ADVERTISEMENT
Friday, March 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 15 ( ಕೊನೆಯ ಅಧ್ಯಾಯ )

Author Special Series : ನಿಗೂಢ ಟಿವಿ‌ ಜಗತ್ತು - ಅಧ್ಯಾಯ 15 , ಫ್ಯಾಂಟಸಿ , ಥ್ರಿಲ್ಲಿಂಗ್ ಕಥೆ.. ಮತ್ತೊಂದು ಜಗತ್ತಿನ ಜೊತೆಗೆ ನಿಮ್ಮನ್ನ ಸೇರಿಸುವ ಕಥೆ..

Namratha Rao by Namratha Rao
August 21, 2022
in Newsbeat, Saaksha Special, ಎಸ್ ಸ್ಪೆಷಲ್
saakshatv special stories horror
Share on FacebookShare on TwitterShare on WhatsappShare on Telegram

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 15 ( ಕೊನೆಯ ಅಧ್ಯಾಯ )

(  ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ  ಲಿಂಕ್ ಗಳನ್ನ ಕ್ಲಿಕ್ ಮಾಡಿ )

Related posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

March 6, 2026
ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

March 6, 2026

ಅಧ್ಯಾಯ – 15 ( Final Episode )

ಇಲ್ಲಿಯವರೆಗೂ

ಆ ಬಂಗಲೆ ಸುತ್ತ ಭಯಾನಕ ಜೊತೆಗೆ ಮನಮೋಹಕ ದೃಶ್ಯ …  ಸೇತುವೆ, ಕೆಳಗೆ ನೀರು , ಸುತ್ತ ಗಿಡಮರಗಳ  ಸಾಲು ಮನಸ್ಸಿಗೆ ಮುದವೂ ನೀಡ್ತಿದೆ… ಭಯವನ್ನೂ ಹೆಚ್ವಿಸುತ್ತಿದೆ..

ಗೇಮ್ ಹುಡುಗಿ ಧ್ವನಿ ಕೇಳಿತ್ತು..

Wellcome to Final stage – Deadly PuZZle  world

ಈ ಗೇಮ್ ನ ರೂಲ್ಸ್ ನ ಆ ಹುಡುಗಿ ಹೇಳಿದ್ದಳು..  ಈ ಬಂಗಲೆಯಲ್ಲಿ 8 ಕ್ಲೂಗಳಿರುತ್ತೆ.. 8 ಇಂಗ್ಲಿಷ್ ಲೆಟರ್ ಗಳನ್ನ ಹುಡುಕಬೇಕು..

ಆ 8 ಇಂಗ್ಲಿಷ್ ಲೆಟರ್ ಗಳಿಂದ ಶುರುವಾಗುವ ಪದಗಳನ್ನ ನೀವು ಊಹೆ ಮಾಡಿ ಅದನ್ನ ಬಂದು ಬೋರ್ಡ್ ಮೇಲೆ ಬರೆಯಬೇಕು..

ಆ ಪದಗಳು ನೀವು ಗೇಮ್ ಗೆ ಬರುವಾಗಿನಿಂದ ಹಿಡಿದು ಮುಗಿಯುವವರೆಗೂ ನಿಮ್ಮ ಜರ್ನಿಯ ಅನುಭದ ಜೊತೆಗೇ ಸೇರಿಸುತ್ತದೆ…‌

ನಿಮ್ಮ ಬಳಿ ಇರೋದು ಕೇವಲ 30 ನಿಮಿಷ ಎಂದ ಧ್ವನಿ ಮಾಯ..

ಎಲ್ಲರಿಗೂ ಆತಂಕ… ಭಯ.. ಸಾಧ್ಯವಾ ಎಂಬ ಪ್ರಶ್ನೆ… ಆದ್ರೆ ಧೈರ್ಯ ಕಳೆದುಕೊಳ್ಳಲಿಲ್ಲ.. ಆ ಬಂಗಲೆ ನೋಡಲು ಭಯಾನಕವಾಗಿದೆ.. ಆದ್ರೂ ಧೈರ್ಯ ಮಾಡಿ ಎಲ್ಲರೂ ಒಳಗೆ ಹೋದವರು ಒದೊಂದು ದಿಕ್ಕಿಗೆ ಒಬ್ಬೊಬ್ಬರು ಹೋದರು…

ಮನಸ್ವಿ ಹೋಗುವಾಗ ಮೋಕ್ಷಿತ್ ನ ಬಿಗಿದಪ್ಪಿ ಎಲ್ಲರಿಗೂ ಆಲ್ ದಿ ಬೆಸ್ಟ್ ಹೇಳಿ ಧೈರ್ಯವಾಗಿರುವಂತೆ ಹೇಳಿ ಹೊರಟಿದ್ದಳು..

@@@@@@@

ಮೋಕ್ಷಿತ್ …

ಮೋಕ್ಷಿತ್ ಒಂದು ದಿಕ್ಕಿಗೆ ಹೋಗುತ್ತಾನೆ… ಒಂದು ರೂಮಿಗೆ ಹೋಗಿ ಹುಡುಕಾಟ ನಡೆಸುತ್ತಾ ಮನಸಲ್ಲಿ ಮನಸ್ವಿ ಬಗ್ಗೆ  ಚಿಂತೆಯೂ ಇರುತ್ತೆ..

ಸೋಫಾ ಚೇರ್ ಗಳನ್ನೆಲ್ಲಾ ಎತ್ತೆತ್ತಿ‌ ನೋಡ್ತಿದ್ದಾನೆ… ಏನೇನೂ ಸಿಗುತ್ತಿಲ್ಲ.. ಜೇಡರ ಬಲೆಗಳನ್ನೂ ಒರೆಸಿ ನೋಡಿದ ಎಲ್ಲೆಲ್ಲಿ‌ ನೋಡಿದ್ರೂ ಆತನಿಗೆ ಏನೇನೂ ಸಿಗ್ತಿಲ್ಲ..

ಆದರೆ ಇದ್ದಕ್ಕಿದ್ದ ಹಾಗೆ ಅವನ ಮುಂದೆ ಅತ್ತ ಮುಖ ಮಾಡಿ ನಿಂತಿರುವ ವ್ಯಕ್ತಿ‌ ಕಂಡಿದ್ದ ಗೋಡೆ ಮರೆಯಲಿ… ಭಯಕ್ಕೆ ಅವನ ಕಾಲುಗಳು ನಿಂತಿವೆ..

ಹೆದರಿಕೆಯಲ್ಲಿ ನಿಧಾನವಾಗಿ ಯಾ….ಯಾರು..??? ಎಂದವನ ಧ್ವನಿ ಕೇಳಿ ಅವನತ್ತ ನಿಧಾನವಾಗಿ ಕತ್ತು ವಾಲಿಸಿ ತಿರುಗಿದ್ದು ಝೋಂಬಿಯಾಗಿತ್ತು…

😳😳😳

ಝೋ…ಝೋಂಬಿ ಇಲ್ಲಿಗೆ ಹೇಗೆ…??? ಎಂದುಕೊಂಡವನು ಹಿಂದಿಂದೆ ಸರಿಯುತ್ತಿದ್ದಾನೆ.. ಅದವನ ಮುಂದೆ ಮುಂದೆ ಬರುತ್ತಿದೆ.. ಮೋಕ್ಷಿತ್ ಕೈ ಕಾಲು ಆಡದೇ ಹೆದರಿ‌ ಅಲ್ಲೇ ಕೆಳಗೆ ಬಿದ್ದವನಗೆ ಅಲ್ಲೇ ಇದ್ದ ಕಬ್ಬಿಣದ ರಾಡ್ ಸಿಕ್ಕಿಬಿಟ್ಟಿತ್ತು.. ಧೈರ್ಯ ಮಾಡಿ ಮೇಲೆದ್ದವನು ಆ ಝೋಂಬಿಗೆ ರಾಡ್ ಬೀಸಿಬೀ ಬಿಟ್ಟನು…

ರಾಡ್ ಬೀಸಿ ಆ ಝೋಂಬಿ ಕತ್ತು‌ ಸೀಳಿದ್ದ.. ರುಂಡ ಬೇರ್ಪಟ್ಟಾಗಿದ್ದರೂ ಈಗಲೂ ಝೋಂಬಿ ಒದ್ದಾಡುತ್ತಲೇ ಇದೆ..  ಅಷ್ಟಕ್ಕೆ ಅವನ ಕಷ್ಟ ಮುಗಿಯಲಿಲ್ಲಾ… ಅದೇ ರೂಮಿನಲ್ಲೇ ಮತ್ತೊಂದು ಬದಿಯಿಂದ ಒಂದು ಹಿಂಡು ಝೋಂಬಿಗಳು ಅವನಿಗೆ ಕಂಡಿದ್ದೇ ತಡ ಅವು ಅವನ ಬಳಿ ಬರುವಷ್ಟ್ರಲ್ಲೇ ಅವನು ಅಲ್ಲಿಂದ ಓಡಬೇಕು ಇನ್ನೇನು…

ಆಗಲೇ ಮೋಕ್ಷಿತನ ಕಣ್ಣಿಗೆ ಆ ಗೋಡೆಯ ಬಳಿ ಇದ್ದ ಗಡಿಯಾರ ಕಂಡಿತ್ತು.. ಅವನು ಗಡಿಯಾರದ ಬಳಿ ಹೋಗಿ ಹಿಂದೆಲ್ಲಾ ಹುಡುಕಿದ್ದಾನೆ.. ಅಲ್ಲವನಿಗೆ ಸಿಕ್ಕಿದ್ದೇ  H ಅಕ್ಷರ…

ಆ ಅಕ್ಷರ ತೆಗೆದುಕೊಂಡವನು ರೂಮಿನಿಂದ ಇನ್ನೇನು ಹೊರ ಹೋಗಬೇಕು ಒಮ್ಮೆಲೆ‌ ಝೋಂಬಿಗಳು ಅವನನ್ನ ಸುತ್ತುವರೆಯಲಾರಂಭಿಸಿದ್ದವು.. ಆದರೆ ಅವುಗಳನ್ನ ಒದ್ದು ಹೇಗೋ ರೂಮಿನಿಂದ ಹೊರಬಂದಿದ್ದ ಮೋಕ್ಷಿತ್ ಝೋಂಬಿಗಳನ್ನ ಅಲ್ಲೇ ಲಾಕ್ ಮಾಡಿಬಿಟ್ಟಿದ್ದ..

ಒಂದೇ ಉಸಿರಲ್ಲೇ ಓಡೋಡಿ ಹೋದವನು ಮಿಕ್ಕವರಿಗಾಗಿ ಹುಡುಕಾಟ ಶುರು ಮಾಡಿದ್ದ…

@@@@@@@@@@

ಮನಸ್ವಿ ….

ಧೂಳು ಜಾಡು ತುಂಬಿದ ಕೋಣೆಯಲ್ಲಿ‌ ಮನಸ್ವಿ ಕ್ಲೂ ಗಾಗಿ‌ ಹುಡುಕಾಡುತ್ತಿದ್ದಾಳೆ..‌ ಸಮಯದ ಚಿಂತೆ.. ಟೈಮ್ ಓಡ್ತಿದೆ ಎಂಬ ಭಯ.. ಹೀಗೆ ಹುಡುಕಾಡುತ್ತಾ ನಿಂತವಳಿಗೆ ತನ್ನ ಹಿಂದೆ ಏನೋ ಬುಸುಗುಡುತ್ತಿರುವ ಜೋರು ಸದ್ದು…

ಹೆದರಿಕೆಯಿಂದಲೇ ಹಿಂದೆ ತಿರುಗಿದ ಮನಸ್ವಿ ಉಸಿರು ನಿಂತುಹೋಗಿತ್ತು.. ಅವಳ ಹಿಂದೆ ನಿಂತಿದ್ದದ್ದು ಕೆಂಪು ದೈತ್ಯ ಭಯಾನಕ ಹಾವು.. ಮತ್ತೆಲ್ಲಿ ಕಾಲುಗಳಲ್ಲಿ ಶಕ್ತಿ ಇರುತ್ತೆ.. ಮಾತು ಹೊರಬರುತ್ತೆ..

ಭಯದಲ್ಲಿ ನಡುಗುತ್ತಿದ್ದವಳ ಕಡೆಗೆ ಆ ಹಾವು ಅವಳನ್ನ ನುಂಗಲು ಮುಂದುವರೆದಾಗ ಆ ರೂಮಿನ ಬಳಿ ಓಡಿ ಬಂದಿದ್ದ ಮೋಕ್ಷಿತ್ ಅಲ್ಲೇ ಸಿಕ್ಕ ಚೂರಿಗಳಿಂದ‌ ಆ ಹಾವಿಗೆ ಒಮ್ಮೆಲೆ ಚುಚ್ಚಲಾರಂಭಿಸಿದ್ದ…

ಆ ಹಾವು ಮನಸ್ವಿ ಬಿಟ್ಟು ಮೋಕ್ಷಿತ್ ಮೇಲೆ ದಾಳಿ‌ ಮಾಡಲು ತಿರುಗಿದೆ.. ಮನಸ್ವಿ ಭಯದಲ್ಲಿ ಏನ್ ಮಾಡುವುದು ಗೊತ್ತಾಗದೇ ಅಲ್ಲೇ ಹುಡುಕಾಡುವಾಗ ಅವಳಿಗೆ ಅಲ್ಲಿ ಅದ್ ಹೇಗ್ ಗನ್ ಸಿಗುತ್ತೋ ಗೊತ್ತಿಲ್ಲ ಆದ್ರೆ ಅಲ್ಲೇ ದೂರದಲ್ಲಿ‌ ಕಿಟಕಿ‌ ಬಳಿ ಇದ್ದ ಗನ್ ತೆಗೆದು ಆ ಹಾವಿಗೆ ಶೂಟ್ ಮಾಡಿ ಬಿಡ್ತಾಳೆ.. ಆ ಹಾವು ನರಳಾಡುತ್ತಾ ಕೆಳಗೆ ಬೀಳುತ್ತೆ ಅವನ‌ ಹಿಡಿತ ಸಡಿಲಿಸಿ.. ಮನಸ್ವಿ ಆತಂದಲ್ಲಿ ಹೋಗಿ ಅವನನ್ನ ಮೇಲೆತ್ತಿ ಅವನನ್ನ ಅಲ್ಲಿಂದ ಇನ್ನೇನು ವಾಪಸ್ ಕರೆದುಕೊಂಡು ಹೋಗಬೇಕು ಅಲ್ಲೇ ಇದ್ದ ಫ್ಲವರ್ ವಾಸ್ ಅವಳ ಕಣ್ಣಿಗೆ ಬೀಳುತ್ತೆ… ಯಾಕಂತ ಗೊತ್ತಿಲ್ಲ ಅವಳ ಕಾಲುಗಳು ತನ್ ತಾನೆ ಆ ವಾಸ್ ಕಡೆಗೆ ಚಲಿಸುತ್ತವೆ.. ಸನಿಹ ಹೋಗಿ ನೋಡಿದವಳಿಗೆ ಆ ವಾಸ್ ನಲ್ಲಿ ಕೈ ಹಾಕಿದಾಗ ಸಿಕ್ಕಿದ್ದು L ಅಕ್ಷರ…

