Sandalwood : ಅತ್ಯಾಚಾರ ಪ್ರಕರಣದಲ್ಲಿ ಕನ್ನಡ ಸಿನಿಮಾ ನಿರ್ಮಾಪಕ ಅರೆಸ್ಟ್
ಕನ್ನಡದ ಸಿನಿಮಾ ನಿರ್ಮಾಕ ಹರ್ಷವರ್ಧನ್ ಟಿ.ಜಿ.ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುವ ಅಮೀಷವೊಡ್ಡಿ ನಂತರ ಮದುವೆಯಾಗುವುದಾಗಿ ಭರವಸೆ ನೀಡಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿರುವ ಆರೋಪದಡಿ ಪೊಲೀಸರು ನಿರ್ಮಾಕನನ್ನ ಬಂಧಿಸಿದ್ದಾರೆ..
ನಿರ್ಮಾಪಕ ಹರ್ಷವರ್ಧನ್ ‘ಮಿಷನ್ 2023’ ಸಿನಿಮಾದಲ್ಲಿ ನಟಿಸಿ , ನಾಯಕನಾಗಿಯೂ ಕಾಣಿಸಿಕೊಂಡಿದ್ದರು.. ಅವರ ಸಿನಿಮಾಗಳಲ್ಲಿ ಸಹ ನಟಿಯಾಗಿ ನಟಿಸುತ್ತಿದ್ದ ಯುವತಿಗೆ ತನ್ನ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮದುವೆಯಾಗುವುದಾಗಿ ನಂಬಿಸಿ ಯುವತಿ ಜೊತೆಗೆ ದೈಹಿಕವಾಗಿ ಸಂಪರ್ಕ ಬೆಳೆಸಿದ್ದನು.. ಈಗ ಮದುವೆ ಆಗುವಂತೆ ಕೇಳಿದರೆ ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಹಲ್ಲೆ ಮಾಡಿದ್ದಾನೆ ಅಲ್ಲದೆ ಜೀವ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಎಂದು ಯುವತಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಹರ್ಷವರ್ಧನ್ ಅನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
Bollywood : ಆಲಿಯಾ ‘ಗಂಗೂಭಾಯಿ ಕಾಥಿಯಾವಾಡಿ’ ರಿಲೀಸ್ ಡೇಟ್ ರಿವೀಲ್..!!!
RGV | ಪಬ್ ನಲ್ಲಿ ರಾಮ್ ಗೋಪಾಲ್ ವರ್ಮಾ ಜುಮ್ ಜುಮ್ಮಾಯ..!
kannada film producer arrested in rape case