜಲಜೀರಾದ ಪ್ರಯೋಜನಗಳು ಮತ್ತು ಮಾಡುವ ವಿಧಾನ
ತೂಕ ನಿಯಂತ್ರಣದಲ್ಲಿ ಸಹಾಯಕ
ಆರೋಗ್ಯಕ್ಕೆ ಜಲಜೀರಾ ಅತ್ಯುತ್ತಮ ಪಾನೀಯವಾಗಿದೆ. ಜೀರಿಗೆ ನೀರಿನಲ್ಲಿ ಕ್ಯಾಲೊರಿ ತುಂಬಾ ಕಡಿಮೆ. ಪ್ರತಿದಿನ ಎರಡು ಬಾರಿ ಜಲಜೀರಾ ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು.
ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ
ಜಲಜೀರಾದಲ್ಲಿ ಕಬ್ಬಿಣಾಂಶವಿದೆ. ಕಬ್ಬಿಣದ ಕೊರತೆಯಿಂದ ಬಳಲುತ್ತಿರುವ ಜನರು ಜಲಜೀರಾವನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ವಿಶೇಷವಾಗಿ ಗರ್ಭಿಣಿಯರು ಪ್ರತಿದಿನ ಜಲಜೀರಾ ಸೇವಿಸಬೇಕು. ಇದು ಹಿಮೋಗ್ಲೋಬಿನ್ ಹರಿವನ್ನು ವೇಗಗೊಳಿಸುತ್ತದೆ ಮತ್ತು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.
ಜೀರ್ಣಾಂಗ ವ್ಯವಸ್ಥೆ ಪ್ರಬಲವಾಗಿದೆ
ನೀವು ಹೊಟ್ಟೆಯ ಸಮಸ್ಯೆಯೊಂದಿಗೆ ಬಳಲುತ್ತಿದ್ದರೆ, ಜಲಜೀರಾ ಸೇವನೆ ಸೂಕ್ತವಾಗಿದೆ. ಇದು ನಿಧಾನವಾಗಿ ಹೊಟ್ಟೆಯಿಂದ ಗ್ಯಾಸ್ ಅನ್ನು ಹೊರಹಾಕುತ್ತದೆ. ಇದರ ಬಳಕೆಯು ಹೊಟ್ಟೆಯ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಹೊಟ್ಟೆ ನೋವು ಮತ್ತು ಸಂಧಿವಾತದಲ್ಲೂ ಜಲಜೀರಾ ಪ್ರಯೋಜನಕಾರಿಯಾಗಿದೆ. ಜಲಜೀರಾಗೆ ಶುಂಠಿಯನ್ನು ಸೇರಿಸುವುದರಿಂದ ಅದರ ಔಷಧೀಯ ಗುಣಗಳು ಹೆಚ್ಚಾಗುತ್ತವೆ.
ಜಲಜೀರಾ ತಯಾರಿಸುವುದು ಹೇಗೆ
ಒಂದು ಚಮಚ ಹುಣಸೆಹಣ್ಣನ್ನು ಕಾಲು ಕಪ್ ಬಿಸಿ ನೀರಿನಲ್ಲಿ ಸುಮಾರು 15 ನಿಮಿಷಗಳ ಕಾಲ ನೆನೆಸಿಡಿ. ಈಗ ಮೂರು ಟೀಸ್ಪೂನ್ ಪುದೀನ ಎಲೆಗಳನ್ನು ಚೆನ್ನಾಗಿ ಹುಡಿ ಮಾಡಿ.
ಅದಕ್ಕೆ ಒಂದೂವರೆ ಟೀಸ್ಪೂನ್ ಫೆನ್ನೆಲ್ ಬೀಜ, ಒಂದೂವರೆ ಟೀಸ್ಪೂನ್ ಜೀರಿಗೆ, ಒಂದು ಏಲಕ್ಕಿ ಮತ್ತು ಕರಿಮೆಣಸನ್ನು ರುಚಿಗೆ ಅನುಗುಣವಾಗಿ ಸೇರಿಸಿ ಹುಡಿ ಮಾಡಿ.
ನಂತರ, ಒಂದು ಟೀಸ್ಪೂನ್ ಚಾಟ್ ಮಸಾಲಾ, ಒಂದು ಟೀಸ್ಪೂನ್ ಮಾವಿನ ಪುಡಿ, ಒಂದು ಪಿಂಚ್ ಇಂಗು ಮತ್ತು ಉಪ್ಪನ್ನು ಅಗತ್ಯಕ್ಕೆ ತಕ್ಕಂತೆ ಸೇರಿಸಿ. ಹುಣಸೆ ರಸವನ್ನು ಸೇರಿಸಿ ಬೆರೆಸಿ
ನೀವು ಬಯಸಿದರೆ ರುಚಿಗೆ ನಿಂಬೆ ರಸವನ್ನು ಕೂಡ ಸೇರಿಸಬಹುದು. ( ಸಾಮಾನ್ಯ ಉಪ್ಪಿನ ಬದಲು ಕಪ್ಪು ಉಪ್ಪನ್ನು ಬಳಸಬಹುದು)
ಈಗ ಒಂದು ಲೋಟ ನೀರಿಗೆ ಎರಡು ಟೀಸ್ಪೂನ್ ಜಲಜೀರಾ ಚಟ್ನಿ ಸೇರಿಸಿ ಚೆನ್ನಾಗಿ ಕರಗಿಸಿ. ಎರಡು ಐಸ್ ಕ್ಯೂಬ್ಗಳನ್ನು ಸೇರಿಸಿ. ಬೇಕಿದ್ದರೆ ಬೂಂದಿಗಳನ್ನು ಬೆರೆಸಿ. ಆರೋಗ್ಯಕರ ಮತ್ತು ತಂಪಾದ ಜಲಜೀರಾ ತಯಾರಾಗಿದೆ.
ಎಲೆಕೋಸು ಅಥವಾ ಕ್ಯಾಬೇಜ್ ನ ಆರೋಗ್ಯ ಪ್ರಯೋಜನಗಳು https://t.co/V78dO1U9BF
— Saaksha TV (@SaakshaTv) March 23, 2021
ಪಾಲಕ್ ಪನೀರ್ https://t.co/j2Hh1uVmAo
— Saaksha TV (@SaakshaTv) March 23, 2021
ನಟಿ ಪ್ರೀತಿ ಜಿಂಟಾಗೆ ಕಿಸ್ ಮಾಡಿದ ರಿತೇಶ್, ಕೊಪಗೊಂಡು ಪತಿಗೆ ಹೊಡೆತ ನೀಡಿದ ಜೆನಿಲಿಯಾ !#entertainment #bollywood #cinema https://t.co/8Gm3XcVZnr
— Saaksha TV (@SaakshaTv) March 22, 2021
ಐದು ವರ್ಷಗಳ ಕಾಲಾವಧಿಗೆ ಉನ್ನತ ಭದ್ರತಾ ನೋಂದಣಿ ಫಲಕ( HSRP) ಜಾರಿಗೆ ತರಲು ಕರ್ನಾಟಕ ಸರ್ಕಾರ ಚಿಂತನೆ https://t.co/EFd7Nev5RZ
— Saaksha TV (@SaakshaTv) March 22, 2021
#Saakshatv #healthtips #Jaljeera #healthbenefits