ಅದನ್ನ ತೆಗೆದವಳು ಮೋಕ್ಷಿತ್ ಕಡೆ ಖುಷಿಯಾಗಿ‌ ನೋಡಿದರೂ ಅವಳ ಖುಷಿ ಮತ್ತೆ ಭಯಕ್ಕೆ ಬದಲಾಗಲೂ ಸೆಕೆಂಡ್ ತೆಗೆದುಕೊಳ್ಳಲಿಲ್ಲ.. ಮತ್ತೆ ಆ ಹಾವು‌ ಮೇಲೆದ್ಧದ್ದು ನೋಡಿ.. ಭಯದಲ್ಲಿ ಮನಸ್ವಿ  ಮೋಕ್ಷಿತ್ ಕೈ ಹಿಡಿದು‌ ಹೊರ ಓಡಿ ಹೋದವಳೇ ಆಚೆಯಿಂದ ಬಾಗಿಲು ಬಡೆದು ಚಿಲಕ ಸೇರಿಸಿದ್ದಳು..

ಹೆದರಿದ್ದಳು ಮೋಕ್ಷಿತನ ಬಿಗಿದಪ್ಪಿ ನಿಟ್ಟುಸಿರು ಬಿಟ್ಟಿದ್ದಳು‌.

@@@@@@@@

ತೇಜಸ್ವಿ

ಮಹಡಿ ಮೇಲಿನ ರೂಮಿನಲ್ಲಿ‌  ಹುಡುಕಾಟ ನಡೆಸುವಾಗ ಅದೆಲ್ಲಿಂದ ಅವಳ ಮುಂದೆ ಡೆಡ್ಲಿ ಗಿಡಗಳು ( ಕಿಲ್ಲರ್ ಪ್ಲಾಂಟ್ ) ಪ್ರತ್ಯಕ್ಷವಾಗಿತ್ತೂ ಗೊತ್ತಿಲ್ಲವಾದ್ರೆ ಹದರಿಕೆಗೆ ಬಿದ್ದವಳ ಕಡೆಗೆ ಆ ಗಿಡ ಬಾಗಿತ್ತು..

ಆದ್ರೆ ಅವಳು ನೆಲದ ಮೇಲೆ ಕೈ ಚಾಚಿ ತಡಕಾಡುವಾಗಲೇ ಅವಳ ಕೈಗೊಂದು ಗಾಜಿನ ಚೂರು ಸಿಕ್ಕಿ ಆ ಗಿಡದ ಕತ್ತು ಸೀಳಿದಳು‌. ಆ ಗಿಡದ ಕರ್ಕಶ ನರಳಾಟದ ಸದ್ದಿಗೆ ಹೆದರಿದ್ದವಳಿಗೆ  ಆ ಗಿಡದ ಹಿಂದಿದ್ದ ಪಾಟ್ ನಲ್ಲಿ ಸಿಕ್ಕ ಲೆಟರ್ C ..

ಇನ್ನೇನು ಹೊರಬೇಕೆಂದುಕೊಂಡಳಿಗೆ ಆ ಕೋಣೆಯ ತುಂಬೆಲ್ಲಾ ಆ ಗಿಡಗಳು ಕಂಡು ಮೈ ನಡುಗಿತ್ತು.. ಈಗವಳೂ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ದೇ ಒಂದೇ ಉಸಿರಲ್ಲಿ‌ ಹೋಗಿ ರೂಮ್ ಬಾಗಿಲು ಹಾಕಿದ್ದಳು…

@@@@@@@@@@@@@@@

ಅಂತೆಯೇ ಡೈನೋಸರ್ , ಮಾನ್ ಸ್ಟರ್ ( ರಾಕ್ಷಸ ) , ಚಾಕೋಲೇಟ್ ಭೂತವನ್ನು ಎದುರಿಸಿ ಮಿಕ್ಕವರೂ ತಂದಿದ್ದ ಅಕ್ಷರಗಳು F , C , U , F, D

ಎಲ್ಲರೂ ಒಟ್ಟಾಗಿ ಹಾಲ್ ನಲ್ಲಿ ಸೇರಿದ್ದರು… ಎಲ್ಲರ ಬಳಿಯೂ ಅಕ್ಷರಗಳಿದ್ದವು..‌

ಸಮಯ ಇನ್ನಿರೋದು 10 ನಿಮಿಷವಷ್ಟೇ ಹಾಲ್‌ ನಲ್ಲಿದ್ದ. ಬೋರ್ಡ್ ಬಳಿ ಹೋದ

ಮನಸ್ವಿ ಲೆಟರ್ ಇಟ್ಟವಳು

ಕಣ್ಮುಚ್ಚಿ ಮೋಕ್ಷಿತ್ ಬಗ್ಗೆ ಯೋಚಿಸುತ್ತಾ ಎಲ್ಲರಿಗಾಗಿ ವಿಶೇಷವಾಗಿ ಅವಳಿಗಾಗಿ ಅವನ ಜೀವ ತ್ಯಾಗ ಮಾಡಲು ಹೊರಟ  , ಅವಳಿಗೆ ಪ್ರೀತಿ ತಿಳಿಸಿದ್ದನ್ನ ನೆನಪಿಸಿಕೊಂಡವಳು ಧೀರ್ಘವಾದ ಉಸಿರು ಬಿಟ್ಟು ,, ಈ ವಿಚಿತ್ರ ಜಗತ್ತಿನಲ್ಲಿ ವಿಚಿತ್ರ ಸ್ಥಿತಿಯಲ್ಲಿ ಸಿಕ್ಕ ಪ್ರೀತಿಯ ಬಗ್ಗೆ ಯೋಚಿಸಿ

L – Love ( ಪ್ರೀತಿ )

ಎಂದು ಬರೆದರೆ ಎಲ್ಲರಲ್ಲೂ ಆತಂಕ ಉತ್ತರ ಸರಿಯೋ‌ ಇಲ್ಲವೋ ಅಂತ..

ಮೋಕ್ಷಿತ್ ಗೆ ಖುಷಿ..

ಮೋಕ್ಷಿತ್ ಹೋದವನು

ಮೊದಲ ಬಾರಿಗೆ ಮನಸ್ವಿ  ಗೇಮ್ ನೊಳಗೆ ಸಿಕ್ಕು ಅವಳು ತುಂಬಿದ ಧೈರ್ಯ , ಅವಳ ಆತ್ಮವಿಶ್ವಾಸ ನೆನೆದ..‌

H – Hope ( ಭರವಸೆ ) ನಿಜ ಅವಳು ಅವನ ಜೀವನದ ಭರವಸೆಯಾದಳು..

ಎಂದು ಬರೆದು ಥ್ಯಾಂಕ್ಸ್ ಫಾರ್ ಗಿವಿಂಗ್ ಮಿ ಹೋಪ್ ಎಂದ..

