Dilip Vengsarkar : ಟೀಂ ಇಂಡಿಯಾಗೆ ಬರಬೇಕಾದ್ರೆ ಇನ್ನೇನು ಮಾಡ್ಬೇಕು
ಫಸ್ಟ್ ಕ್ಲಾಸ್ ಕ್ರಿಕೆಟ್ ನಲ್ಲಿ ಅಬ್ಬರಿಸುತ್ತಿರುವ ಯುವ ಆಟಗಾರ ಸರ್ಫರಾಜ್ ಖಾನ್ ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡದಿರುವುದಕ್ಕೆ ಟೀಂ ಇಂಡಿಯಾದ ಮಾಜಿ ನಾಯಕ ದಿಲೀಪ್ ವೆಂಗ್ ಸರ್ಕಾರ್ ಆಕ್ರೋಶ ಹೊರಹಾಕಿದ್ದಾರೆ.
2022ರ ರಣಜಿ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಉತ್ತರಾಖಂಡ್ ಜೊತೆ ನಡೆದ ಕ್ವಾರ್ಟರ್ ಫೈನಲ್ ನಲ್ಲಿ 153 ರನ್ ಗಳಿಸಿ ಮಿಂಚಿದರು.
ಈ ಸೀಸನ್ ನಲ್ಲಿ ಅವರು 704 ರನ್ ಗಳಿಸಿದ್ದಾರೆ. ಕಳೆದ ರಣಜಿ ಟ್ರೋಫಿಯಲ್ಲಿ ಸರ್ಫರಾಜ್ ಅಬ್ಬರಿಸಿದ್ದರು.
ಕಳೆದ ಸೀಸನ್ ನಲ್ಲಿ 928 ರನ್ ಗಳಿಸಿದ್ದರು. ಫಸ್ಟ್ ಕ್ಲಾಸ್ ಕ್ರಿಕೆಟ್ ನಲ್ಲಿ 23 ಪಂದ್ಯಗಳಲ್ಲಿ 80.04 ಸರಾಸರಿಯಲ್ಲಿ 2252 ರನ್ ಗಳಿಸಿದ್ದಾರೆ.

ಸರ್ಫರಾಜ್ ಈಗಾಗಲೇ ಟೀಂ ಇಂಡಿಯಾದಲ್ಲಿ ಆಡಬೇಕಾಗಿತ್ತು. ಆತ ರಣಜಿ ಟ್ರೋಫಿಯಲ್ಲಿ ಪ್ರತಿಬಾರಿ ರನ್ ಮಳೆ ಹರಿಸುತ್ತಿದ್ದಾರೆ.
ಸೆಲೆಕ್ಟ್ ಗಳು ಈಗಾಗಲೇ ಅವರನ್ನ ಆಯ್ಕೆ ಮಾಡಬೇಕಾಗಿತ್ತು.
ಪ್ರತಿ ಸೀಸನ್ ನಲ್ಲಿ ಸರ್ಫರಾಜ್ ಖಾನ್ ಮುಂಬೈ ಪರ 800 ರನ್ ಗಳಿಗಿಂತ ಹೆಚ್ಚು ರನ್ ಗಳಿಸಿದ್ದಾರೆ ಎಂದು ವೆಂಗ್ ಸರ್ಕಾರ್ ಹೇಳಿದ್ದಾರೆ.
ಟೀಂ ಇಂಡಿಯಾಗೆ ಸರ್ಫರಾಜ್ ಖಾನ್ ಬರೋದಕ್ಕೆ ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿರುವ ವೆಂಗ್ ಸರ್ಕಾರ್, ನಾನು ಆತನನ್ನು 12 ವರ್ಷಗಳಿಂದ ನೋಡುತ್ತಲೇ ಇದ್ದೇನೆ.
ಆತ ಪ್ರತಿಭಾವಂತ ಆಟಗಾರ. ಅಲ್ಲದೇ ಫಿಟ್ ಆಗಿದ್ದಾನೆ. ಜೊತೆಗೆ ತಾಳ್ಮೆಯಿಂದ ಸುದೀರ್ಘ ಇನ್ನಿಂಗ್ಸ್ ಕಟ್ಟುತ್ತಾರೆ.
ಮುಖ್ಯವಾಗಿ ಆತನಿಗೆ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವಿದೆ ಎಂದು ವೆಂಗ್ ಸರ್ಕಾರ್ ತಿಳಿಸಿದ್ದಾರೆ