Sandalwood : ನಿಶ್ಚಿತಾರ್ಥ ಮಾಡಿಕೊಂಡ ನಟ ಲೋಕೇಶ್ ಬಸವಟ್ಟಿ ಮತ್ತು ನಟಿ ರಚನಾ ದಶರಥ್…
ಹಿರಿ ಮತ್ತು ಕಿರು ತೆರೆಯಲ್ಲಿ ನಿಶ್ಚಿತಾರ್ಥದ ಹಂಗಾಮ ಜೋರಾಗಿ ನಡೆಯುತ್ತಿದೆ. ಮತ್ತೊಂದು ತಾರಾ ಜೋಡಿ ಹಸೆಮಣೆ ಏರಲು ಸಜ್ಜಾಗಿದ್ದು ಇತ್ತೀಚೆಗಷ್ಟೆ ಎಂಗೇಜ್ ಮೆಂಟ್ ರಿಂಗ್ ಬದಲಾಯಿಸಿಕೊಂಡಿದೆ.
ಕಿರುತೆರೆ ನಟ ಲೋಕೇಶ್ ಬಸವಟ್ಟಿ ಮತ್ತು ನಟಿ ರಚನಾ ದಶರಥ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವಿಚಾರವನ್ನ ಇನ್ಸ್ಟಾಗ್ರಾಂ ಮುಖಾಂತರ ಬಹಿರಂಗ ಪಡಿಸಿದ್ದಾರೆ.
‘’ಒಪ್ಪಿದಳು.. ಆದರೆ ಅವಳು ಮಾತ್ರವಲ್ಲ. ಇಬ್ಬರು ಒಪ್ಪಿಕೊಂಡು ಹೊಸ ಜೀವನಕ್ಕೆ ಕಾಲಿಡ್ತಾ ಇದ್ದೀವಿ’’ ಎಂದು ನಟ ಲೋಕೇಶ್ ಬಸವಟ್ಟಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಹಾಸ್ಯ ಪಾತ್ರಗಳ ಮುಖಾಂತರವೇ ಜನಪ್ರಿಯತೆ ಪಡೆದಿರುವ ನಟ ಲೋಕೇಶ್ ಬಸವಟ್ಟಿ. ‘ಸಿಲ್ಲಿ ಲಲ್ಲಿ’, ‘ಪಾಯಿಂಟ್ ಪರಿಮಳಾ’, ‘ಪಾರ್ವತಿ ಪರಮೇಶ್ವರ’ ಮುಂತಾದ ಸೀರಿಯಲ್ಗಳಲ್ಲಿ ನಟಿಸಿದ್ದಾರೆ. ನಟಿ ರಚನಾ ‘ಮಾತು ಕಥೆ’, ‘ಯೋಗಿ ದುನಿಯಾ’, ‘ಸಮರ್ಥ’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮೂಲತಃ ನೇಪಾಳಿ ಫ್ಯಾಮಿಲಿಯದಾದರೂ ಹುಟ್ಟಿ ಬೆಳೆದಿದ್ದೇಲ್ಲವು ಬೆಂಗಳೂರಿನಲ್ಲಿಯೇ.
Sandalwood: Actor Lokesh Basavatti and actress Rachana Dashrath got engaged…