ತೇಜಸ್ವಿ ಬಂದು

ತಾನು ಆ ಗಿಡದ ಜೊತೆಗೆ ಸಮಯ ಬಂದಾಗ ಹೋರಾಡಿದ ರೀತಿ ನೆನಪಾಗಿ , ಒಬ್ಬರೇ ಇಂತಹ ಸಂದರ್ಭವನ್ನ ಎದುರಿಸುವ ಧೈರ್ಯದ ಬಗ್ಗೆ ಯೋಚಿಸಿ

C – Courage ( ಧೈರ್ಯ )

ಮಿಕ್ಕವರಲ್ಲಿ

ಒಬ್ಬರು

F – Fear ( ಭಯ )

ಎಂದು ಬರೆದರು..  ಪ್ರತಿ ಹಂತದಲ್ಲೂ ಅವರಲ್ಲಿ ಭಯವಿದ್ದದ್ದು , ಕ್ಷಣಕ್ಷಣಕ್ಕೂ ಅವರ ಜೀವ ನಡುಗಿದ್ದು. ಎಲ್ಲವನ್ನೂ ನೆನೆದಿದ್ದರು..

ಮತ್ತೊಬ್ಬರು

C – Confidence ( ವಿಶ್ವಾಸ)

ಆತ್ಮವಿಶ್ವಾಸ ಕಳೆದುಕೊಂಡಿದ್ದರು ಎಲ್ಲರೂ.‌ ಅದಕ್ಕೆ ವರ್ಷವಾದ್ರೂ ಇಲ್ಲೇ ಇದ್ದರು.. ಆದ್ರೆ ಕ್ರಮೇಣ ಮನಸ್ವಿ ಎಲ್ಲರ ಆತ್ಮವಿಶ್ವಾಸ ಹೆಚ್ಚಿಸಿದ್ದಾಗಲೇ ಇಲ್ಲಿಂದ ಹೊರಹೋಗುವ ವಿಶ್ವಾಸ ಅವರಲ್ಲಿ‌ ಮೂಡಿದ್ದು.. ವಿಶ್ವಾಸವಿದ್ದರೆ ಯಾವುದೂ ಸಾಧ್ಯವಾಗದ್ದೇನಿಲ್ಲ…

ಇನ್ನೊಬ್ಬರು

F – Faith

ನಂಬಿಕೆ‌.. ಹೊರಬರುತ್ತೇವೆ ಎಂದು ಶುರುವಾದ ಹೊಸ ನಂಬಿಕೆ ಪರಸ್ಪರರ ಮೇಲೆ ನಂಬಿಕೆ…‌ ಎಲ್ಲರಲ್ಲೂ ಸಂದರ್ಭ ಹುಟ್ಟಿಸಿತ್ತು.. ನಂಬಲೇಬೇಕಾದ ಅನಿವಾರ್ಯವೂ… ಅದನ್ನ ಬಿಟ್ಟು ಬೇರೆ ದಾರಿ ಅವರ ಬಳಿ ಇರಲಿಲ್ಲ..

ಇನ್ನೊಬ್ಬರು

D – Determination

ಗುರಿ ಮುಟ್ಟುವ ಛಲ‌, ಏಕಾಗ್ರತೆ

ಕೊನೆಯದಾಗಿ ಮತ್ತೊಬ್ಬರು

U – Unity ( ಒಗ್ಗಟ್ಟು )

ಎಂದು ಬರೆದಿದ್ದರು..

ಒಗ್ಗಟ್ಟು … ಎಲ್ಲರೂ ಒಟ್ಟಿಗೆ ಟೀಮ್ ವರ್ಕ್ ಮಾಡಿದ್ದರು.. ಒಗ್ಗಟ್ಟಾಗಿ ಹೋರಾಡಿದರು.. ಒಗ್ಗಟ್ಟಿನಲ್ಲಿ‌ ಬಲವಿದೆ ಎಂಬುದನ್ನ ಸಾಬೀತು ಮಾಡಿದ್ದರು..

ಗೇಮ್ ಹುಡುಗಿ‌ ಧ್ವನಿ ಕೇಳಿಸುತ್ತೆ ಎಲ್ಲರ ಹೃದಯದಲ್ಲಿ ನಗಾರಿ ಬಾರಿಸುತ್ತಿರುವುದು ಸ್ಪಷ್ಟ. ಫೈನಲ್ ಸ್ಟೇಜ್ ಎಡವಿದ್ರೆ ಎಲ್ಲಾ ವ್ಯರ್ಥ ಅನ್ನೋ ಆತಂಕ ಭಯ..

ಗೇಮ್ ಹುಡುಗಿ..

ನಿಮ್ಮ ಉತ್ತರಗಳು ಹೀಗಿವೆ..

Love
hope
Courage
Fear
Faith
Determination
confidence
Unity

ಈ ಉತ್ತರಗಳೆಲ್ಲವೂ ….. ಸರಿ ಇವೆ…!!!!!!!!!! ಎಂದು ಕಿರುಚುವ ಧ್ವನಿಗೆ ಎಲ್ಲರ‌ ಮುಖದಲ್ಲೂ ಖುಷಿ ಸ್ಪಷ್ಟ ಕಣ್ಣೀರು  ತುಂಬಿಕೊಂಡಿದೆ.. ಪರಸ್ಪರ ಅಪ್ಪಿ ಭಾವುಕರಾಗಿದ್ದಾರೆ… ಮೋಕ್ಷಿತ್ ಮನಸ್ವಿ ಅಪ್ಪಿಕೊಂಡು ಕಣ್ಣೀರಿಡುವಾಗ..

ಗೇಮ್ ಹುಡುಗಿ ಹೇಳ್ತಾಳೆ..

ನೀವೀಗ ಸೀದಾ ಈ ಬಂಗಲೆಯ ಬ್ರಿಡ್ಜ್ ದಾಟಿದರೆ ಈ ಗೇಮ್ ಜಗತ್ತಿನಿಂದ ವಾಪಸ್ ಹೋಗುತ್ತೀರಾ ಆದ್ರೆ ಇನ್ನೂ ಗೇಮ್ ಮುಗಿದಿಲ್ಲವೆಂಬ ಧ್ವನಿಯೊಂದಿಗೆ ಅಂತ್ಯವಾದಾಗ ಎಲ್ಲರಿಗೂ ಆತಂಕ‌ ಶುರುವಾಗಿದೆ…

ಆಗಲೇ ಅವರು ಗೊಂದಲದಲ್ಲಿದ್ದಾಗಲೇ ಅವರ ಮುಂದೆ ಧಿಡೀರ್ ಪ್ರತ್ಯಕ್ಷವಾಗುತಾನೆ ವಿಜ್ಞಾನಿ.. ಅವನನ್ನ‌ ನೋಡಿ ಎಲ್ಲರಿಗೂ ಸಿಟ್ಟುಕ್ಕುತ್ತಿದೆ..

ಆದ್ರೆ ವಿಜ್ಞಾನಿ ಗಹಗಹಿಸಿ ನಗುತ್ತಾ ,, ಎಲ್ಲಾ ಹಂತಗಳನ್ನ ಮುಗಿಸಿದ್ರಿ ಅಂತ ನಿಮ್ಮನ್ನ ಹೊರ  ಕಳಿಸಿದ್ರೆ ಹೊರ‌ಬಂದು ನೀವೆಲ್ಲಾ ಸೇರಿ ನನ್ನ ಕೃತ್ಯ ಬಹಿರಂಗ ಪಡಿಸಿ ನನ್ನ ಕಥೆ ಮುಗಿಸ್ತೀರಾ.. ಅದ್ರ‌ ಬದಲು ನೀವೆಲ್ಲಾ ಗೇಮ್ ನೊಳಗೇ ಇರಿ‌‌ ಬೆಸ್ಟ್ ಪ್ಲೇಸ್ ನಿಮಗೆ.. ಐ ಪ್ರಾಮೀಸ್ ನಿಮಗೆ ಇಲ್ಲಿ ಒಳ್ಳೆ ಲೈಫ್ ಸಿಗುತ್ತೆ ಎಂದವನ ಮಾತಿಗೆ ಯಾರೂ ತಲೆ ಕೆಡಿಸಿಕೊಳ್ದೇ ಕೋಪದಲ್ಲಿ ಅವನಿಗೆ ಹೊಡೆಯಲು ಹೋದರೆ ,, ವಿಜ್ಞಾನಿ ರಿಮೋರ್ಟ್ ಬಟನ್ ಪ್ರೆಸ್ ಮಾಡುತ್ತಾನೆ.. ಇದ್ದಕ್ಕಿದ್ದ ಹಾಗೆ ಎಲ್ಲಾ ಬಾಗಿಲುಗಳು ತೆರೆದುಕೊಳ್ಳುತ್ತೆ.. ಡೆಡ್ಲಿ ಗಿಡಗಳು ಅವರತ್ತ ತೆವಳಿ ಬರುತ್ತಿದೆ.. ಹಾವು , ಚಾಕೊಲೇಟ್ ಮ್ಯಾನ್ , ಡೈನೋಸರಸ್ ,  ಮಾನ್ ಸ್ಟರ್ , ಝೋಂಬಿಗಳೆಲ್ಲಾ ಅವರತ್ತ ಬರುತ್ತಿವೆ ಒಟ್ಟಿಗೆ..

ಎಲ್ಲರ‌ ಜೀವ ಬಾಯಿಗೆ ಬಂದಿದೆ.. ಸಮಯ ಉಳಿದಿರೋದು ಇನ್ನ 2 ನಿಮಿಷ ಮಾತ್ರ ಆಗಲೇ ಮನಸ್ವಿ ತಲೆಗೆ ಏನೋ ಹೊಳೆದಿತ್ತು.. ಮನಸ್ವಿ ಜಾಡಿಸಿ ಸೈಂಟಿಸ್ಟ್ ಗೆ ಎದೆಗೆ ಒದೆಯುವ ಬಲಕ್ಕೆ ಆತ ಕೆಳಗೆ ಬಿದ್ದಿದ್ದರೆ‌‌  ಮನಸ್ವಿ ಒಂದೇ ಉಸಿರಲ್ಲಿ ರನ್… ಎಂದು ಕಿರುಚಿದರೆ ಎಲ್ಲರೂ ಒಂದೇ‌ ಉಸಿರಲ್ಲಿ ಆ ಮನೆಯಿಂದ ಆಚೆ ಓಡುವರು .. ಮನಸ್ವಿ‌ ಕೂಡ ಓಡೋಡಿ ಹೋದರೆ .. ವಿಜ್ಞಾನಿ‌ ಅವಾಕ್ ಆಗಿದ್ದ.. ಮೇಲೆದ್ದವನಲ್ಲಿ ಆತಂಕ.. ಓಡೋಡಿ ಹೋದವನ ಕೈನಿಂದ ರಿಮೋಟ್ ಬಿದ್ದಿದೆ.. ಎಲ್ಲಿ ಎಂದು ತಡಕಾಡುತ್ತಿದ್ದವನ ಉಸಿರು ನಿಂತೆ ಹೋಗುವ ಭಯ.. ರಿಮೋಟ್ ಸಿಗದೇ ಹೋದಾಗ ಡೋರ್ ಬಳಿ ಓಡಿ ಹೋದನು.. ಆದರೆ ಹೊರಗಿನಿಂದ ಅವರೆಲ್ಲಾ ಲಾಕ್ ಮಾಡಿದ್ದಾರೆ..ಮ ಬಾಗಿಲು ದಬ ದಬ ಬಡೆಯುತ್ತಾ ಕಿರುಚುತ್ತಾ ,, ಪ್ಲೀಸ್ ಪ್ಲೀಸ್ ಡೋರ್ ತೆಗೆಯಿರಿ ಎಂದರೆ ಹೊರಗಡೆ ಬಂದವರಿಗೆ ಇವನ ಮೇಲೊಂದಿಷ್ಟೂ ಕನಿಕರವಿರಲಿಲ್ಲ..

ಅವನ ಸುತ್ತಲೂ ಆ ಪ್ರಾಣಿ , ಗಿಡಗಳೆಲ್ಲಾ ಸುತ್ತುವರೆದಿವೆ..‌
ಈ ದೃಶ್ಯ ಕಿಟಕಿಯಲ್ಲಿ ನೋಡಿದವರಿಗೆ ಸಮಾಧಾನ.. ಮನಸ್ವಿ ಕೂಗುತ್ತಾ ” ಓ ಸೈಂಟಿಸ್ಟ್ ನೀನು‌ ತೋಡಿದ ಹಳ್ಳ.. ನೀನೇ‌‌ ಬಿದ್ದಿದ್ಯಾ..‌ ಗೇಮ್ ಆಡೋದು ಅಂದ್ರೆ ಹುಚ್ಚು ಅಲ್ವಾ.. ಈಗ ಆಡು.. ಜೀವನ ಪೂರ್ತಿ‌‌ ಇಲ್ಲೆ ಸಾಯಿ ಎಂದವಳು ಎಲ್ಲರ ಜೊತೆ  ಓಡೋಡಿ ಹೋಗುವರು ಎಲ್ಲರೂ ಸೇತುವೆ ದಾಟಿ ಹಸಿರು ಗೆರೆಯನ್ನೂ ದಾಟಿದ್ದರು..

ಅದೃಶ್ಯ ಬೋರ್ಡ್ ನಲ್ಲಿ ಪ್ರಕಟವಾಯ್ತು..

Game End

Stage 1 – Deadly Zombies –  Clear

stage 2 – Killer Plants – Clear

stage 3 – Snakes land – Clear

Stage 4 – Dionasaurs world –  Clear

Stage 5 – Monstar World – Clear

stage 6 – chocolate World – Clear

Stage 7 – Puzzle – Solved

congratulations – You Are The First to clear every stages ….

ಎಂದೊಡನೆ ಹೂಮಳೆ ಸುರಿಯಲಾರಂಭಿಸುತ್ತು.. ಇತ್ತ ಎಲ್ಲರ ಕಣ್ಗಳಲ್ಲಿ‌‌ ನೀರು ಜಾರಲಾರಂಭಿಸಿತ್ತು ಖುಷಿಗೆ..

ಆದ್ರೆ ಮೋಕ್ಷಿತ್ ಮನಸ್ವಿ ಮನಸ್ಸು ವಿಚಲಿತಗೊಂಡಿತ್ತು.. ಹೊರಗೋದ ಮೇಲೆ ಎಲ್ಲಾ ನೆನಪಿರುತ್ತಾ.. ? ನಾವು ಸಿಗ್ತೀವಾ ಎಂದು.. ಹೀಗಾಗಿ ಇಬ್ಬರೂ ಕಣ್ತುಂಬಿಕೊಂಡು ಬಿಗಿದಪ್ಪಿದ್ದಾರೆ..

ಎಲ್ಲರೂ ಭಾವುಕರಾಗಿದ್ದಾರೆ…‌

ಮೋಕ್ಷಿತ್ ಅವಳನ್ನ ಅಪ್ಪಿ ಐ ಪ್ರಾಮೀಸ್ ಕಣೆ ನಾನು ನೀನು ಮತ್ತೆ ಭೇಟಿಯಾಗಿ ಒಂದಾಗ್ತೇವೆ… ನೆನಪಿರಲಿ ಇಲ್ಲದೇ ಇರಲಿ.. ನಮ್ಮ‌ ನಡುವಿನ  ಬಾಂಧವ್ಯ ನಮ್ಮನ್ನ ಖಂಡಿತ ಒಂದು ಮಾಡುತ್ತೆ ಎಂದವನ ಅಪ್ಪಿ‌ ಅಳುತ್ತಿದ್ದಾಳೆ.. ಅವನು ಅವಳ ಹಣೆಗೆ ಮುತ್ತಿಟ್ಟು ಕೈ‌ಹಿಡಿದು ನಿಧಾನವಾಗಿ ಬೆಳಕಿನಿಂದಾಚೆ ನಡೆದರೆಲ್ಲರೂ…‌

ಇತ್ತ ಸೈಂಟಿಸ್ಟ್ ರಿಮೋಟ್ ಸಿಗದೇ ಓಡಾಡ್ತಿದ್ದವನು ಟೈಮ್ ಮೀರಿದ ನಂತರ ಮೊದಲನೇ ಹಂತ ತಲುಪಿದ್ದ.. ಝೋಂಬೀಸ್ ವರ್ಲ್ಡ್ ಗೆ..

ಮಜಾ ಅಂದ್ರೆ ಅವನೇ ಸೃಷ್ಟಿಸಿದ ಜಗತ್ತಿನಲ್ಲಿ ಅವನನ್ನ ಸ್ವಾಗತಿಸಿದಳು

ಅದೇ ಗೇಮ್ ಹುಡುಗಿ , ಅವನೇ ಸೃಷ್ಟಿಸಿದ ಗೇಮ್ ಹುಡುಗಿ

Wellcome to Stage 1  – Deadly ZOmbies

ಸೈಂಟಿಸ್ಟ್ ಭಯದಲ್ಲಿ‌ ಕೂಗಾಡುತ್ತಾ ಗೇಮ್ ಹುಡುಗಿಗೆ ಬಯ್ಯುತ್ತಾ ಶಟ್ ಅಪ್ ನಿಲ್ಸು ನಾನು‌ ನಿನ್ನ ಸೃಷ್ಟಿಸಿದ್ದು ಎಂದರೂ ಯಾರೂ ಅವನ ಮಾತು‌ ಕೇಳದೇ ಝೋಂಬಿಗಳು ಅವನನ್ನ ಅಟ್ಟಾಡಿಸುತ್ತಿವೆ..

@@@@@@@@@@

ಎಲ್ಲರೂ ಹೊರ ಬಂದ ನಂತರ…

ಒಂದು‌ ದಿನದ ನಂತರ ಬೆಳ್ಳಂ ಬೆಳಿಗ್ಗೆ ಮನಸ್ವಿ‌ ಮನೆಯಲ್ಲಿ ತೇಜಸ್ವಿ ಧ್ವನಿ ಕೇಳಿ ಆಘಾತದಿಂದ ಅವಳ ಕೋಣೆಯತ್ತ ಓಡೋಡಿಹೋದ ತಂದೆತಾಯಿಗೆ ಅವಳು‌ ಕಣ್ಬಿಟ್ಟಿದ್ದು ‌ನೋಡಿ ಕನಸಾ ನನಸಾ ಎಂಬ ಗೊಂದಲ್ಲಿದ್ದವರ ಖುಷಿಗೆ ಪಾರವೇ ಇಲ್ಲ .. ಕಣ್ಣೀರ ಧಾರೆ ಹರಿಯುತ್ತಿದೆ..

ಖುಷಿಗೆ ಅವಳ ಬಳಿ ಕುಳಿತು ಹಡಬಡಿಯಲ್ಲಿ ವೈದ್ಯರಿಗೆ ಕರೆಮಾಡುದವರಿಗೆ ಮತ್ತೊಂದು  ಶಾಕಿಂಗ್ ನ್ಯೂಸ್ ಕೊಟ್ಟಿದ್ದರು ವೈದ್ಯರು..

ಮನಸ್ವಿಗೆ ಪ್ರಜ್ಞೆ ಬಂದಿದ್ದಾಗಿ ತಿಳಿಸಿದಾಗ ಅವರಿಬ್ಬರ ಅಪ್ಪ ಅಮ್ಮಂದಿರ ಕಣ್ಣೀರು ನಿಲ್ಲುವ ಮಾತೇ ಇಲ್ಲ‌.. ವಿಶ್ವಾಸವನ್ನೇ ಕಳೆದುಕೊಂಡಿದ್ದವರಿಗೆ ತಮ್ಮಿಬ್ಬರು ಹೆಣ್ಣುಮಕ್ಕಳು ಜೀವಂತ ಶವವಾಗಿದ್ದನ್ನ ನೋಡಲಾಗದೇ ನರಳಾಡುತ್ತಿದ್ದವರಿಗೆ ಈ ಖುಷಿ ಆಘಾತವೇ.. ಇಬ್ಬರೂ ಒಂದೇ ದಿನ ಮರಳಿ ವಾಪಸ್ ಸಿಕ್ಕಿದ್ದು ಪವಾಡವೇ…

ಈ ದಿನ ಎಲ್ಲಾ ಟಿವಿ ಚಾನೆಲ್ ಗಳಲ್ಲೂ ಬ್ರೇಕಿಂಗ್ ನ್ಯೂಸ್… ಒಂದೆ ದಿನ 8  ಜನರು ಕೋಮಾದಿಂದ ಹೊರಬಂದಿದ್ದಾರೆ.. ವಿಜ್ಞಾನ ಜಗತ್ತಿಗೆ ಸವಾಲ್…!!!

ವೈದ್ಯಾರೇ  ದಂಗು..!!!

ಒಂದೇ ಕ್ಯಾಂಪ್ ಗೆ ಹೋಗಿ ಒಟ್ಟಿಗೆ ಕೋಮಾ ಸೇರಿದ್ದವರೆಲ್ಲರೂ ಒಂದೇ ಸಲವೇ ಕೋಮಾದಿಂದ ಹೊರಬಂದಿದ್ದು ಪವಾಡ ಅದು ಇದು ಅಂತ ಹೆಡ್ ಲೈನ್ಸ್ ಹಾಕುತ್ತ ತಮಗೆ ತೋಚಿದ ಕಥೆಗಳನ್ನ ಹೆಣೆದು ಹಾಕುತ್ತಿದ್ದರಾದ್ರೂ  ಎಲ್ಲರಿಗೂ ಆಶ್ಚರ್ಯವೇ ಹೇಗೆ ಇದು ಸಾಧ್ಯ ಅಂತ.. ಆದ್ರೆ ಎಲ್ಲರ ತಂದೆ ತಾಯಿಗೆ ಹೋದ ಜೀವ ವಾಪಸ್ ಬಂದಿತ್ತು..

ಘಟನೆ ನಡೆದು ಒಂದು ವಾರದ ನಂತರ ಎಲ್ಲರೂ ಸಹಜವಾಗಿ ಓಡಾಡುವಂತಾಗಿದ್ದರು…  ಆದ್ರೆ ಆ ಟಿವಿ ಬಗ್ಗೆ ಯಾರೊಬ್ಬರೂ ತುಟಿ ಬಿಚ್ಚಲಿಲ್ಲ.. ಯಾರೂ ನಂಬಲ್ಲಾ ಅನ್ನೋ ಯೋಚನೆಯೋ ಅಥವ ತಮ್ಮಂತೆಯೇ ಕುತೂಹಲಕ್ಕೆ ಬಿದ್ದು ಮತ್ತೆ ಇನ್ನೊಬ್ಬರು ಹೋಗಬಹುದೆಂದೋ ಅಥವ ಇದೇ ಮಾದರಿಯಲ್ಲಿ ಬೇರೆಯವರೂ ಆವಿಷ್ಕರಿಸಬಹುದೋ ಏನೋ ಎಂಬ ಆಲೋಚನೆಯಲ್ಲಿ ಮುಚ್ಚಿಟ್ಟಿದ್ದರು..

ಯಾರೂ ಸಹ ಆ ಭಯಾನಕ ಘಟನೆ ಮರೆತಿರಲಿಲ್ಲ.. ಮಾನಸಿಕವಾಗಿ ಸಂಪೂರ್ಣ ಗುಣಮುಖರಾಗಲು ಸಮಯ ಬೇಕಿತ್ತು..

ಮನಸ್ವಿ‌ ಮನೆ ಬಾಗಿಲು ಬೆಳ್ಳಂ ಬೆಳಿಗ್ಗೆ ಯಾರೋ ತಟ್ಟಿದ್ದು ಕೇಳಿ ಮನಸ್ವಿ ಹೋಗಿ ಬಾಗಿಲು ತೆಗೆದರೆ ಅವಳ ಮುಂದಿದ್ದವರು ಮತ್ಯಾರೂ ಅಲ್ಲ ಮೋಕ್ಷಿತ್.. ಅವನನ್ನ ನೋಡಿ ಭಾವುಕಳಾಗಿ ಅವನನ್ನ ಅಪ್ಪಿಕೊಳ್ಳಬೇಕು ಆದ್ರೆ ಅವನ ಜೊತೆಗೆ ಅವನ ತಂದೆ ತಾಯಿ ಅಣ್ಣ ತಂಗಿ ಇದ್ದಿದ್ದರಿಂದ ಸುಮ್ಮನಾಗಿದ್ದಳು , ಆಘಾತದಲ್ಲೂ ಇದ್ದಳು..

ಆಗಲೇ ತೇಜಸ್ವಿ ನಗುತ್ತಾ ಬಂದು ಬನ್ನಿ ಒಳಗೆ ಎಂದು ಎಲ್ಲರನ್ನೂ ಸ್ವಾಗತಿಸಿದ್ರೆ ,, ಮನಸ್ವಿಯನ್ನೇ ನೋಡುತ್ತಾ ಒಳಗೆ ಬರುವನು ಮೋಕ್ಷಿತ್ ….

ಇಬ್ಬರ ಕಣ್ಣೋಟ ಬೆರೆತು ಮನಸ್ಸುಗಳು ಒಂದಾಗಿ ಉಸಿರ ಸ್ಪರ್ಷಕ್ಕೆ ಹೊಟ್ಟೆಯೊಳಗೆ ಚಿಟ್ಟೆಗಳ ಓಡಾಟ ಶುರುವಾಗಿತ್ತು..

ತೇಜಸ್ವಿ ಇಡೀ ಮನೆಯವರಿಗೆ ಇವರ ಪ್ರೀತಿ ವಿಚಾರ ತಿಳಿಸಿದ್ದಳು.‌ ಅಷ್ಟೇ ಅಲ್ಲ ಮೋಕ್ಷಿತ್ ಅಣ್ಣ ಸುಮಂತ್ ನ ಪ್ರೀತಿಸುತ್ತಿರುವ ವಿಚಾರವನ್ನೂ ತಿಳಿಸಿದ್ದರು.. ಇವರಿಬ್ಬರ ಮದುವೆ ಮಾತುಕತೆಗೆ ಕರೆಸಲಾಗಿತ್ತು.. ಒಂದೇ ದಿನ ಈ ನಾಲ್ವರಿಗೂ ಮದುವೆ ಮಾಡಿಸಲು ನಿಶ್ಚಯ ಮಾಡಲಾಯ್ತು.. ಎಲ್ಲರೂ ಖುಷಿಯಾಗಿದ್ದರು..

ಇಷ್ಟಕ್ಕೆ ಮುಗುಯಿತೇ..??? ಸಾಧ್ಯವೇ ಇಲ್ಲ..

ಒಂದು ವಾರದ ನಂತರ ಇವರೆಲ್ಲಾ ರಾತ್ರಿ ಕದ್ದು‌ ಮುಚ್ಚಿ ಅದೇ ಹಾಳು ಬಂಗಲೆಗೆ ವಾಪಸ್ ಹೋಗಿದ್ದರು..

ಅಲ್ಲಿ ಮನಸ್ವಿ ಹೇಳುವಳು.. ನಾನು ಗೇಮ್ ಜಗತ್ತಿನೊಳಗೆ ಆ ವಿಜ್ಞಾನಿಯ ಛವಿ ನೋಡಿದಾಗಲೇ ನನಗೆ ಫ್ಲಾಶ್ ಆಗಿತ್ತು‌. ಆ ವಿಜ್ಞಾನಿಯ ಇದೇ ಫೋಟೋ ಈ ಬಂಗಲೆಯಲ್ಲಿ ನೋಡಿದ್ದು.. ಅದ್ಯಾಕೆ ನೆನಪಾಯಿತೆಂದ್ರೆ ಆ ಫೋಟೋ ಸಾಮಾನ್ಯದಂತೆ ಕಂಡಿರಲಿಲ್ಲ.. ಬೃಹದಾಕಾರದಲ್ಲಿತ್ತು‌…

ಅದಕ್ಕೂ ಇದಕ್ಕೂ ಯಾವುದೋ ಸಂಬಂಧವಿರಲೇಬೇಕೆಂದು ಊಹಿಸಿದ್ದೆ.. ಆಗ ತಲೆಗೆ ಹೊಳೆದಿತ್ತು ನನಗೆ.. ಆ ವಿಜ್ಞಾನಿ ಬೇರೆಲ್ಲೋ  ಇಲ್ಲೇ ಬಂಗಲೆಯಲ್ಲೇ ಇರುತ್ತಾನಂತ.. ಅವನು ಇಲ್ಲೇ ಇರಬಹುದು ಎನಿಸಲು ಕಾರಣವೂ ಇದೆ.. ಅದು ಆ ಬಂಗಲೆಯ ಲೈಟ್.. ಇಷ್ಟ್ ವರ್ಷವಾದ್ರೂ ಆ ಕಾಡಲ್ಲಿ ಲೈಟ್ ವ್ಯವಸ್ಥೆ ಇದೆ ಎಂದ್ರೆ.. ನೋ ಡೌಟ್ ಆ ಸೈಂಟಿಸ್ಟ್ ಈಗಲೂ ಅಲ್ಲಿದ್ದಾನೆ ಅಂತ ನನಗೆ ಅನಿಸಿತ್ತು.. ಪಕ್ಕಾ ಅವನಿಗೆ ಆ ಊರಿನಲ್ಲೇ ಯಾರೋ ಒಬ್ಬರು ರಾತ್ರಿ ಹೊತ್ತಲ್ಲಿ ಬಂದು ಸಹಾಯ ಮಾಡ್ತಾ ಬೇಕಾಗಿರೋದನ್ನ ತಂದುಕೊಡ್ತಾ ಇರುತ್ತಾರೆ , ಅವರೇ ಇಲ್ಲಸಲ್ಲದ ವದಂತಿಗಳನ್ನ ಹಬ್ಬಿಸಿ ಜನರನ್ನ ಇತ್ತ ಬಾರದಂತೆ ಮಾಡಿರುತ್ತಾರೆ.. ಇಲ್ಲಿಗೆ ವಿಜ್ಞಾನಿ ಹುಡುಕಿ ಬಂದವರು ಮಾಯ ಆಗೋದರ ಹಿಂದೆಯೂ ಅವರೇ ಕಾರಣೀಭೂತಾರಗಿತ್ತಾರೆ ಎಂದು ಅಂದಾಜಿಸಿದ್ದೆ..

ಅಷ್ಟೇ ಅಲ್ಲ ನಾನು ಆ ಬಂಗಲೆಯಲ್ಲಿ ಸಿಸಿ ಕ್ಯಾಮೆರಾಗಳನ್ನ ಗಮನಿಸಿದ್ದೆ. ಅವುಗಳನ್ನ ಬಚ್ಚಿಡಲಾಗಿತ್ತು.. ಅದಕ್ಕೆ ಯಾರೂ ಗಮನಿಸಲಿಲ್ಲ.. ನಾನು ಹೇಗೋ ಒಂದು ಕ್ಯಾಮೆರಾವನ್ನ ನೋಡಿಬಿಟ್ಟಿದ್ದೆ.. ಅದು ಯಾರದ್ದೂ ಅಂತ ಖಾತ್ರಿ ಪಡಿಸಿಕೊಳ್ಳಲು ಹೋಗಿ ಅನಿರೀಕ್ಷಿತವಾಗಿ ಗೇಮ್ ಗೆ ಪ್ರವೇಶಿಸಿದ್ದೆ ಎಂದವಳ ಮಾತಿಗೆ ಎಲ್ಲರೂ ಶಾಕ್ ಆಗಿದ್ದರು.. ಅವಳ ಸ್ಮಾರ್ಟ್ ನೆಸ್ ಗೆ ಮತ್ತೆ ಇಂಪ್ರೆಸ್ ಆಗಿದ್ದರು..

ಮನಸ್ವಿ ಮಾತು ಕೇಳಿ ಎಲ್ಲರೂ ಆ ಫೋಟೋ ಬಳಿಗೆ ಹೋಗುವರು..

ಆದ್ರೆ ಆ ವಿಜ್ಞಾನಿಯ ದೊಡ್ಡ ಫೋಟೋ ಹಿಂದೆ ಇದ್ದ ವಿಜ್ಞಾನಿಯ ಸೀಕ್ರೆಟ್ ರೂಮಿಗೆ ನುಗ್ಗಿದ್ದವರು ಅವನ ದೇಹವೂ ಅಲ್ಲಿ ಬಿದ್ದದ್ದನ್ನ ನೋಡಿ , ಅವನ  ಹೆಂಡತಿಯ ಡೆಡ್ ಬಾಡಿ‌ ನೋಡಿ ಶಾಕ್ ಆಗಿದ್ದರು.. ಕೊನೆಗೆ ಇವರೇ ಅವರಿಬ್ಬರ ದೇಹಗಳನ್ನ ಆ ಬಂಗಲೆ ಹೊರಾಂಗಣದಲ್ಲೇ  ಹೋಗಿ ಊತು ಬಂದವರು. ಟಿವಿ ಸ್ಕ್ರೀನ್ , ಲ್ಯಾಬ್ , ಎಲ್ಲಾ ಆವಿಷ್ಕಾರಗಳನ್ನ ಚೂರ್ ಚೂರ್ ಮಾಡಿ ಸಂಪೂರ್ಣವಾಗಿ ನಾಶ ಮಾಡಿ ಅಲ್ಲಿದ್ದ ಲ್ಯಾಪ್ ಟಾಪ್ ನಿಂದ ಎಲ್ಲಾ ಡೇಟಾ ಡಿಲೀಟ್ ಮಾಡಿ ,,  ಪೆನ್ ಡ್ರೈವ್ ನೂ ಒಂದ್ ಗತಿ ಕಾಣಿಸಿ  ಅವನ  ಇಡೀ ಲ್ಯಾಬ್ ನೇ ಸರ್ವ ನಾಶ ಮಾಡಿ ಬಂದರು.. ಮತ್ಯಾರೂ ಅಲ್ಲಿ ಸಿಕ್ಕಿಕೊಳ್ಳಬಾರದು  , ಅಲ್ಲಿಗೆ ಹೋದರೂ ಅವರಿಗೇನೂ ಸುಳಿವು ಸಿಗಬಾರದು ಯಾವುದರದ್ದು ಅನ್ನೋದು ಅವರ ಉದ್ದೇಶ. ಆದ್ರೆ ಆ ವಿಜ್ಞಾನಿ ಏನಾದ..‌ ಗೊತ್ತಿಲ್ಲ..

ಆದ್ರೆ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದದ್ದಂತೂ ಸತ್ಯ..

– ಮುಕ್ತಾಯ –

@@@@@@@@@@@@@@@@

– ನಿಹಾರಿಕಾ ರಾವ್ –

ಗಮನಿಸಿ :  ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ  Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…

ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..

ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…

ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..

 

ಮೊದಲ ಅಧ್ಯಾಯ – 1

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 1

ಅಧ್ಯಾಯ – 2

Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)

ಅಧ್ಯಾಯ – 3

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 3

ಅಧ್ಯಾಯ – 4

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 4

ಅಧ್ಯಾಯ – 5

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 5

ಅಧ್ಯಾಯ – 6

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 6

ಅಧ್ಯಾಯ – 7

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 7

ಅಧ್ಯಾಯ  – 8

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 8

 

Tags: fantasynigooda tv jagattuSaakshatv Special Series
ShareTweetSendShare
Join us on:

Related Posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

by Shwetha
March 6, 2026
0

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆಯನ್ನು ಅಮೆರಿಕ ಮುಳುಗಿಸಿರುವ ಘಟನೆ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಘಟನೆಯ ಬಗ್ಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,...

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

by Shwetha
March 6, 2026
0

ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಚಿಂತಿಸುತ್ತಿರುವ ಯುವಕ-ಯುವತಿಯರಿಗೆ, ಸಣ್ಣ ಉದ್ಯಮಿಗಳಿಗೆ ಹಾಗೂ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಭಾರತೀಯ ಅಂಚೆ ಇಲಾಖೆಯು...

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

by Shwetha
March 6, 2026
0

ಇತ್ತೀಚೆಗೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಾಗೂ ಸಿನಿಮಾಗಳ ಮೂಲಕವೂ ಸದ್ದು ಮಾಡುತ್ತಿರುವ ಲವ್ ಜಿಹಾದ್ ಪ್ರಕರಣಗಳು ಕರ್ನಾಟಕದಲ್ಲಿಯೂ ಆತಂಕ ಸೃಷ್ಟಿಸುತ್ತಿವೆ. ಹುಬ್ಬಳ್ಳಿಯಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ,...

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

by Shwetha
March 6, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಹಿಂದೂ ಮಹಾಸಾಗರದಲ್ಲಿ ತನ್ನ ಯುದ್ಧನೌಕೆಯನ್ನು ಹೊಡೆದುರುಳಿಸಿದ ಅಮೆರಿಕದ...

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

by Shwetha
March 6, 2026
0

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇರಾನ್–ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಬಂದ್ ಅನ್ನು ಇರಾನ್ ಬಂದ್ ಮಾಡಿರುವುದರಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram