ಬಹುಭಾಷ ನಟ ಶರತ್ ಕುಮಾರ್ ಆಸ್ಪತ್ರೆಗೆ ದಾಖಲು…
ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ ಸಾರಥಿ , ರಾಜಕುಮಾರ , ಸೇರಿದಂತೆ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷ ನಟ ಶರತ್ ಕುಮಾರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಟ ಶರತ್ ಕುಮಾರ್ ಡಯಾರಿಯಾ ಮತ್ತು ಡಿ ಹೈಡ್ರೇಷನ್ ನಿಂದ ಬಳುತ್ತಿದ್ದಾರೆ ಎನ್ನಲಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಆಸ್ಪತ್ರೆಯ ಬಳಿ ಶರತ್ ಕುಮಾರ್ ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಮತ್ತು ಪುತ್ರಿ ವರಲಕ್ಷ್ಮೀ ಆಗಮಿಸಿದ್ದಾರೆ.
ಶರತ್ ಕುಮಾರ್ ಅವರಿಗೆ 68 ವರ್ಷ ವಯಸ್ಸಾಗಿದೆ. ನಟನ ಅನಾರೋಗ್ಯದ ಕುರಿತು ಕುಟುಂಬದವರಾಗಲಿ ಅಥವಾ ಆಸ್ಪತ್ರೆಯವರಾಗಲಿ ಯಾವುದೇ ಮಾಹಿತಿಯನ್ನ ಇದುವರೆಗೂ ಹಂಚಿಕೊಂಡಿಲ್ಲ. ನಟನ ಅನಾರೋಗ್ಯ ಸುದ್ದಿ ತಿಳಿದು ಅಭಿಮಾನಿಗಳು ಆತಂಕಗೊಂಡಿದ್ದು ಅವರು ಬೇಗ ಗುಣಮುಖರಾಗಲೆಂದು ಅಭಿಮಾನಿಗಳು ಬೇಡಿಕೊಳ್ತಿದ್ದಾರೆ.
sharath kumar: Multilingual actor Sharath Kumar admitted to hospital…






