ಇಸ್ರೋ ನೂತನ ಅಧ್ಯಕ್ಷರಾಗಿ ವಿಜ್ಞಾನಿ ಡಾ ಎಸ್ ಸೋಮನಾಥ್ ಆಯ್ಕೆ

1 min read

ಇಸ್ರೋ ನೂತನ ಅಧ್ಯಕ್ಷರಾಗಿ ರಾಕೆಟ್ ವಿಜ್ಞಾನಿ ಡಾ ಎಸ್ ಸೋಮನಾಥ್ ಆಯ್ಕೆ….

ಪ್ರಖ್ಯಾತ ಏರೋಸ್ಪೇಸ್ ಇಂಜಿನಿಯರ್ ಮತ್ತು ರಾಕೆಟ್ ವಿಜ್ಞಾನಿ ಡಾ ಎಸ್ ಸೋಮನಾಥ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹೊಸ ಅಧ್ಯಕ್ಷರಾಗಿ ಮತ್ತು ಮೂರು ವರ್ಷಗಳ ಜಂಟಿ ಅವಧಿಗೆ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.  ಈಗಿನ  ಇಸ್ರೋ  ಅಧ್ಯಕ್ಷರಾದ  ಕೆ.  ಶಿವನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಪ್ರಸ್ತುತ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ (VSSC) ನಿರ್ದೇಶಕರಾಗಿರುವ  ಸೋಮನಾಥ್  ವಿಜ್ಞಾನಿಯಾಗಿ 30 ವರ್ಷಗಳ ವೃತ್ತಿಜೀವನವನ್ನ ಸವೆಸಿದ್ದಾರೆ.  ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ನ ಮೊದಲ ಯಶಸ್ವಿ ಹಾರಾಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಸೋಮನಾಥ್ ಅವರು ಕೇರಳ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿರುವಾಗ ಬಾಹ್ಯಾಕಾಶದಲ್ಲಿ  ವಿಷಯದಲ್ಲಿ ಆಸಕ್ತಿ ಹೊಂದಿದ್ದರು. ಹಿಂದಿ ಅಧ್ಯಾಪಕರಾಗಿದ್ದ ಅವರ ತಂದೆ ಮಗನ ಪ್ರಯಾಣದಲ್ಲಿ ಜೊತೆ ನಿಂತು ಸಾಥ್ ನೀಡಿದರು.

ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಸೇರಿದ ಡಾ ಎಸ್ ಸೋಮನಾಥ್,  ಕೋರ್ಸ್ ಮುಗಿದ ಕೂಡಲೇ ಇಸ್ರೋಗೆ ಸೇರ್ಪಡೆಯಾದರು.

ಸೋಮನಾಥ್ ಅವರು ಉಪಗ್ರಹ ಉಡಾವಣಾ ವಾಹನ ವಿನ್ಯಾಸ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಪರಿಣತರಾಗಿದ್ದಾರೆ. ಅವರು ಲಾಂಚ್ ವೆಹಿಕಲ್ ಸಿಸ್ಟಮ್ಸ್ ಇಂಜಿನಿಯರಿಂಗ್, ಸ್ಟ್ರಕ್ಚರಲ್ ಡಿಸೈನ್, ಸ್ಟ್ರಕ್ಚರಲ್ ಡೈನಾಮಿಕ್ಸ್, ಇಂಟಿಗ್ರೇಷನ್ ಡಿಸೈನ್ಸ್ ಮತ್ತು ಪ್ರೊಸೀಜರ್ಸ್, ಮೆಕಾನಿಸಂ ಡಿಸೈನ್ ಮತ್ತು ಪೈರೋಟೆಕ್ನಿಕ್ಸ್‌ನಲ್ಲಿ ಪರಿಣತಿ ಹೊಂದಿದ್ದಾರೆ.

1985 ರಲ್ಲಿ, ಕೇರಳದ ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಆರಂಭಿಕ ಹಂತಗಳಲ್ಲಿ PSLV ರಾಕೆಟ್‌ನ ಏಕೀಕರಣದ ತಂಡದ ಕ್ಯಾಪ್ಟನ್ ಆಗಿದ್ದರು.ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದ (ASI), GSLV Mk-III ಸಾಕ್ಷಾತ್ಕಾರಕ್ಕಾಗಿ ಟೀಮ್ ಎಕ್ಸಲೆನ್ಸ್ ಅವಾರ್ಡ್-2014 ಮತ್ತು ಇಸ್ರೋದಿಂದ ಪರ್ಫಾರ್ಮೆನ್ಸ್ ಎಕ್ಸಲೆನ್ಸ್ ಅವಾರ್ಡ್-2014 ರಿಂದ ಬಾಹ್ಯಾಕಾಶ ಚಿನ್ನದ ಪದಕವನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd