ಶಿಷ್ಟಾಚಾರ ಉಲ್ಲಂಘನೆ ಆರೋಪದ ಮೇಲೆ ಬಿಜೆಪಿ ಸಂಸದ ನಿಶಿಕಾಂತ್ ದುಬೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ನೋಟಿಸ್ ಕಳುಹಿಸಿದ್ದಾರೆ. ಫೇಸ್ ಬುಕ್ ದುರ್ಬಳಕೆ ಕುರಿತಂತೆ ಸಂಸದೀಯ ಮಂಡಳಿಯ ಸಭೆಯನ್ನು ಕರೆಯುವುದಾಗಿ ತಾವು ಮಾಡಿರುವ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಂಸದ ನಿಶಿಕಾಂತ್ ದುಬೆ ಅವಹೇಳನಕಾರಿಯಾಗಿ ಟೀಕೆ ಮಾಡಿದ್ದಾರೆ ಎಂದು ಆರೋಪಿಸಿ ಶಶಿ ತರೂರ್ ಅವರು ನೊಟೀಸ್ ಜಾರಿ ಮಾಡಿದ್ದಾರೆ.
ಇನ್ನೂ ಈ ಸಂಬಂಧ ಲೋಕಸಭಾಧ್ಯಕ್ಷ ಓಮ್ ಬಿರ್ಲಾರಿಗೆ ಪತ್ರ ಬರೆದಿರುವ ಶಶಿ ತರೂರ್ ಅವರು ಟ್ವಿಟ್ಟರ್ ನಲ್ಲಿ ಸಂಸದ ದುಬೆಯವರು ಮಾಡಿರುವ ಟೀಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ.









