ಮಕರ ಸಂಕ್ರಾತಿಯ  ಪೌರಾಣಿಕ ಹಿನ್ನಲೆ ಮತ್ತು ವೈಜ್ಞಾನಿಕ ನೋಟ..!

1 min read

ಮಕರ ಸಂಕ್ರಾತಿಯ  ಪೌರಾಣಿಕ ಹಿನ್ನಲೆ ಮತ್ತು ವೈಜ್ಞಾನಿಕ ನೋಟ..!

ಹಿಂದೂಗಳು ಆಚರಣೆ ಮಾಡುವ ಮುಖ್ಯ ಹಬ್ಬಗಳಲ್ಲಿ ಒಂದಾಗಿರುವ ಮಕರ ಸಂಕ್ರಾಂತಿಯು ಅನೇಕ ವಿಶೇಷತೆಗಳಿಂದ ಕೂಡಿದೆ. ಒಂದೊಂದು ಭಾಗದಲ್ಲೂ ಒಂದೊಂದು ರೀತಿಯಲ್ಲಿ ವಿಶೇಷವಾಗಿ ಆಚರನೆ ಮಾಡಲಾಗುತ್ತೆ. ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಅದ್ಧೂರಿಯಾಗಿ ಸಂಕ್ರಾಂತಿ ಆಚರಿಸಲಾಗುತ್ತೆ. ವರ್ಷದ ಮೊದಲ ಬೆಳೆ, ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆ.  ಅದ್ರಲ್ಲೂ ಮುಖ್ಯವಾಗಿ ಕರ್ನಾಟಕ,  ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಈ ಹಬ್ಬವನ್ನ ಅದ್ಧೂರಿಯಾಗಿ ಸಾಂಪ್ರದಾಯಿಕ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ.

ಪೌರಾಣಿಕ ಹಿನ್ನೆಲೆ

ಈ ಮಕರ ಸಂಕ್ರಾತಿಯ ಪೌರಾಣಿಕ ಹಿನ್ನೆಲೆಯನ್ನ ನೋಡೋದಾದ್ರೆ ಜ್ಯೋತಿಷ್ಯ ಶಾಸ್ತ್ರ, ಪುರಾಣಗಳಲ್ಲಿ ಅನೇಕ ವಿಭಿನ್ನ ರೀತಿಯ ವಿಶ್ಲೇಷಣೆಗಳು ಸಿಗುತ್ತವೆ. ಜೋತಿಷ್ಯ ಶಾಸ್ತ್ರದ ಪ್ರಕಾರ ನೋಡುವುದಾದರೆ,  ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿವುದನ್ನೇ, ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಜನವರಿ 14 ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ  ಕತೆಯಲ್ಲಿ ಇಚ್ಚಾ ಮರಣಿಯಾದ.  ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವೂ ಇದೆ.

ಜಗಚ್ಚಕ್ಷುವಾದ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ.

ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ, ಎಲ್ಲೆಲ್ಲಿ ಹೇಗೆ ಆಚರಣೆ ಮಾಡಲಾಗುತ್ತೆ ನಿಮಗೆ ಗೊತ್ತಿದ್ಯಾ…!

ಇನ್ನೂ ಇದನ್ನ ಉತ್ತರಾಯಣ ಪಣ್ಯ ಕಾಲ ಎಂದೂ  ಕರೆಯಲಾಗುತ್ತೆ.  ಮಾಸದಲ್ಲಿ ಬರುವ (ಜನವರಿ 13 ಅಥವಾ 14 ರಂದು) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.

ಸೂರ್ಯನು ಇದೇ ಜನವರಿ 13 ರಂದು ರಾತ್ರಿ 12 ಗಂಟೆ 57 ನಿಮಿಷಕ್ಕೆ ನಿರಯಣ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆಗೆ ರಾತ್ರಿಯಾಗಿದ್ದರಿಂದ ಜನವರಿ 14ರಂದು ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. 14ರಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ.

ವೈಜ್ಞಾನಿಕ ನೋಟ:

ರೈತರು ತಾವು ಬೆಳೆದ ಧಾನ್ಯ, ಕಬ್ಬನ್ನು ಈ ದಿನ ದೇವಸ್ಥಾನಕ್ಕೆ, ತನ್ನ ನೆರೆಹೊರೆಯವರಿಗೆ ಹಂಚುತ್ತಾರೆ. ಜೊತೆಗೆ ಎಳ್ಳು  ಬೆಲ್ಲವನ್ನು ಆತ್ಮೀಯರಿಗೆ ಹಂಚುವ ಮೂಲಕ ಒಳ್ಳೆಯ ಮಾತಾಡಿ ಎಂಬ ಸಂದೇಶ ರವಾನಿಸುತ್ತಾರೆ. ಈ ಮೂಲಕ ಮತ್ತಷ್ಟು  ಬಾಂಧವ್ಯವನ್ನು ಸದೃಢಗೊಳ್ಳುತ್ತೆ. ಇನ್ನೂ  ಚಳಿಗಾಲದ ಶೀತ ವಾತಾವರಣದಲ್ಲಿ ದೇಹಕ್ಕೆ ಉಷ್ಣತೆಯನ್ನು ನೀಡುವುದರ ಜೊತೆಗೆ ಇ ಪದಾರ್ಥಗಳು  ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿರೋದು ವೈಜ್ಞಾನಿಕ ಕಾರಣವಾಗಿದೆ.

ಇನ್ನೂ ವರ್ಷವಿಡೀ ಬೆವರು ಸುರಿಸಿ ದುಡಿವ ರೈತನಿಗೆ ಹೆಗಲಾಗಿದ್ದುಕೊಂಡು ಶ್ರಮಿಸುವ ಹಸುಗಳಿಗೂ ಈ ದಿನ ಸ್ನಾನ ಮಾಡಿಸಿ ಬಣ್ಣಗಳಿಂದ ಹಸುಗಳಿಗೆ ಅಲಂಕಾರ ಮಾಡಿ ಕಾಲಿಗೆ ಗೆಜ್ಜೆಗಳನ್ನು ಕಟ್ಟಿ, ಪೂಜೆ ಮಾಡುತ್ತಾರೆ. ಸಂಜೆಯ ವೇಳೆ ಭತ್ತದ ಹುಲ್ಲಿನ ರಾಶಿ ಹಾಕಿ ಕಿಚ್ಚನ್ನು ಉರಿಸಲಾಗುತ್ತದೆ. ಈ ಕಿಚ್ಚು ಏಳುತ್ತಿದ್ದಂತೆ ರಾಸುಗಳನ್ನು ಹಾಯಿಸಲಾಗುತ್ತದೆ. ಕಿಚ್ಚು ಹಾಯಿಸುವುದರಿಂದ ಹಸುಗಳ ಮೈಯಲ್ಲಿರುವ ಉಣ್ಣೆ ನಿಯಂತ್ರಣವಾಗುತ್ತದೆ. ಇದು ಈ ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd