ಇಂಗ್ಲೆಂಡ್ನ ಬರ್ಮಿಂಗ್ಹ್ಯಾಂನಲ್ಲಿ ನೆಲೆಸಿರುವ ನೈಜಿರಿಯಾ ಮೂಲದ ಸ್ವಯಂ ಘೋಷಿತ ದೇವಮಾನವನೊಬ್ಬ ಆಧ್ಯಾತ್ಮಿಕ ಸ್ನಾನದ ಹೆಸರಲ್ಲಿ ಯುವತಿಯರು ಮಕ್ಕಳು ಮತ್ತು ಪುರುಷರ ಮೇಲೂ ಅತ್ಯಾಚಾರ ಎಸಗಿದ್ದಾನೆ.
ತಾನೇ ದೇವರ ಅವತಾರ ಎಂದು ಆಧ್ಯಾತ್ಮಿಕ ಸ್ನಾನದ ಹೆಸರಿನಲ್ಲಿ ಅತ್ಯಾಚಾರ ಎಸಗಿರುವ ಆರೋಪದಲ್ಲಿ 60 ವರ್ಷದ ಸ್ವಯಂ ಘೋಷಿತ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದು, ಈತನ ಕೃತ್ಯಕ್ಕೆ ಈತನ ಪತ್ನಿಯೂ ಜೊತೆಯಾಗಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಯನ್ನು ಮೈಕೆಲ್ ಒಲುರೊನ್ಬಿ ಎಂದು ಗುರುತಿಸಲಾಗಿದ್ದು, ಚರ್ಚಿನ ಮಕ್ಕಳು, ಹದಿಹರೆದವರು ಸೇರಿದಂತೆ ಮಹಿಳೆಯರು ಹಾಗೂ ಪುರುಷರ ಮೇಲೂ ಸುಮಾರು 20 ವರ್ಷಗಳಿಂದ ದೌರ್ಜನ್ಯ ಎಸಗಿದ್ದಾನೆ.
ಇದೀಗ ಪೊಲೀಸರ ತನಿಖೆ ಬಳಿಕ ತನ್ನ ತಪ್ಪೊಪ್ಪಿಕೊಂಡಿರುವ ಈತ 34 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ವಿಚಾರಣೆ ಸಂದರ್ಭ ಹಲವು ಸಂಗತಿಗಳು ಹೊರಬಿದ್ದಿದ್ದು, ಕೆಲ ಯುವತಿಯರು ಅನೇಕ ಬಾರಿ ಗರ್ಭಿಣಿಯರಾಗಿ ಗರ್ಭಪಾತಕ್ಕೂ ಒಳಗಾಗಿದ್ದರೆ, 15 ರೇಪ್, 7 ಹಲ್ಲೆ ಹಾಗೂ 2 ಲೈಂಗಿಕ ದೌರ್ಜನ್ಯ ಸೇರಿದಂತೆ ಪ್ರತ್ಯೇಕ 88 ಸಂದರ್ಭಗಳಲ್ಲಿ ಒಲುರೊನ್ಬಿ ಅತ್ಯಾಚಾರವೆಸಗಿದ್ದಾನೆ.
ಆಧ್ಯಾತ್ಮಿಕ ಸ್ನಾನ ಮಾಡಲು ದೇವರೇ ತನಗೆ ಸೂಚನೆ ನೀಡಿದ್ದ ಎಂದು ಒಲುರೊನ್ಬಿ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದು, ನೀವು ಆಧ್ಯಾತ್ಮಿಕತೆ ಬಿಟ್ಟು ನಿಮ್ಮ ಲೈಂಗಿಕ ಹಸಿವನ್ನು ತೀರಿಸಿಕೊಳ್ಳಲು ಭಕ್ತರನ್ನು ಬಳಸಿಕೊಂಡಿದ್ದೀರಿ ಎಂದು ನ್ಯಾಯಾಲಯ ದೋಷಿ ಒಲುರೊನ್ಬಿ ವಿರುದ್ಧ ಕಿಡಿಕಾರಿದೆ. ಆತನ ಕ್ರೂರ ಕೃತ್ಯಕ್ಕೆ ಸಹಕಾರ ನೀಡಿದ್ದ ಆತನ ಪತ್ನಿಗೆ ಕೂಡ ನ್ಯಾಯಾಲಯ 11 ವರ್ಷ ಶಿಕ್ಷೆಯನ್ನು ವಿಧಿಸಿದೆ.
ಪಾಕಿಸ್ತಾನದಲ್ಲಿ ಭೀಕರ ಗುಂಡಿನ ದಾಳಿ: 50 ಮಂದಿ ಸಾವು
ಪಾಕಿಸ್ತಾನದ ಖೈಬರ್ ಪಖ್ತೂನ್ವಾ ಪ್ರಾಂತ್ಯದಲ್ಲಿ ಬಂದೂಕುಧಾರಿಗಳು ಪ್ರಯಾಣಿಕ ವಾಹನಗಳ ಮೇಲೆ ಗುಂಡು ಹಾರಿಸಿದ ಘಟನೆ ಸಂಭವಿಸಿದೆ. ಬಂದೂಕುಧಾರಿಗಳ ಗುಂಡಿನ ದಾಳಿಯಲ್ಲಿ 50 ಮಂದಿ ಮೃತಪಟ್ಟಿದ್ದು, 29 ಮಂದಿ...