Red Fort attack : ಉಗ್ರ ಮೊಹಮ್ಮದ್ ಆರಿಫ್ ಗೆ ಮರಣದಂಡನೆ ಎತ್ತಿ ಹಿಡಿದ ಸುಪ್ರೀಂ…
ಡಿಸೆಂಬರ್ 2000 ರಲ್ಲಿ ದೆಹಲಿಯ ಕೆಂಪು ಕೋಟೆಯ ಸೇನಾ ಬ್ಯಾರಕ್ ಮೇಲೆ ದಾಳಿ ನಡೆಸಿದ್ದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಉಗ್ರ ಮೊಹಮ್ಮದ್ ಅಶ್ಫಾಕ್ ಆರಿಫ್ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಆರೀಫ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ್ದು, ಮರಣದಂಡನೆಯನ್ನ ಎತ್ತಿ ಹಿಡಿದಿದೆ.
ಡಿಸೆಂಬರ್ 2000 ರಲ್ಲಿ ನಡೆದ ದಾಳಿಯಲ್ಲಿ ಮೂರು ಮಂದಿ ಕೆಂಪು ಕೋಟೆಯಲ್ಲಿ ಅಸುನೀಗಿದ್ದರು. ಘಟನೆ ನಡೆದ ನಾಲ್ಕು ದಿನಗಳ ನಂತರ ಉಗ್ರ ಆರಿಫ್ ಅವರ ಪತ್ನಿ ರೆಹಮಾನಾ ಯೂಸುಫ್ ಫಾರೂಕಿ ಅವರೊಂದಿಗೆ ಬಂಧಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 2005 ರಲ್ಲಿ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಭಾರತದ ವಿರುದ್ಧ ಯುದ್ಧ ಮಾಡುವ ಆರೋಪದಡಿಯಲ್ಲಿ ಆರಿಫ್ ಮರಣದಂಡನೆ ವಿಧಿಸಿ ಇತರರಿಗೆ ಜೈಲು ಶಿಕ್ಷೆ ವಿಧಿಸಿತ್ತು.
ಸೆಪ್ಟೆಂಬರ್ 2007 ರಲ್ಲಿ ಉಚ್ಚ ನ್ಯಾಯಾಲಯವು ಆತನ ಅಪರಾಧವನ್ನು ದೃಢೀಕರಿಸಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎಲ್ಲಾ ಇತರ ಸಹ-ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.
SC affirms death penalty to Pakistani LeT terrorist in 2000 Red Fort attack case