ಅಮೇರಿಕಾದಲ್ಲಿ ಅಗ್ನಿ ಅವಘಡ 7 ಮಕ್ಕಳು ಸೇರಿ 13 ಮಂದಿ ಸಾವು

1 min read

ಅಮೇರಿಕಾದಲ್ಲಿ ಅಗ್ನಿ ಅವಘಡ 7 ಮಕ್ಕಳು ಸೇರಿ 13 ಮಂದಿ ಸಾವು

ಅಮೆರಿಕದ ಫಿಲಡೆಲ್ಫಿಯಾ ನಗರದ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬುಧವಾರ ಬೆಳಗಿನ ಜಾವ ಸಂಭವಿಸಿದ ಅಗ್ನಿ ಅವಘಡದಲ್ಲಿ ಏಳು ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ.

ಬೆಂಕಿಯ ಸಂದರ್ಭದಲ್ಲಿ ಕಟ್ಟಡದಲ್ಲಿ ನಾಲ್ಕು ಸ್ಮೋಕ್ ಡಿಟೆಕ್ಟರ್ ಗಳನ್ನ ಅಳವಡಿಸಿದ್ದರೂ ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇದ್ದದ್ದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಅವಘಡದ ನಂತರ ಎಂಟು ಜನರು ಬೆಂಕಿಯಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳದ ಪ್ರಕಾರ, ಅಪಘಾತದಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು.

“ಇದು ನಿಸ್ಸಂದೇಹವಾಗಿ ನಮ್ಮ ನಗರದ ಇತಿಹಾಸದಲ್ಲಿ ಅತ್ಯಂತ ದುಃಖಕರ ದಿನಗಳಲ್ಲಿ ಒಂದಾಗಿದೆ, ಇಂತಹ ದುರಂತ ರೀತಿಯಲ್ಲಿ ಅನೇಕ ಜನರನ್ನು ಕಳೆದುಕೊಂಡಿರುವುದು ತುಂಬಾ ನೋವಿನಿಂದ ಕೂಡಿದೆ.” ಎಂದು ಫಿಲಡೆಲ್ಫಿಯಾ ಮೇಯರ್ ಜಿಮ್ ಕೆನ್ನಿ ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd