( ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ ಲಿಂಕ್ ಗಳನ್ನ ಕ್ಲಿಕ್ ಮಾಡಿ )
ಅಧ್ಯಾಯ – 12
ಸೈಂಟಿಸ್ಟ್ ಮಾತು ಕೇಳಿ ಮನಸ್ವಿಗೆ ಒಂದೆಡೆ ಕೋಪ.. ದೈತ್ಯ ಹಾವು ನೋಡಿ ಒಂದೆಡೆ ಆತಂಕ..
ಆ ಹಾವು ಶ್…..ಶ್… ಎಂದು ಜೋರಾಗಿ ಬುಸುಗುಡುತ್ತಾ ನಿಧಾನಗತಿಯಲ್ಲಿ ಅವರತ್ತ ಬರುತ್ತಿದ್ದರೆ , ಎಲ್ಲರೂ ಹಿಂದಿಂದೆ ಓಡ್ತಿದ್ದಾರೆ…ಆಗಲೇ ಮರಗಳಿಂದ ಒಂದಷ್ಟು ಹಾವುಗಳು ಕೆಳಗೆ ಉದುರುತ್ತಿವೆ.. ಮತ್ತೆ ಎಲ್ಲಿ ನಿಂತರೋ ಅಲ್ಲೇ ನಿಂತವರ. ಧ್ವನಿಯೂ ನಿಂತಿದೆ.. ಭಯಕ್ಕೆ ಕಣ್ಣಲ್ಲಿ ನೀರು ತುಂಬಿದೆ..
ಆಗಲೇ ಮೋಕ್ಷಿತ್ ಮನಸ್ವಿಯ ಚಿಂತೆ , ಅವಳ ತಳಮಳ , ಆತಂಕ ಅರಿತು ದೊಡ್ಡ ತ್ಯಾಗಕ್ಕಾಗಿ ಸಜ್ಜಾಗಿದ್ದ.. ಟೈಮ್ ತುಂಬಾ ಕಡಿಮೆಯಿದೆ.. ಹೀಗಾಗಿ ಎಲ್ಲರತ್ತ ಒಮ್ಮೆ ನೋಡಿವನು ಕಣ್ತುಂಬಿಕೊಳ್ತಾ ಮನಸ್ವಿ ಎಂದವನ ಕಡೆಗೆ ಥಟ್ ಎಂದು ತಿರುಗಿದವಳ ಕೆನ್ನೆಗೆ ಏಕ್ ದಮ್ ಮುತ್ತಿಟ್ಟವನ ನೋಡಿ ಎಲ್ಲರಿಗೂ ಆಶ್ಚರ್ಯ , ಮನಸ್ವಿಗೆ ಆಘಾತ,,,, ಅವಳ ಹೊಟ್ಟೆಯೊಳಗೆ ಚಿಟ್ಟೆ ಓಡಾಟ,,,,,
ಮನಸ್ವಿ ಎಲ್ಲರೂ ಇಲ್ಲಿಂದ ತಪ್ಪಿಸಿಕೊಳ್ಳಲೇ ಬೇಕು ನನಗೋಸ್ಕರ ನೀನು ವಾಪಸ್ ಹೋಗಲೇಬೇಕು , ಅಂಡ್ ನಾನು ನಿನಗೆ ಮತ್ತೆ ಸಿಗುವೆನೋ ಇಲ್ವೋ ಗೊತ್ತಿಲ್ಲವಾದ್ರೆ ,,, ತುಂಬಾ ಕಡಿಮೆ ಸಮಯದಲ್ಲಿಯೇ ನಿನ್ನ ಮೇಲೆ ನನಗೆ ಪ್ರೀತಿ ಹುಟ್ಟಿದೆ.. ಹೇಳದೇ ಹೋದರೆ ಮುಂದೆ ಹೇಳೋಕೆ ಆಗುತ್ತೋ ಇಲ್ವೋ ಭಯ,, ಐ ಲವ್ ಯು ಮನಸ್ವಿ ಎಂದವನ ಕಣ್ತುಂಬಿಕೊಂಡಿತ್ತು.. ಮಿಕ್ಕವರೂ ಭಾವುಕರಾಗಿದ್ದಾರೆ..
