ಸೆಪ್ಟೆಂಬರ್ 27 ಕ್ಕೆ ಹೈದರಾಬಾದ್ ನಲ್ಲಿ MSP ಸಮಿತಿಯ ಎರಡನೇ ಸಭೆ..
ಸೆಪ್ಟೆಂಬರ್ 27 ರಂದು ಹೈದರಾಬಾದ್‌ನಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ನೈಸರ್ಗಿಕ ಕೃಷಿ ಮತ್ತು ಬೆಳೆ ವೈವಿಧ್ಯತೆ ಕುರಿತ ಸರ್ಕಾರದ ಸಮಿತಿಯು ತನ್ನ ಎರಡನೇ ಸಭೆ ನಡೆಸಲಿದೆ.
ಆದರೆ ಸಮಿತಿಯ ಸಭೆಯಿಂದ ಸಂಯುಕ್ತ ಕಿಸಾನ್ ಮೋರ್ಚಾ (SKM) ಹೊರಗುಳಿಯಲು ನಿರ್ಧರಿಸಿದೆ ಮತ್ತು ಸಮಿತಿಯನ್ನು ತಿರಸ್ಕರಿಸಿದೆ.
ಹೆಸರು ಹೇಳಲಿಚ್ಚಿಸದ ಸಮಿತಿಯ ಸದಸ್ಯರೊಬ್ಬರು ಪಿಟಿಐಗೆ ತಿಳಿಸಿದ್ದು, “ಎರಡನೇ ಸಭೆಯನ್ನು ಸೆಪ್ಟೆಂಬರ್ 27 ರಂದು ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಕೃಷಿ ವಿಸ್ತರಣೆ ನಿರ್ವಹಣೆಯ (ಮ್ಯಾನೇಜ್) ಕ್ಯಾಂಪಸ್‌ನಲ್ಲಿ ನಡೆಸಲಾಗುವುದು ಎಂದಿದ್ದಾರೆ.
ಕಡ್ಡಾಯ ವಿಷಯಗಳ ಕುರಿತು ಇಡೀ ಸಮಿತಿ ಸಭೆ ಸೇರಿ ಇಡೀ ದಿನ ಚರ್ಚೆ ನಡೆಸಲಿದೆ ಎಂದು ಸದಸ್ಯರು ತಿಳಿಸಿದರು.
ಜುಲೈ 18 ರಂದು ಕೃಷಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸುವ ಮೂಲಕ ದೇಶದ ರೈತರಿಗೆ ಎಂಎಸ್‌ಪಿ ಲಭ್ಯವಾಗುವಂತೆ ಸಲಹೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಸಮಿತಿಗೆ ವಹಿಸಲಾಗಿದೆ.
ಇದು “ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗಕ್ಕೆ (CACP) ಹೆಚ್ಚಿನ ಸ್ವಾಯತ್ತತೆಯನ್ನು ನೀಡಲು ಪ್ರಾಯೋಗಿಕತೆ ಮತ್ತು ಅದನ್ನು ಹೆಚ್ಚು ವೈಜ್ಞಾನಿಕವಾಗಿಸಲು ಕ್ರಮಗಳ” ಕುರಿತು ಸಲಹೆಗಳನ್ನು ನೀಡುತ್ತದೆ.