ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸಾಧುಕೋಕಿಲ ಆಯ್ಕೆಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೆಸರು ಘೋಷಿಸಿದ್ದಾರೆ.
2022ರಲ್ಲಿ ಛಾಯಾಗ್ರಹಕ ಅಶೋಕ್ ಕಶ್ಯಪ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಇದಕ್ಕೂ ಮುನ್ನ ನಟ ಸುನಿಲ್ ಪುರಾಣಿಕ್ ಅಧ್ಯಕ್ಷರಾಗಿದ್ದರು. ಸದ್ಯ ಸಾಧು ಕೋಕಿಲ ಅವರಿಗೆ ಅಧ್ಯಕ್ಷ ಸ್ಥಾನ ಧಕ್ಕಿದೆ. ಹಾಸ್ಯ ಹಾಗೂ ಹಿರಿಯ ನಟ ಸಾಧು ಕೋಕಿಲ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರು. ಅಲ್ಲದೇ ಕಾಂಗ್ರೆಸ್ ಪಕ್ಷದ ಜೊತೆ ಕೂಡ ಗುರುತಿಸಿಕೊಂಡಿದ್ದರು. ಅವರು ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ಕೂಡ ನೇಮಕವಾಗಿದ್ದರು.
ಸಾಧು ಕೋಕಿಲ ಅವರು ಚಿತ್ರರಂಗದಲ್ಲಿ ನಟ, ನಿರ್ದೇಶಕ, ಸಂಗೀತಾ ನಿರ್ದೇಶಕ, ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಶ್ ಚಿತ್ರದ ಮೂಲಕ ಸಾಧು ಕೋಕಿಲ ಅವರು ಸಿನಿಮಾ ಜರ್ನಿ ಆರಂಭಿಸಿದ್ದರು. ಆನಂತರ ಚಂದನವನದ ಬಹು ಬೇಡಿಕೆಯ ಹಾಸ್ಯ ನಟರಾಗಿ ಗುರುತಿಸಿಕೊಳ್ಳುವುದರೊಂದಿಗೆ ಸಂಗೀತ, ನಿರ್ದೇಶನದಲ್ಲಿ ಭಾರೀ ಹೆಸರು ಮಾಡಿದ್ದಾರೆ.