ತೀರ್ಥಹಳ್ಳಿಯ ಯುವಕರಿಬ್ಬರಿಗೆ ಉಗ್ರರ ನಂಟು : NIA ಅಧಿಕಾರಿಗಳ ತಂಡ ಭೇಟಿ..!  

1 min read

ತೀರ್ಥಹಳ್ಳಿಯ ಯುವಕರಿಬ್ಬರಿಗೆ ಉಗ್ರರ ನಂಟು : NIA ಅಧಿಕಾರಿಗಳ ತಂಡ ಭೇಟಿ..!

ಶಿವಮೊಗ್ಗ:  ಶಿವಮೊಗ್ಗದ  ತೀರ್ಥಹಳ್ಳಿಯ ಯುವಕರಿಬ್ಬರು ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ತೀರ್ಥಹಳ್ಳಿಗೆ NIA ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಸ್ಯಾಟಲೈಟ್ ಫೋನ್ ಬಳಕೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್​ನಲ್ಲಿ ತೀರ್ಥಹಳ್ಳಿ ತಾಲೂಕಿನಾದ್ಯಂತ NIA ಕೂಬಿಂಗ್ ನಡೆಸಿತ್ತು. ಈ ವೇಳೆ ತೀರ್ಥಹಳ್ಳಿಯ ಯುವಕರಿಬ್ಬರು ಉಗ್ರರೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿತ್ತು. ಆದ್ರೆ ಅಷ್ಟರೊಳಗಡೆ ಯುವಕರು ನಾಪತ್ತೆಯಾಗಿದ್ದರು. ಅಂದ್ಹಾಗೆ ಕಳೆದ‌ ವರ್ಷವೇ ಯುವಕರ ಮನೆಗೆ ಬಂದು ವಿಚಾರಣೆ ನಡೆಸಿದ್ದರು. ಇದೀಗ ಹೆಚ್ಚಿನ ತನಿಖೆಗಾಗಿ ಮತ್ತೆ ಯುವಕರ ಮನೆಗೆ NIA ಅಧಿಕಾರಿಗಳ ತಂಡ ಭೇಟಿ ನೀಡಿದೆ. ಯುವಕರ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನದಲ್ಲಿ NIA ಅಧಿಕಾರಿಗಳ ತಂಡ ತೊಡಗಿದೆ.

ದುರಹಂಕಾರದಲ್ಲಿ ಯದ್ವಾತದ್ವಾ ಮಾತನಾಡಿ ಮಹಿಳಾ PSI ಕೈಲಿ ಒದೆ ತಿಂದ ಯುವತಿ: Video Viral

ಅಂಕಿ ಅಂಶಗಳ ಪ್ರಕಾರ ರವಿಶಾಸ್ತ್ರಿ ಟೀಮ್ ಇಂಡಿಯಾದ ಯಶಸ್ವಿ ಕೋಚ್…!|#Ravi Shastri #team india #headcoach #bcci

ಸಿಎಂ ಯಡಿಯೂರಪ್ಪ ಜಾತಿ ರಾಜಕಾರಣ ಮಾಡುತ್ತಿರುವುದು ಸರಿಯೇ : ಕುಮಾರಸ್ವಾಮಿ

ಸಿಎಂ ನಾಪತ್ತೆಯಾಗಿದ್ದಾರೆ ಎಂದ ಯತ್ನಾಳ್ ಗೆ  ರೇಣುಕಾಚಾರ್ಯ ಟಾಂಗ್..!

ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd