ಕೊರೊನಾ ವಿಶ್ವಾದ್ಯಂತ ಯಾವ ರೀತಿಯಾದ ವಾತಾವರಣ ನಿರ್ಮಾಣ ಮಾಡಿದೆ ಅಂದ್ರೆ ಪ್ರಸ್ತುತ ಮಾಸ್ಕ್ ಧರಿಸದೇ ಇರುವವರು ಕಣ್ಣಿಗೆ ಕಾಣಿಸುವುದೇ ಕಷ್ಟ ಎನ್ನುವಂತಾಗಿದೆ. ಒಂದು ರೀತಿ ಮಾಸ್ಕ್ ಗಳು ದೈನಂದಿನ ಬದುಕಿಗೆ ಮುಖ್ಯವಾಗಿಬಿಟ್ಟಿದೆ. ಕೊರೊನಾ ಸೋಂಕಿನಿಂದ ರಕ್ಷಣೆಗೆ ಮಾಸ್ಕ್ ಗಳು ಬೇಕೇ ಬೇಕೆನ್ನುವಂತಹ ಪರಿಸ್ಥಿತಿ ಇದೆ. ಮತ್ತೊಂದೆಡೆ ಈ ಮಾಸ್ಕ್ ಗಳು ಟ್ರೆಂಡ್ ಆಗಿ ಮಾರ್ಪಾಡಾಗಿರುವ ವಿಚಾರವೂ ಎಲ್ಲರಿಗೂ ಗೊತ್ತೇ ಇದೆ. ಬಂಗಾರದ ಮಾಸ್ಕ್, ವಜ್ರದ ಮಾಸ್ಕ್ ಹೋಗೆ ವೆರೈಟಿಸ್ ಆಫ್ ಮಾಸ್ಕ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಇದೀಗ ಇಂತಹದ್ದೇ ಬಂಗಾರದ ಮಾಸ್ಕ್ ನ ಒಡವೆವೊಂದನ್ನು ಧರಿಸಿ ಶ್ರುತಿ ಹಾಸನ್ ಫೋಟೋ ಗೆ ಫೋಸ್ ನೀಡಿದ್ದು, ಭಾರೀ ಸುದ್ದಿಯಾಗಿದೆ. ಹೌದು ಕೆಲವು ದಿನಗಳ ಹಿಂದಷ್ಟೆ ಖ್ಯಾತ ನಿಯತಕಾಲಿಕೆ ‘ಫಿಲಂಫೇರ್’ನ ಮುಖಪುಟಕ್ಕೆ ಫೋಸ್ ನೀಡಿರುವ ಶ್ರುತಿ ಹಾಸನ್ ಚಿತ್ರಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಬೈತಲೆಗೆ ಧರಿಸಲಾಗುವ ಅಂದವಾದ ಆಭರಣವನ್ನೇ ಮಾಸ್ಕ್ ರೀತಿಯಲ್ಲಿ ಮುಖಕ್ಕೆ ಧರಿಸಿದ್ದಾರೆ. ಅದು ಚಿನ್ನದ ಮಾಸ್ಕ್ನಂತೆ ಕಾಣುತ್ತಿದೆ. ಇದನ್ನು ಹೊರತಾಗಿ ಸಾಕಷ್ಟು ಚಿನ್ನದ ಆಭರಣಗಳನ್ನು ಧರಿಸಿ ಶ್ರುತಿ ಹಾಸನ್ ಮಾದಕ ಫೋಸ್ ನೀಡಿದ್ದು, ಈ ಫೋಟೋ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ.
Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ…
Rashmika Mandanna : ಟಾಲಿವುಡ್ ಹೀರೋ ನಿತಿನ್ ಜೊತೆ ಮತ್ತೊಂದು ಹೊಸ ಸಿನಿಮಾ ಘೋಷಿಸಿದ ರಶ್ಮಿಕಾ… ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ವಿಜಯ್ ಜೊತೆ ವಾರಿಸು ನಂತರ ...