ಗದಗ : ಕರ್ನಾಟಕದಾದ್ಯಂತ ಕೊರೊನಾ ಆರ್ಭಟ ಮುಂದುವರಿದಿದ್ದು, ಜನರು ಆತಂಕದಲ್ಲಿದ್ದಾರೆ. ಇದರ ಮಧ್ಯೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಸಚಿವ ಶ್ರೀರಾಮುಲು ಆಪ್ತ ಸಹಾಯಕ ಎಸ್.ಹೆಚ್ ಶಿವನಗೌಡ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಗದಗದ ಎಸ್.ಹೆಚ್. ಶಿವನಗೌಡ, ನಿನ್ನೆ ತಮ್ಮ ಬರ್ತಡೇ ಪಾರ್ಟಿ ಆಯೋಜನೆ ಮಾಡಿದ್ದರು. ನಗರದ ಶ್ರೀನಿವಾಸ ಭವನದಲ್ಲಿ ಗುಂಡು, ತುಂಡು ಪಾರ್ಟಿ ಏರ್ಪಾಟು ಮಾಡಿದ್ದರು. ಈ ಪಾರ್ಟಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಕೆಲವು ಮುಖಂಡರು ಭಾಗಿಯಾಗಿದ್ದರು. ಆದ್ರೆ ಇದರಲ್ಲಿ ಯಾರೊಬ್ಬರು ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರವಂತೂ ಇಲ್ಲಿ ಗಾಳಿಗೆ ತೂರಲಾಗಿತ್ತು. ಈ ಪಾರ್ಟಿ ತಡರಾತ್ರಿವರೆಗೂ ನಡೆದಿದ್ದು, ನಿಷೇಧಾಜ್ಞೆ ನಡುವೆಯೂ ಸಚಿವರ ಆಪ್ತನ ಬೇಜವಾಬ್ದಾರಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.







