ನೆಲಮಂಗಲ: ಮಹಿಳಾ ಟೆಲಿಕಾಲರ್ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯೊಂದು ನಡೆದಿದೆ.
ವ್ಯಕ್ತಿಯೊಬ್ಬ ನೆಲಮಂಗಲದ ಮಹಿಳಾ ಟೆಲಿಕಾಲರ್ಗೆ (Tele caller) ಲೈಂಗಿಕ ಕಿರುಕುಳ (Harassment) ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಗುಬ್ಬಿ ತಾಲೂಕಿನ ತಾಲೂಕಿನ ಹಿಂಡಸಗೇರೆ ಗ್ರಾಮದ ಶಿವರಾಮ್ ಎಂಬ ವ್ಯಕ್ತಿಯೇ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಎನ್ನಲಾಗಿದೆ. ಶಿವರಾಮ್ ಟೆಲಿಕಾಲರ್ ಜ್ಯೋತಿ ಎಂಬುವವರಿಗೆ “ನನ್ನ ಜೋತೆ ಸಹಕರಿಸದಿದ್ದರೆ ನಿನ್ನ ಪತಿ ಕೊಲ್ಲುವೆ. ನನ್ನ ಜೋತೆ ಚೆನ್ನಾಗಿರು, ನಿನ್ನ ಪತಿ ಕೊಂದ ಮೇಲೆ ಸೂಸೈಡ್ ಮಾಡಿಕೊಳ್ಳಬೇಡ” ಎಂದು ಸಂದೇಶ ಕಳುಹಿಸಿದ್ದಾನೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ, ಅವರ ಮನೆಗೆ ನುಗ್ಗಿ “ನೀನು ನನಗೆ ಬೇಕು ಅಷ್ಟೇ, ನಿನ್ನನ್ನು ನಾನು ಇಷ್ಟ ಪಡುತ್ತಿದ್ದೇನೆ ಎಂದು ಗಲಾಟೆ ಕೂಡ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.