ADVERTISEMENT
Friday, March 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 11

Author Special Series : ನಿಗೂಢ ಟಿವಿ‌ ಜಗತ್ತು - ಅಧ್ಯಾಯ 11 , ಫ್ಯಾಂಟಸಿ , ಥ್ರಿಲ್ಲಿಂಗ್ ಕಥೆ.. ಮತ್ತೊಂದು ಜಗತ್ತಿನ ಜೊತೆಗೆ ನಿಮ್ಮನ್ನ ಸೇರಿಸುವ ಕಥೆ..

Namratha Rao by Namratha Rao
August 19, 2022
in Newsbeat, Saaksha Special, ಎಸ್ ಸ್ಪೆಷಲ್
Saakshatv Special series

Saakshatv Special series

Share on FacebookShare on TwitterShare on WhatsappShare on Telegram

(  ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ  ಲಿಂಕ್ ಗಳನ್ನ ಕ್ಲಿಕ್ ಮಾಡಿ )

ಅಧ್ಯಾಯ  – 11

Related posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

March 6, 2026
ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

March 6, 2026

ಅವರ ಮುಂದಿದ್ದ ದೃಶ್ಯ

ಅವರೆಲ್ಲಾ ಆತ್ಮ ನಡುಗಿಸುವಂತಿತ್ತು.. ಹೃದಯ ಕಂಪಿಸಿ , ದೇಹ ಹೆಪ್ಪುಗಟ್ಟಿತ್ತು.. ಕೈ ಕಾಲುಗಳು ಅಲುಗಾಡುತ್ತಿಲ್ಲ… ಒಂದ್ಕಡೆ ಭಯಕ್ಕೆ ಚಳಿಯಾಗ್ತಿದೆ.. ಮತ್ತೊಂದ್ಕಡೆ ಹಣೆಯಲ್ಲಿ ಬೆವರ ಹನಿ ಕಾಣಿಸುತ್ತಿದೆ…

ಎಲ್ಲರೂ ಮೌನಿಗಳೇ ಆಗಿದ್ದರು.. ಇನ್ನೇನು ತೇಜಸ್ವಿ ಕಿರುಚಬೇಕು ಅವಳನ್ನ ತಡೆಯುವ ಮನಸ್ವಿ ಬಾಯಿ ಮುಚ್ಚಿ ಮೌನವಾಗಿರುವಂತೆ ಸನ್ನೆ ಮಾಡುವಳು..

ಸಾವಿರಾರು ಹಾವುಗಳು ಒಟ್ಟಾಗಿದ್ದರೆ  ಅವುಗಳ ನಿಧಾನಗತಿಯ ಚಲನವಲನ ಎಂಥಹವರ ಗುಂಡಿಗೆ ಕಂಪಿಸುವಂತಿತ್ತು.. ಅತಿ ಭಯಾನಕ…

ಆಗಲೇ ಮತ್ತೊಂದು ವಿಚಾರ ಗಮನಿಸಿದರು..  ಹಿಂದಿನ ಹಂತದಲ್ಲಿ ಬೆಳಿಗ್ಗೆ ಇತ್ತು… ಆದ್ರೆ ಈಗ ರಾತ್ರಿಯಾಗಿತ್ತು..
ಮತ್ತೊಮ್ಮೆ ಅವರ ಎದುರಿಗೆ ಅದೃಷ್ಯ ಸ್ಕ್ರೀನ್ ಪ್ರಕಟಗೊಂಡಿತ್ತು.. ಅವರ ಟೆನ್ಷನ್ ಹೆಚ್ಚಾಗಿದ್ದು ಅವರಿಗೆ ಈ ಹಂತ ಮುಗಿಸಲು ನೀಡಲಾಗಿದ್ದ ಸಮಯ ನೋಡಿ.. ಕೇವಲ 20 ನಿಮಿಷಗಳಷ್ಟೇ …. ಟಿಕ್ ಟಿಕ್ ಟಿಕ್…….!!!
ಎಲ್ಲರಲ್ಲೂ ಆತಂಕ ಸ್ಪಷ್ಟ..

20 ನಿಮಿಷಗಳಷ್ಟೆನಾ ಹೇಗೆ…?? ಹೇಗೆ ಇಲ್ಲಿಂದ ಹೋಗೋದು ಎಂದುಕೊಂಡಿದ್ದವರ ಮನದಲ್ಲಿ ಸಾವಿರ ಗೊಂದಲ.. ಸ್ಕ್ರೀನ್ ( Digital ) ಮೇಲಿನ ಪದಗಳು ಸ್ಪಷ್ಟವಾಗಿ ಕಾಣುತ್ತಿದೆ.

Stage 1 – Deadly Zomies – cleared
Stage 2 – Killer Plants – cleared
Stage – 3 – Snakes land –

ಎಲ್ಲರೂ ನಿಶ್ಯಬ್ಧವಾಗಿದ್ದರು.. ವಿಶ್ವಾಸ ಕಳೆದುಕೊಂಡಿದ್ದರು.. ಈ ಹಂತದಿಂದ ವಾಪಸ್ ಮೊದಲನೇ ಹಂತಕ್ಕೆ ತಲುಪುತ್ತೇವೆ ಎಂದೇ ತಿಳಿದಿದ್ದರು..   ವೃಥಾ ಪ್ರಯತ್ನ ಮಾಡದೇ ಇರುವ ನಿರ್ಧಾರವನ್ನೂ ಮಾಡಿದ್ದರು..

ಮನಸ್ವಿ ಮೋಕ್ಷಿತ್ ಮಾತ್ರ ಇನ್ನೂ ವಿಶ್ವಾಸ ಕಳೆದುಕೊಂಡಿರಲಿಲ್ಲ.. ಈಗಲೂ ತಲೆ ಓಡಿಸುತ್ತಿದ್ದರು ಹೇಗೆ ಇಲ್ಲಿಂದ ಮುಂದೆ ಹೋಗುವುದೆಂದು..

ಆಗಲೇ ಮನಸ್ವಿಗೆ ಅಲ್ಲಿನ ದೃಶ್ಯದಲ್ಲಿ ಏನೋ ವಿಚಿತ್ರವೆಸಿತು.. ಅವಳ ತಲೆಯಲ್ಲಿ ಏನೇನೋ ಓಡುತ್ತಿದೆ.. ಅವಳಿಗೂ ಗೊತ್ತಿಲ್ಲದೇ ನಿಧಾನವಾಗಿ ಆ ಹಾವುಗಳತ್ತ ನಡೆದುಕೊಂಡು ಹೋಗುತ್ತಿದ್ದಾಳೆ..

ಇಲ್ಲಿ ಎಲ್ಲರಿಗೂ ಗಾಬರಿ ಜೋರಾಗಿ ಕಿರುಚುವ ಹಾಗಿಲ್ಲ.. ಇಷ್ಟೊತ್ತಿನ ವರೆಗೂ ಅವರು ಮೌನವಾಗಿದ್ದಕ್ಕೆ ಅವುಗಳ ಗಮನ ಅವರತ್ತ ಬಿದ್ದಿರಲಿಲ್ಲ..  ಈಗ ಎಲ್ಲರಿಗೂ ಮನಸ್ವಿ ನಡೆಯಿಂದ ಗೊಂದಲ…

ಮೋಕ್ಷಿತ್ ಗೂ ಭಯ ಅವಳ ಹಿಂದೆ ಹಿಂದೆಯೇ ಹೋದವನು ಅವಳ ಕೈಹಿಡಿದರೆ.. ಅವಳೋ… ಅವನ ಕಡೆಗೆ ಗಮನವೂ ಹರಿಸದೇ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಳೆ.. ಅವಳಿಗೂ ಭಯವಿದೆ.. ಇಲ್ಲ ಅಂತಲ್ಲ.. ಆದ್ರೆ ಅನಿವಾರ್ಯತೆಗೆ ಮೊಂಡು ಧೈರ್ಯ ಪ್ರದರ್ಶಿಸದೇ ಬೇರೆ ದಾರಿ ಇರಲಿಲ್ಲ..

