Shinzo Abe | ಜಗತ್ತನ್ನ ಬೆಚ್ಚಿ ಬೀಳಿಸಿದ್ದ ಮಹಾನ್ ನಾಯಕರ ಕೊಲೆಗಳು
ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಕೊಲೆ ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿದೆ. ಪಕ್ಷದ ಪರವಾಗಿ ಜನರ ನಡುವೆ ಪ್ರಚಾರ ನಡೆಸುವಾಗ ಯಮಗಾಮಿ ಎಂಬ ವ್ಯಕ್ತಿ ಶಿಂಜೋ ಅವರನ್ನ ಗುಂಡಿಕ್ಕೆ ಕೊಲೆ ಮಾಡಿದ್ದಾನೆ.
ಶಿಂಜೋ ಅವರ ಕೊಲೆಗೆ ನಾನಾ ಕಾರಣಗಳನ್ನು ಹೇಳಲಾಗುತ್ತಿದೆ. ಆದ್ರೆ ಈ ಘಟನೆ ವಿಶ್ವದಲ್ಲಿ ನಡೆದ ಮಹಾನ್ ನಾಯಕರ ಕೊಲೆಗಳನ್ನು ನೆನಪಿಸಿವೆ.
ಅಂತಹ ಪಟ್ಟಿಯನ್ನ ಈ ವಿಡಿಯೋದಲ್ಲಿ ನಾವು ನೋಡೋಣ..
1865 – ಅಮೆರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಕೊಲೆ
ಏಪ್ರಿಲ್ 14, 1865 ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊಲೆ ಇದು. ಅಂದು ಅಮೆರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ವಾಷಿಂಗ್ ಟನ್ ನಲ್ಲಿ ನಾಟಕ ನೋಡುತ್ತಿದ್ದಾಗ ರಂಗಭೂಮಿ ನಟನ ಗುಂಡೇಟಿಗೆ ಬಲಿಯಾಗಿದ್ರು. ನಾವು ಇತಿಹಾಸದಲ್ಲಿ ರಾಜ ಮಹಾರಾಜರ ಕೊಲೆಗಳು ದಾಖಲಾಗಿದ್ದರೂ ಆಧುನಿಕ ಜಗತ್ತಿನ ಒಂದು ದೇಶದ ಮುಖ್ಯಸ್ಥ ಹತ್ಯೆಯಾಗಿದ್ದು ಇದೇ ಮೊದಲು.
1881 ಅಮೆರಿಕಾದ ಅಧ್ಯಕ್ಷ ಜೇಮ್ಸ್ ಗಾರ್ ಫೀಲ್ಡ್ ಕೊಲೆ
ಲಿಂಕನ್ ಅವರ ಕೊಲೆಯ ಬಳಿಕ ಅಮೆರಿಕಾದ 20ನೇ ಅಧ್ಯಕ್ಷನಾಗಿದ್ದ ಜೇಮ್ಸ್ ಜಾರ್ ಫೀಲ್ಡ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. 1881 ಜುಲೈ 2 ರಂದು ಈ ಘಟನೆ ನಡೆದಿದ್ದು, 79 ದಿನಗಳ ನಂತರ ಸೆಪ್ಟಂಬರ್ 19 ರಂದು ಜೇಮ್ಸ್ ಕೊನೆಯುಸಿರೆಳೆದಿದ್ದರು.
1901 ಅಮೆರಿಕಾ ಅಧ್ಯಕ್ಷ ವಿಲಿಯಮ್ ಮೆಕೆನ್ ಲೀ ಕೊಲೆ
1901 ಸೆಪ್ಟಂಬರ್ 14 ರಂದು ನ್ಯೂಯಾರ್ಕ್ ನಲ್ಲಿ ವಿಲಿಯಮ್ ಮೆಕೆನ್ ಲೀ ಅವರನ್ನು ಗುಂಡಿಟ್ಟು ಕೊಲೆ ಮಾಡಲಾಯ್ತು. ಆರ್ಥಿಕ ಹಿಂಜರಿತದಿಂದ ಕೆಲಸ ಕಳೆದುಕೊಂಡಿದ್ದ ಲಿಯೋನ್ ಎಂಬಾತ ಈ ಕೊಲೆ ಮಾಡಿದ್ದ.
1948 ಮಹಾತ್ಮ ಗಾಂಧಿಜೀ ಕೊಲೆ
ಈ ಘಟನೆ ಇಡೀ ವಿಶ್ವಕ್ಕೆ ದೊಡ್ಡ ಆಘಾತವನ್ನ ನೀಡಿತ್ತು. ಶಾಂತಿ ದೂತ ಕೊಲೆಗೆ ಇಡೀ ಜಗತ್ತು ತಲೆತಗ್ಗಿಸಿತ್ತು. 1948 ಜನವರಿ 30 ರಂದು ದೆಹಲಿಯಲ್ಲಿ ನಾತೂರಾಮ್ ಗೋಡ್ಸೆ ಗಾಂಧಿಯವರನ್ನ ಗುಂಡಿಟ್ಟು ಕೊಂದಿದ್ದ. ಭಾರತ ಎರಡು ಭಾಗವಾಗಲು ಗಾಂಧೀಜಿಯೇ ಕಾರಣ ಎಂದು ಭಾವಿಸಿ ಗೋಡ್ಸೆ ಗಾಂಧಿಜೀಯವರನ್ನ ಕೊಲೆ ಮಾಡಿದ್ದ. ದೆಹಲಿಯ ಬಿರ್ಲಾ ಹೌಸ್ ನಲ್ಲಿ ಈ ಘಟನೆ ನಡೆದಿತ್ತು.

1963 ಅಮೆರಿಕಾ ಅಧ್ಯಕ್ಷ ಜಾನ್ ಎಫ್ ಕೆನಡಿ ಕೊಲೆ
ಅಧಿಕಾರದಲ್ಲಿದ್ದಾಗಲೇ ಕೊಲೆಯಾದ ಅಮೆರಿಕಾದ ನಾಲ್ಕನೇ ಅಧ್ಯಕ್ಷ ಜಾನ್ ಎಫ್ ಕೆನಡಿ. ಅಮೆರಿಕಾದ 35ನೇ ಅಧ್ಯಕ್ಷರಾಗಿದ್ದ ಕೆನಡಿ ಅವರನ್ನು 1936ರ ನವೆಂಬರ್ 22 ರಂದು ಕೊಲೆ ಮಾಡಲಾಯ್ತು. ಟೆಕ್ಸಾಸ್ ನ ರಾಜಧಾನಿ ಡಲ್ಲಾಸ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದಾಗ ಕೆನಡಿ ಅವರ ಕೊಲೆಯಾಯ್ತು. ಆದ್ರೆ ಇವರ ಕೊಲೆಗೆ ಇದೇ ಕಾರಣ ಅಂತಾ ಈವರೆಗೂ ತಿಳಿದು ಬಂದಿಲ್ಲ.
ಮಾರ್ಟಿನ್ ಲೂಥರ್ ಕಿಂಗ್ 1968
ಮಹಾತ್ಮ ಗಾಂಧೀಜಿ ಅವರ ತತ್ವಗಳ ಅನುಯಾಯಿಗಳಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರನ್ನ ಕೊಲೆ ಮಾಡಲಾಗಿತ್ತು. 1968 ರ ಏಪ್ರಿಲ್ 4 ರಂದು ಜೇಮ್ಸ್ ರೇ ಎಂಬಾತ ಕಪ್ಪು ವರ್ಣಿಯರನ್ನ ಒಗ್ಗೂಡಿಸಲು ಲೂಥರ್ ನಡೆಸುತ್ತಿದ್ದ ಹೋರಾಟಗಳ ಕಾರಣದಿಂದಾಗಿ ಅವರನ್ನ ಗುಂಡಿಟ್ಟು ಕೊಲೆ ಮಾಡಿದ್ರು.

ಭಾರತ ಪ್ರಧಾನಿ ಇಂದಿರಾ ಗಾಂಧಿ ಕೊಲೆ 1984
ಮಹಾತ್ಮ ಗಾಂಧಿಯವರ ಕೊಲೆಯ ಬಳಿಕ ಇಡೀ ಭಾರತವನ್ನು ಬೆಚ್ಚಿ ಬೀಳಿಸಿದ ಕೊಲೆ ಅಂದ್ರೆ ಅದು ಇಂಧಿರಾ ಗಾಂಧಿ ಅವರ ಕೊಲೆ. 1984ರ ಅಕ್ಟೋಬರ್ 30 ರಂದು ಇಂದಿರಾ ಗಾಂಧಿಯವರನ್ನ ಅವರ ಬಾಡಿಗಾರ್ಡ್ ಗಳೇ ಕೊಲೆ ಮಾಡಿದರು. ಇಂದಿರಾ ಗಾಂಧಿ ಅವರ ದೇಹಕ್ಕೆ 33 ಗುಂಡುಗಳು ಹೊಕ್ಕಿದ್ದವು.
ರಾಜೀವ್ ಗಾಂಧಿ ಕೊಲೆ 1991
ಇಂದಿರಾ ಗಾಂಧಿ ಅವರ ಕೊಲೆಯಾದ ಐದು ವರ್ಷಕ್ಕೆ ರಾಜೀವ್ ಗಾಂಧಿ ಅವರ ಕೊಲೆಯಾಯ್ತು. 1991 ರ ಮೇ 21 ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಮಾನವ ಬಾಂಬ್ ಸ್ಫೋಟಿಸಿ ರಾಜೀವ್ ಗಾಂಧಿಯವರನ್ನ ಕೊಲೆ ಮಾಡಲಾಯ್ತು. ಈ ಘಟನೆಯಲ್ಲಿ ರಾಜೀವ್ ಗಾಂಧಿ ಅವರ ದೇಹ ಛಿದ್ರ ಛಿದ್ರವಾಗಿತ್ತು.
ಹೀಗೆ ಅಧಿಕಾರ, ದ್ವೇಷ, ರಾಜಕೀಯ, ಹಣದ ಕಾರಣಕ್ಕಾಗಿ ಜಗತ್ತಿನಲ್ಲಿ ಹಲವು ನಾಯಕರ ಕೊಲೆಗಳಾಗಿವೆ.