sevanthige
ಅಂದವಾದ ಹೂವುಗಳ ಪಟ್ಟಿ ಮಾಡುತ್ತಾ ಹೋದ್ರೆ ಅದ್ರಲ್ಲಿ ಸೇವಂತಿಗೆ ಕೂಡ ಒಂದಾಗಿರುತ್ತೆ. ಸೇವಂತಿಗೆ ಹೂವು ನೋಡಲು ತುಂಬಾ ಅಂದವಾಗಿ ಇರುತ್ತದೆ ಹಾಗೆಯೇ ಅದರ ಸುವಾಸನೆ ಕೂಡ ಮಧುರವಾಗಿ ಇರುತ್ತದೆ. ಈ ಸೇವಂತಿಗೆ ಹೂವು ಹಲವಾರು ಬಣ್ಣಗಳನ್ನು ಹೊಂದಿರುತ್ತವೆ. ಇದನ್ನು ಪೂಜೆಗೆ , ಅಲಂಕಾರಕ್ಕೆ ಬಳಸುತ್ತಾರೆ. ಸೇವಂತಿಗೆ ಆಸ್ಟರೇಸಿಯಿ ಕುಟುಂಬದಲ್ಲಿನ ಕ್ರಿಸ್ಯಾಂಥಮಮ್ ಜಾತಿಯ ಒಂದು ಹೂಬಿಡುವ ಸಸ್ಯವಾಗಿದೆ. ಏಷ್ಯಾ ಮತ್ತು ಈಶಾನ್ಯ ಯೂರೋಪ್ ಗೆ ಸೇರಿದ ಸ್ಥಳೀಯ ಸಸ್ಯದ ಪ್ರಜಾತಿಯಾಗಿದೆ.
ಆದ್ರೆ ಇದು ಕೇವಲ ಪೂಜೆಗೆ ಅಷ್ಟೇ ಸೀಮಿತವಾಗಿಲ್ಲ. ಇದರಿಂದ ಮನುಷ್ರರ ಆರೋಗ್ಯಕ್ಕೂ ಅಷ್ಟೇ ಪ್ರಯೋಜನಗಳಿವೆ. ಹೌದು ಸೇವಂತಿಗೆ ಗಿಡದ ಎಲೆ ಸೇವಂತಿಗೆ ಗಿಡದ ಬೇರು ಎಲ್ಲವೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಹೀಗೆಯೇ ಕೆಲವು ಆರೋಗ್ಯ ಪ್ರಯೋಜನಗಳನ್ನ ನೋಡೋಣ..
ತುಳಸಿ ಪೂಜೆಯ ವೈಶಿಷ್ಠ್ಯತೆ, ವಿಧಿ- ವಿಧಾನ, ಪುರಾಣ – ಇತಿಹಾಸ
ಆರೋಗ್ಯ ಪ್ರಯೋಜನಗಳು
ಗಾಯಗಳು ವಾಸಿಯಾಗುತ್ತವೆ: ಗಾಯಗಳಾದಾಗ ಅದಕ್ಕೆ ಸ್ವಲ್ಪ ಸೇವಂತಿಗೆ ಗಿಡದ ಎಲೆಯನ್ನು ಅರಿಸಿಣ ಪುಡಿಯೊಂದಿಗೆ ನುಣ್ಣಗೆ ಅರೆದು ಗಾಯಗಳಿಗೆ ಅಚಿದರೆ ಗಾಯಗಳು ಬೇಗ ಗುಣ ಆಗುತ್ತವೆ.
ರಕ್ತಭೇದಿ ನಿಲ್ಲುತ್ತದೆ : ಹೌದು ರಕ್ತಬೇದಿಯಾಗುತ್ತಿದ್ದಾರೆ ಅಂತಹ ಸಂದರ್ಭದಲ್ಲಿ ಸೇವಂತಿಗೆ ಹೂವುಗಳನ್ನು ನುಣ್ಣಗೆ ಅರೆದು ಅದಕ್ಕೆ ಸಕ್ಕರೆ ಮತ್ತು ಜೀರಿಗೆ ಪುಡಿಯನ್ನು ಬೆರೆಸಿ ಅದನ್ನು ಸೇವಿಸಿ ನಂತರ ನೀರು ಕುಡಿದರೆ ರಕ್ತಭೇದಿ ನಿಲ್ಲುತ್ತದೆ.
ಕೆಮ್ಮು ಕಡಿಮೆಯಾಗುತ್ತೆ: ಸೇವಂತಿಗೆ ಗಿಡದ ಎಲೆಗಳ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ ಕೆಮ್ಮು ಕಡಿಮೆ ಆಗುತ್ತದೆ.
ಮಹಿಳೆಯರಿಗೆ ತುಂಬಾ ಉಪಯುಕ್ತ: ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಬರುವಂತಹ ಹೊಟ್ಟೆನೋವು ತುಂಬಾ ಹೆಚ್ಚಾಗಿದ್ದರೆ ಆ ಸಮಯದಲ್ಲಿ ಸೇವಂತಿಗೆ ಹೂವಿನ ರಸವನ್ನು ಸೇವಸುತ್ತ ಬಂದರೆ ಹೊಟ್ಟೆ ನೋವು ಸುಧಾರಿಸುತ್ತದೆ. ಹೀಗೆ ಇನ್ನೂ ಹಲವು ಪ್ರಯೋಜನಗಳನ್ನ ಹೊಂದಿರುವ ಈ ಸೇವಂತಿಗೆ ಅನೇಕ ವೈಶಿಷ್ಠಿಗಳಿಂದ ಕೂಡಿದೆ.
ಶೀತದ ಪರಿಣಾಮವನ್ನು ಕಡಿಮೆ ಮಾಡುವ ಅಶ್ವಗಂಧ ಚಹಾ ಸೇವಿಸುವ ಮೊದಲು ತಿಳಿದಿರಬೇಕಾದ ವಿಷಯಗಳು
sevanthige
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