ಎಲ್ಲರೂ ನಿಧಾನವಾಗಿ ಅವಳನ್ನೇ ಫಾಲೋ ಮಾಡ್ತಿದ್ದಾರೆ..

ಇತ್ತ ಸೈಂಟಿಸ್ಟ್ ಕೂಡ ಸೀಟ್ ತುದಿಯಲ್ಲಿ ಕೂತು ಕುತೂಹಲದಿಂದ ಮನಸ್ವಿಯನ್ನೇ ಗುರಾಯಿಸುತ್ತಿದ್ದಾನೆ..
ಮನಸ್ವಿ ಹೋದವಳು ನೇರವಾಗಿ ಆ ಹಾವುಗಳನ್ನ ದಿಟ್ಟಿಸಿದವಳಿಗೆ ಏನನ್ನಿಸ್ತೋ ಏನೋ ಆ ಹಾವುಗಳ ಮೇಲೆಯೇ ಕಾಲಿಟ್ಟುಬಿಡ್ತಿದ್ದಂತೆ ಎಲ್ಲರೂ ಜೋರಾಗಿ ಕಿರುಚುತ್ತಾರೆ…!!!!!!!!!!!!!!!!! ಭಯಕ್ಕೆ ಕೆಲವರು ಕಣ್ಮುಚ್ಚಿಕೊಂಡಿರುತ್ತಾರೆ..

ಆದ್ರೆ ಏನೂ ಸದ್ದಾಗದನ್ನ ಅರಿತು ಭಯದಲ್ಲಿ ನಿಧಾನವಾಗಿ ಕಣ್ಬಿಟ್ಟರೆ ಅಲ್ಲಿ ಈಗೊಂದು ಸ್ವಲ್ಪ ಹೊತ್ತು ಮುಂಚೆ ಇದ್ದ ಹಾವುಗಳು ಇಲ್ವೇ ಇಲ್ಲಾ….

ಎಲ್ಲಾ ಮಾಯ ಮಾಯ  ಮಾಯ.. ಅವರ ಮುಂದೆ ಈಗ ಇದ್ದಿದ್ದು ಖಾಲಿ ಮೈದಾನ… ಅಷ್ಟೇ…

ಹೇಗ್ ಸಾಧ್ಯ..??

ಎಲ್ಲರಲ್ಲೂ ಗೊಂದಲ , ಆತಂಕ , ಭಯ ,   ಆಶ್ಚರ್ಯ.. ಮೋಕ್ಷಿತ್ ಗೂ ಶಾಕ್.. ಎಲ್ಲರೂ ದಿಗ್ಭ್ರಾಂತರಾಗಿ ಮನಸ್ವಿ ಕಡೆಗೆ ನೋಡಿದ್ರೆ ,,,

ಮನಸ್ವಿ  ನಗುತ್ತಾ ಛಲಾವಾ..!!!!!
ಎಂದರೆ

ಮೋಕ್ಷಿತ್… ಹಾ ಏನು..??

ಎಸ್ ಛಲಾವಾ ,,,, ಅಂದ್ರೆ ಒಂದ್ ರೀತಿ ಇಮ್ಯಾಜಿನರಿ ಫಿಗರ್ ,,,, ರಿಯಾಲಿಟಿ ಅಲ್ಲ ,,, ಆದ್ರೆ ಅದರ ಛವಿ ಸೃಷ್ಟಿಮಾಡಿ ಕಣ್ಣಿಗೆ ಮಾಡುವ ಮೋಸ ಎಂದರೆ,,
ಎಲ್ಲರೂ ಶಾಕ್ ಆಗಿರುತ್ತಾರೆ..

ಮೋಕ್ಷಿತ್ “ ಇದು ನಿನಗೆ ಹೇಗ್ ಗೊತ್ತು..??”
ಅವು ಅಲ್ಲಿಂದ ಇಲ್ಲಿ ,, ಇಲ್ಲಿಂದ ಅಲ್ಲಿ ಒಂದೇ ರೀತಿ ಓಡಾಡುತ್ತಿದ್ದವು.. ಒಂದು ಚೂರು ಮೂಮೆಂಟ್ ಬದಲಾಗ್ತಿಲ್ಲ ಎಂದವನಿಗೆ ಉತ್ತರಿಸುವಳು…

ಒಂದೇ ರೀತಿ , ಒಂದೇ ಸಮ ನೇರವಾದ ದಿಕ್ಕಿನಲ್ಲಿ ಅದನ್ನ ಗಮನವಿಟ್ಟು ನೋಡಿದ್ರೆ ,,, ಸರಿಯಾಗಿ ನೋಡಿದ್ರೆ ಗೊತ್ತಾಗ್ಬಿಡುತ್ತೆ ಅದು ನಿಜ ಅಲ್ಲ ಕಣ್ಕಟ್ಟು ಅಷ್ಟೇ ಅಂತ ಎಂದವಳ ಮಾತಿಗೆ ಹುಡುಗ ಫಿದಾ..!!

ಇದ್ದಕ್ಕಿದ್ದಂತೆ ಖುಷಿಯಲ್ಲಿ ಅವಳನ್ನ ಅಪ್ಪಿಕೊಂಡರೆ ಎಲ್ಲರೂ ಮುಖ ಆಕಡೆ ತಿರುಗಿಸಿ ನಕ್ಕರೆ  ಮನಸ್ವಿ ಎದೆ ಬಡಿತದ ಏರಿಳಿತ ಅರಿತ ಹುಡುಗನದ್ದೂ ಅದೇ ಸ್ಥಿತಿ..

ಮುಗುಗರದಲ್ಲಿ ಅವಳಿಂದ ದೂರಾಗುತ್ತಾ ,, ಸಾರಿ ಸಾರಿ ಎಂದರೆ ,,, ಮನಸ್ವಿಗೆ ಏನನ್ನಿಸ್ತೋ ಗೊತ್ತಿಲ್ಲ ಅವನನ್ನ ತಾನು ಬಿಗಿದಪ್ಪುವ ಅವಳ ಬಿಸಿ ಅಪ್ಪುಗೆಗೆ ಹುಡುಗ ಹೆದರಿದ್ದಾನೆ..

ಆದ್ರೂ ಖುಷಿಯಲ್ಲಿ ತೇಲಾಡುತ್ತಿದ್ದಾನೆ.. ಆಗಲೇ ತೇಜಸ್ವಿ ,,, ಮನು ಆಮೇಲೆ ರೋಮ್ಯಾನ್ಸ್…  ಟೈಮ್ ಓಡ್ತಿದೆ ಎಂದಾಗ ರಲ್ಲರೂ ಟೈಮ್ ನೋಡಿದ್ರೆ ಇನ್ನೂ ಬಾಕಿ ಇರೋದು ಹತ್ತೇ ನಿಮಿಷ… ಇನ್ನೇನು ಖುಷಿಯಲ್ಲಿ ಮುಂದೆ ಹೋದವರಿಗೆ ಮುಂದೆ ಹಸಿರು ಲೈನ್ ಸಹ ಕಂಡಿತು.. ಆ ಲೈನ್ ಬಳಿಗೆ ಎಲ್ಲರೂ ಓಡೋಡಿ ಹೋಗುತ್ತಿದ್ದಾಗಲೇ,,,,

ಅವರ ಮುಂದೆ ಅಚಾನಕ್ ಆಗಿ ಬಂದ ದೈತ್ಯಾಕಾರದ ಕೆಂಪು ಭಯಾನಕ ಹಾವು ನೋಡಿ ಎಲ್ಲರ ಕೈ ಕಾಲುಗಳು ನಡುಗಿ ,,, ಹಾರ್ಟ್ ಅಟ್ಯಾಕ್ ಆಗೋದು ಒಂದೇ ಬಾಕಿ.. ಎಲ್ಲರೂ ಒಟ್ಟಾಗಿ ಪರಸ್ಪರ ಕೈ ಹಿಡಿದುಕೊಳ್ತಾರೆ..

ಆಗಲೇ ಸೈಂಟಿಸ್ಟ್ ಧ್ವನಿ ಕೇಳಿಸುತ್ತೆ… ಟಿಕ್ ಟಾಕ್ ಏನು ಮನಸ್ವಿ ಮೇಡಮ್ ಅವರೇ ,,, ಎಲ್ಲಾ ಇಮಾಜಿನರಿ ಇಟ್ರೇನ್ ಮಜ.. ಸ್ವಲ್ಪ ವಾರ್ಮ್ ಅಪ್ ಅಷ್ಟೇ.. ಇದು ಅಸಲಿ… ಅ ಆ..!!! ಕೋಪ ಬರುತ್ತಿದೆ,,, ಒಂದ್ಕಡೆ ಟೈಮ್ ಓಡ್ತಿದೆ… ಹೇಗೆ ದಾಟುತ್ತೀರಾ ಮಿಸ್ ಸ್ಮಾರ್ಟ್ ಮನಸ್ವಿ..!!!

 

– ನಿಹಾರಿಕಾ ರಾವ್ –

ಗಮನಿಸಿ :  ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ  Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…

ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..

ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…

ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..

ಮೊದಲ ಅಧ್ಯಾಯ – 1

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 1

ಅಧ್ಯಾಯ – 2

Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)

ಅಧ್ಯಾಯ – 3

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 3

ಅಧ್ಯಾಯ – 4

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 4

ಅಧ್ಯಾಯ – 5

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 5

ಅಧ್ಯಾಯ – 6

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 6

ಅಧ್ಯಾಯ – 7

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 7

ಅಧ್ಯಾಯ  – 8

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 8

 

Tags: fantasyniguda tv jagattuSaakshatv Special Series
ShareTweetSendShare
Join us on:

Related Posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

by Shwetha
March 6, 2026
0

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆಯನ್ನು ಅಮೆರಿಕ ಮುಳುಗಿಸಿರುವ ಘಟನೆ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಘಟನೆಯ ಬಗ್ಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,...

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

by Shwetha
March 6, 2026
0

ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಚಿಂತಿಸುತ್ತಿರುವ ಯುವಕ-ಯುವತಿಯರಿಗೆ, ಸಣ್ಣ ಉದ್ಯಮಿಗಳಿಗೆ ಹಾಗೂ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಭಾರತೀಯ ಅಂಚೆ ಇಲಾಖೆಯು...

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

by Shwetha
March 6, 2026
0

ಇತ್ತೀಚೆಗೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಾಗೂ ಸಿನಿಮಾಗಳ ಮೂಲಕವೂ ಸದ್ದು ಮಾಡುತ್ತಿರುವ ಲವ್ ಜಿಹಾದ್ ಪ್ರಕರಣಗಳು ಕರ್ನಾಟಕದಲ್ಲಿಯೂ ಆತಂಕ ಸೃಷ್ಟಿಸುತ್ತಿವೆ. ಹುಬ್ಬಳ್ಳಿಯಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ,...

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

by Shwetha
March 6, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಹಿಂದೂ ಮಹಾಸಾಗರದಲ್ಲಿ ತನ್ನ ಯುದ್ಧನೌಕೆಯನ್ನು ಹೊಡೆದುರುಳಿಸಿದ ಅಮೆರಿಕದ...

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

by Shwetha
March 6, 2026
0

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇರಾನ್–ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಬಂದ್ ಅನ್ನು ಇರಾನ್ ಬಂದ್ ಮಾಡಿರುವುದರಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram