Shriramulu : ಮುಖ್ಯಮಂತ್ರಿಗಳನ್ನು ನಾಯಿಮರಿ ಎಂದು ಕರೆದಿರುವುದು ಸಿದ್ದರಾಮಯ್ಯ ಅವರ ಸಂಸ್ಕ್ರತಿ ತೋರಿಸುತ್ತದೆ – ಶ್ರೀರಾಮುಲು
ಬಳ್ಳಾರಿ : ರಾಜ್ಯದ ಮುಖ್ಯಮಂತ್ರಿಯೊಬ್ಬರನ್ನ ನಾಯಿಮರಿ ಅಂತ ಕರೆದಿರುವುದು ಸಿದ್ದರಾಮಯ್ಯ ಅವರ ಸಂಸ್ಕ್ರತಿ ತೋರಿಸುತ್ತದೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಕಿಡಿಕಾರಿದ್ದಾರೆ..
ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದ್ದ ಸಿದ್ದರಾಮಯ್ಯ ಈ ರೀತಿ ಮಾತನಾಡಿರುವುದು ದುರದೃಷ್ಟಕರ.. ವಿಪಕ್ಷನಾಯಕರಾದ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಭಾರತೀಯ ಜನತಾಪಕ್ಷದ ಬಹಿರಂಗ ಕ್ಷಮೆ ಕೇಳಬೇಕು.
ನಾನು ಕೂಡ ಅವರು ಸೋನಿಯಾ ಮುಂದೆ ಇಲಿ.ಬೆಕ್ಕು.ಜಿರಳೆ ಹಾಗೆ ಇರುತ್ತಾರೆ ಅಂತ ಹೇಳಬಹುದು ಅದು ಸಂಸ್ಕ್ರತಿ ಅಲ್ಲ.. ಪ್ರಧಾನಿ ಮೋದಿ ಮುಂದೆ ನಮ್ಮ ಮುಖ್ಯಮಂತ್ರಿ ಯವರು ಎಲ್ಲಾ ರೀತಿಯಾಗಿ ಚರ್ಚೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ..








