ಅಕ್ರಮ ಸಂಬಂಧದ ಗುಮಾನಿ ಹಬ್ಬಿಸಿದ ಟ್ರೋಲಿಗರ ವಿರುದ್ಧ ಕೆಂಡಕಾರಿದ ಸಮಂತಾ..!
ಸೌತ್ ಸಿನಿಮಾ ಇಂಡಸ್ಟ್ರಿಯ ಕ್ಯೂಟ್ ಕಪಲ್ ಅಂತಾನೇ ಕರೆಸಿಕೊಂಡಿದ್ದ ಸಮಂತಾ ನಾಗಚೈತನ್ಯ ಮದುವೆಯಾದ 4 ವರ್ಷಗಳ ಬಳಿಕ ಡಿವೋರ್ಸ್ ಪಡೆದುಕೊಂಡು 10 ವರ್ಷಗಳ ಪ್ರೀತಿ , ಸ್ನೇಹಕ್ಕೆ ಎಳ್ಳುನೀರು ಬಿಟ್ಟಿದ್ದಾರೆ. ಆದ್ರೆ ವಿಚ್ಛೇಧನಕ್ಕೆ ಅಸಲಿ ಕಾರಣ ಈವರೆಗೂ ತಿಳಿದುಬಂದಿಲ್ಲ.
ಆದ್ರೆ ಹಲವರು ಹಲವು ರೀತಿಗಳಲ್ಲಿ ಮಾತನಾಡುತ್ತಿದ್ದಾರೆ. ಟ್ರೋಲಿಗರು ಟ್ರೋಲ್ ಗಳನ್ನ ಮಾಡುತ್ತಿದ್ದಾರೆ. ಸಮಂತಾಗೆ ಅಕ್ರಮ ಸಂಬಂಧ ಸಂಬಂಧ ಇರೋದಾಗಿ ಅನೇಕರು ಮಾತನಾಡ್ತಿದ್ದಾರೆ. ಇಂತಹ ಟ್ರೋಲ್ ಗಳಿಂದ ಸಿಟ್ಟಾಗಿರುವ ಸ್ಯಾಮ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಬಗ್ಗೆ ಹಲವು ರೂಮರ್ಗಳು ಹಬ್ಬಿವೆ. ನನಗೆ ಅಕ್ರಮ ಸಂಬಂಧ ಇದೆ. ಮಕ್ಕಳು ಬೇಡ ಅಂದಿದ್ಎ. ಅಬಾರ್ಷನ್ ಮಾಡಿಸಿಕೊಂಡಿದ್ದೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ವಿಚ್ಛೇದನ ಎಂಬುದೇ ನೋವಿನ ವಿಷಯವಾಗಿದೆ. ಅದರಿಂದ ಹೊರ ಬರಲು ಸಮಯ ಬೇಕಿದೆ. ಆದರೆ ಅದರ ನಡುವೆ ಈ ರೀತಿಯ ರೂಮರ್ಗಳು ಹಬ್ಬಿದೆ. ಆದರೆ ಇವುಗಳಿಂದ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿಯೂ ಈ ಬಗ್ಗೆ ಬರೆದುಕೊಂಡಿರುವ ನಟಿ ಮಹಿಳೆಯರು ಮಾತ್ರ ನಿರಂತರವಾಗಿ ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೆ, ಅದೇ ಪುರುಷ ಮಾಡಿದಾಗ ನೈತಿಕವಾಗಿ ಅವರನ್ನು ಯಾಕೆ ಪ್ರಶ್ನಿಸುವುದಿಲ್ಲ. ಹಾಗಿದ್ದರೆ ನಾವು ಸಮಾಜದಲ್ಲಿ ಮೂಲಭೂತ ನೈತಿಕತೆಯನ್ನು ಹೊಂದಿಲ್ಲವ ಎಂದು ಪೋಸ್ಟ್ ಮಾಡಿದ್ದಾರೆ.