ಮನಸ್ವಿ ಭಯದಲ್ಲಿ ಅವನ ಕೈ ಬಿಗಿಯಾಗಿ ಹಿಡಿದು ಏನ್ ಏನ್ ಹೇಳ್ತಿದ್ಯಾ ಎಂದವಳ ಮಾತು ಮೀರಿ ಅವಳ ಕೈ ಬಿಡಿಸಿಕೊಂಡು ಐ ,,, ಐ ಲವ್ ಯು ಮನಸ್ವಿ ,,, ಎಲ್ಲರೂ ಓಡಿ ಈಗ ಎಂದವನು ಆ ದೈತ್ಯ ಹಾವಿನ ಬಳಿಗೆ ಓಡಿದ.
ಮನಸ್ವಿ ಅಳುತ್ತಾ ಕಿರುಚಾಡುತ್ತಿದ್ದಾಳೆ.. ” ನೋ ಪ್ಲೀಸ್ ಮೋಕ್ಷಿತ್ ” ಎಂದರೆ ಎಲ್ಲರೂ ಅವಳನ್ನ ಎಳೆದು ಹಸಿರು ಗೆರೆ ಬಳಿಗೆ ಕರೆದುಕೊಂಡು ಓಡೋಡಿ ಹೋದರೆ ಎಲ್ಲರೂ ಹಸಿರು ಗೆರೆ ದಾಟಿದರೂ ಅವಳು ಮಾತ್ರ ದಾಟದೇ ಹಿಂದಿರುಗಿ ನೋಡಿದರೆ ಆ ಹಾವು ಅವನನ್ನ ಸುತ್ತಿಕೊಂಡಿದೆ… ಅವನನ್ನ ನುಂಗಲು ಬಾಯ್ತೆರೆದಿದೆ.. ಮನಸ್ವಿ ಕಣ್ಣಲ್ಲಿ ನೀರು ಜಾರುತ್ತಿದೆ.. ಇನ್ನೂ 2 ನಿಮಿಷ ಬಾಕಿ ಇದೆ.. ಎಲ್ಲರೂ ಮನಸ್ವಿ ಬಾ ಎಂದು ಕಿರುಚುತ್ತಿದ್ದಾರೆ..
ಮನಸ್ವಿಗೆ ಯಾರ ಮಾತು ಕೇಳಿಸುತ್ತಿಲ್ಲ.. ಆಗಲೇ
ಅವಳಿಗೆ ತನ್ನ ಮುಂದೆ ಏನೋ ಗಾಳಿಯಲ್ಲಿ ಮಿಂಚುತ್ತಿರುವ ವಸ್ತು ಕಾಣಿಸಿ ಅವಳದರ ಬಳಿಗೆ ಓಡಿಹೋಗಿ ಆ ಮಿಂಚಿಗೆ ಕೈ ಹಾಕಿದರೆ ಒಂದು ಬಾಲ್ ರೀತಿ ಸಿಗುತ್ತದೆ.. ಅದನ್ನ ಕೆಳಗೆ ಬಿಸಾಡಿದಳು ಹಿಂದೂ ಮುಂದೂ ಯೋಚಿಸದೇ..
ಕ್ಷಣ ಮಾತ್ರದಲ್ಲೇ ಅಲ್ಲಿ ದೈತ್ಯಾಕಾರದ ಮುಂಗುಸಿ ಪ್ರತ್ಯಕ್ಷ… ಮತ್ತೆ ಅಲ್ಲೇ ಇದ್ದ ಇನ್ನೊಂದು ಬಾಲ್ ಹಾಗೆಯೇ ನೆಲಕ್ಕೆ ಬಿಸಾಡಿದರೆ ಗರುಡ ಪ್ರತ್ಯಕ್ಷ.. ಗರುಡ ಮುಂಗುಸಿ ನೋಡಿ ಹಾವು ಅವನನ್ನ ಕೆಳಗೆ ಬಿಟ್ಟಿದೆ..
ಅವನಿಗೆ ಉಸಿರಾಡಲಾಗುತ್ತಿಲ್ಲ.. ಆದ್ರೂ ಮನಸ್ವಿ ಕಿರುಚುತ್ತಾ ,, ತನ್ನನ್ನ ಕರೆಯುವ ಧ್ವನಿ ಕೇಳಿ ಇದ್ದಬದ್ದ ಶಕ್ತಿಯನ್ನೆಲ್ಲ ಕೂಡಿಸಿಕೊಂಡವನು ಮನೋಬಲ ಜೊತೆಗೂಡಿಸಿಕೊಂಡು ಅವಳ ಬಳಿ ಓಡೋಡಿ ಬಂದವನ ಕೈ ಹಿಡಿದಳು ಹುಡುಗಿ.. ಇಬ್ಬರೂ ಭಾವುಕರಾಗಿ ಆ ಹಾವಿನತ್ತ ನೋಡಿದರೆ ,, ಗರುಡ ಹಾವು ಮುಂಗಸಿ ಕಿತ್ತಾಟ ಜೋರಿದೆ.
ಆಗಲೇ ಎಲ್ಲರ ಕಿರುಚಾಟ… ಸಮಯ ಮೀರುತ್ತಿದೆ ಬೇಗ ಬನ್ನಿ ಎಂಬ ಕೂಗಿಗೆ ಹೆದರಿದವರಿಬ್ಬರೂ ಓಡೋಡಿ ಕೊನೆಗೂ ಹಸಿರು ಗೆರೆ ದಾಟಿದ್ದರು.. ಇಬ್ಬರ ಕಣ್ಣೀರು ನಿಲ್ಲುತ್ತಿಲ್ಲ ,, ತೇಜಸ್ವಿ ಮನಸ್ವಿಯನ್ನ ಅಪ್ಪಿ ಬೈದಳು.. ಮತ್ತೊಮ್ಮೆ ಹೀಗೆ ಮಾಡಬೇಡವೆಂದು..
ನಂತರ ಮನಸ್ವಿ ಮೋಕ್ಷಿತ್ ಪರಸ್ಪರ ಕಣ್ಣೋಟ ಬೆರೆತು ಈ ಸ್ವಲ್ಪ ಹೊತ್ತಿನ ಮುಂಚೆ ನಡೆದದ್ದನ್ನ ನೆನಪಿಸಿಕೊಂಡವರು ಮುಜುಗರದಲ್ಲಿ ಕಣ್ಣೋಟ ಸರಿಸಿ ನಿಂತಿದ್ದರೆ ಎಲ್ಲರೂ ಆಡಿಕೊಳ್ತಿದ್ದಾರೆ… ಮೋಕ್ಷಿತ್ ,,, ” ಸಾರಿ … ಸಾರಿ ಮನಸ್ವಿ ” ಎಂದವನ ಕೆನ್ನೆಗೆ ಚುಂಬಿಸಿ ಅವನ ಪ್ರೀತಿಗೆ ಒಪ್ಪಿಗೆ ಸೂಚಿಸಿಯಾಗಿತ್ತು ಹುಡುಗಿ… ಎಲ್ಲರೂ ಒಮ್ಮೆಲೆ ಖುಷಿಗೆ ಕಿರುಚಿದರೆ ,, ಹುಡುಗನ ಧ್ವನಿ ನಿಂತಿತ್ತು.. ಖುಷಿಗೆ ಹುಚ್ಚನಾಗಿದ್ದ.. ಅವಳನ್ನ ಗಟ್ಟಿಯಾಗಿ ಅಪ್ಪಿದವನು , ” ಐ ಲವ್ ಯು ಐ ಲವ್ ಯು ಮನಸ್ವಿ ,, ನೀನು ನಾನು ಇಲ್ಲಿಂದ ಹೊರಗಡೆ ಹೋಗ್ತೇವೆ… ಮದುವೆಯಾಗಿ ಸುಂದರ ಜೀವನ ಕಟ್ಟಿಕೊಳ್ತೇವೆ” ಎಂದವನ ಮಾತಿಗೆ ಅವಳ ಕಣ್ಣಾಲೆಯಿಂದ ಜಲಪಾತ ಹರಿಯುತ್ತಿದ್ದರೆ, ಇಂತಹ ಸಂದರ್ಭದಲ್ಲಿಯೂ ಇವರ ಪ್ರೀತಿ ನೋಡಿ ಎಲ್ಲರೂ ಭಾವುಕರಾಗಿದ್ದು ಸುಳ್ಳಲ್ಲ..
ಎಲ್ಲರೂ ಬೆಳಕಿನತ್ತ ಅಂದರೆ 4 ನೇ ಹಂತ ಪ್ರವೇಶಿಸಿದರು..
ನಾಲ್ಕನೇ ಹಂತ ಪ್ರವೇಶಿಸಿದರು ಈಗೊಂದು ದ್ವೀಪದಲ್ಲಿದ್ದರು…..
ದಟ್ಟಾರಣ್ಯದ ನಟ್ಟ ನಡುವೆ ಆದರೆ ಖಾಲಿ ಮೈದಾನದಲ್ಲಿದ್ದರು…
ಇದು ಹಗಲು…
ಸ್ಕ್ರೀನ್ ಮೇಲೆ
ದಿನ – 3 ಅಂತ ಇತ್ತಾದ್ರೂ
ಇದ್ಯಾವ ಲೋಕ ಎಂಬ ಕುತೂಹಲ ಎಲ್ಲರಲ್ಲೂ…
ದೂರ ದೂರದ ವರೆಗೂ ಯಾವುದೂ ಸುಳಿವಿಲ್ಲ… ಎಲ್ಲಿಗೆ ಹೋಗಬೇಕೆಂಬ ಅರಿವಿಲ್ಲ..
ಆಗಲೇ
ಗೇಮ್ ಹುಡುಗಿಯ ಧ್ವನಿ ಕೇಳಿಸುತ್ತೆ..
ಜೊತೆಗೆ ಕಾಣದ ಬೋರ್ಡ್ ಮೇಲೆ ಪದಗಳಷ್ಟೇ ಕಾಣುತ್ತೆ..
Stage 1 – Deadly Zombies – Cleared
Stage 2 – Killer Plants – Cleared
Stage – 3 – Snakes Land – Cleared
Stage – 4 Dinosaurs Land
Wellcome To Stage – 4 Dinosaurs Land
ಎಲ್ಲರ ಮಾತು ನಿಂತುಹೋಗಿತ್ತು ಬೋರ್ಡ್ ನೋಡಿ , ಗೇಮ್ ಹುಡುಗಿಯ ಧ್ವನಿ ಕೇಳಿ..
ಡೈ…ಡೈ..ಡೈನೋಸರ್ ಎಂದು ತೊದಲುತ್ತಾ ತೇಜಸ್ವಿ ಭಯದಲ್ಲಿ ಉಸಿರು ಬಿಗಿ ಹಿಡಿದು ನುಡಿದಿದ್ದೇ ತಡ ಅದೋ ಅಲ್ಲಿ ದೂರದಿಂದ ಗುಂಪು ಡೈನೋಸರ್ ಗಳು ಓಡಿ ಬರುತ್ತಿದ್ರೆ ಇವರ ಜೀವ ಬಾಯಿಗೆ ಬಂದಾಗಿತ್ತು…
– ನಿಹಾರಿಕಾ ರಾವ್ –
ಗಮನಿಸಿ : ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…
ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..
ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…
ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..
ಮೊದಲ ಅಧ್ಯಾಯ – 1
ಅಧ್ಯಾಯ – 2
Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)
ಅಧ್ಯಾಯ – 3
ಅಧ್ಯಾಯ – 4
ಅಧ್ಯಾಯ – 5
ಅಧ್ಯಾಯ – 6
ಅಧ್ಯಾಯ – 7
ಅಧ್ಯಾಯ – 8








