ಆರ್.ಆರ್.ನಗರದ ಪಟ್ಟಣಗೆರೆಯಲ್ಲಿ ಯುವನಟ ಸತೀಶ್ ವಜ್ರ ಕೊಲೆ ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರ ಕೈ ಸೇರಿದೆ.. 17 ರ ರಾತ್ರಿ 11.13 ಕ್ಕೆ ಸತೀಶ್ ವಜ್ರ ಮನೆಗೆ ಆರೋಪಿಗಳು ಬಂದಿರುವ ದೃಶ್ಯ ಸಿಕ್ಕಿದೆ..
ಮಧ್ಯ ರಾತ್ರಿ 12.25 ಕ್ಕೆ ಕೊಲೆ ಮಾಡಿ ಆರೋಪಿಗಳು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.. ಆರೋಪಿಗಳು ಮನೆಗೆ ಬಂದು ಹೋಗೊ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ..
ಅಲ್ಲದೇ ಸತೀಶ್ ವಜ್ರ ಬೈಕ್ ಅನ್ನು ಕೊಂಡೊಯ್ದಿದ್ದಾರೆ.. ಬರುವಾಗ ನಡೆದುಕೊಂಡೆ ಬಂದಿದ್ದಾರೆ.. ಆದ್ರೆ ಹೋಗುವಾಗ ಸತೀಶ್ ಬೈಕ್ ತೆಗೆದುಕೊಂಡು ಹೋಗಿದ್ದಾರೆ.. ಮೃತ ಸತೀಶ್ ಭಾಮೈದ ಸುದರ್ಶನ್ ಮತ್ತು ನಾಗೇಂದ್ರ ಎಸ್ಕೇಪ್ ಆಗಿರೋ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ..
ಕೊಲೆ ಮಾಡಲು ತೀರ್ಮಾನ ಮಾಡಿಕೊಂಡೇ ಬಂದಿದ್ದರು ಈ ಇಬ್ಬರು ಎನ್ನೋದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.. ಬೆಂಗಳೂರು ಮಾರ್ಕೆಟ್ ಬಳಿ ಚಾಕು ಖರೀದಿಸಿದ್ರು .. ಚಾಕು ಖರೀದಿಸಿಕೊಂಡು ಸತೀಶ್ ವಜ್ರ ಮನೆಗೆ ಹೋಗಿದ್ರು ಹಾಗೆ ಸುಮ್ಮನೆ ಬಂದಿದ್ವಿ ಇಲ್ಲೇ ಮಾಲಗ್ತೀವಿ ಅಂದಿದ್ದಾರೆ ಎನ್ನಲಾಗಿದೆ..
ಭಾಮೈದನ ನಂಬಿ ಮನೆಯೊಳಗೆ ಕರೆದಿದ್ದ ಸತೀಶ್ ಚಂದ್ರಗೆ ಇದ್ದಕ್ಕಿದ್ದಂತೆ ಚಾಕು ತೆಗೆದು ಚುಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.. ಕೊಂದು ಏನೂ ಆಗೆ ಇಲ್ಲ ಎನ್ನುವಂತೆ ತಮ್ಮ ಪಾಡಿಗೆ ಹೊರಟಿರುವ ದೃಶ್ಯ ಸೆರೆಯಾಗಿದೆ.. ವಿಚಾರ ಗೊತ್ತಾದ ದಿನವೇ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.. ಇನ್ಸ್ ಪೆಕ್ಟರ್ ಶಿವಣ್ಣ ಮತ್ರು ತಂಡದಿಂದ ಸುದರ್ಶನ್ ಮತ್ತು ನಾಗೇಂದ್ರನ ಬಂಧನವಾಗಿದೆ.








