Shubman Gill : ಗಿಲ್ ಗಿಚ್ಚ ಗಿಲಿ ಗಿಲಿ ಬ್ಯಾಟಿಂಗ್: 145 ಎಸೆತಗಳಲ್ಲಿ ದ್ವಿಶತಕ….
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಶುಭಮನ್ ಗಿಲ್ ದ್ವಿಶತಕ ಸಿಡಿಸಿದ್ದಾರೆ. ಆರಂಭದಿಂದಲೂ ಬಿರುಸಿನ ಆಟವಾಡಿದ ಶುಭಮನ್ ಗಿಲ್ ಕೇವಲ 145 ಎಸೆತಗಳಲ್ಲಿ ದ್ವಿಶತಕ ದಾಖಲಿಸಿದರು. ಇದು ಏಕದಿನದಲ್ಲಿ ಅವರ ಮೊದಲ ದ್ವಿಶತಕವಾಗಿದೆ. ಶುಭಮನ್ ಗಿಲ್ ಅವರ ಅದ್ಭುತ ಇನ್ನಿಂಗ್ಸ್ ನಿಂದಾಗಿ ಭಾರತ ಬೃಹತ್ ಮೊತ್ತ ಗಳಿಸಿದೆ.
ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 349 ರನ್ ಗಳಿಸಿತು. ನ್ಯೂಜಿಲೆಂಡ್ ಗೆ 350 ರನ್ ಗಳ ಬೃಹತ್ ಗುರಿ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಆರಂಭದಿಂದಲೇ ಸ್ಥಿರ ಆಟವಾಡಿತು. ಶುಭಮನ್ ಗಿಲ್ ಜೊತೆಗೂಡಿ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಿದರು. ರೋಹಿತ್ ನಿಧಾನವಾಗಿ ಆಟವಾಡಿ 38 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು. ನಂತರ ಬಂದ ವಿರಾಟ್ ಕೊಹ್ಲಿ 10 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು. ನಂತರ ಇಶಾನ್ ಕಿಶನ್ 14 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದರೆ, ಸೂರ್ಯ ಕುಮಾರ್ ಯಾದವ್ 26 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ 38 ಎಸೆತಗಳಲ್ಲಿ 28 ರನ್, ವಾಷಿಂಗ್ಟನ್ ಸುಂದರ್ 14 ಎಸೆತಗಳಲ್ಲಿ 12 ಮತ್ತು ಶಾರ್ದೂಲ್ ಠಾಕೂರ್ 3 ಎಸೆತಗಳಲ್ಲಿ 3 ರನ್ ಗಳಿಸಿದರು.
ಆದರೆ, ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಆತಂಕಕ್ಕೆ ಒಳಗಾಗದೆ ಶುಭಮನ್ ಗಿಲ್ ಆಕ್ರಮಣಕಾರಿ ಆಟವಾಡಿದರು. ಬೌಂಡರಿ ಹಾಗೂ ಸಿಕ್ಸರ್ ಗಳ ಮೂಲಕ ಕಿವೀಸ್ ಬೌಲರ್ ಗಳ ಮೇಲೆ ದಾಳಿ ನಡೆಸಿದರು. ಎದುರಾಳಿ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡದೆ ಬ್ಯಾಟಿಂಗ್ ಮುಂದುವರಿಸಿದರು. 87 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ನಂತರ ಹೆಚ್ಚು ಆಕ್ರಮಣಕಾರಿ ರೂಪ ತಾಳಿದ ಶುಭ್ ಮನ್ ಕೇವಲ 145 ಎಸೆತಗಳಲ್ಲಿ ದ್ವಿಶತಕ ಗಳಿಸಿದರು. ಸತತ ಮೂರು ಸಿಕ್ಸರ್ ಬಾರಿಸಿ 200 ರನ್ ಗಳಿಸಿದ ಶುಭ್ 149 ಎಸೆತಗಳಲ್ಲಿ 208 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್ ನಿಂದ 19 ಬೌಂಡರಿ ಮತ್ತು 9 ಸಿಕ್ಸರ್ ಗಳು ಸಿಡಿದವು…
ಗಿಲ್ ಭಾರತದ ಪರ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ.
Shubman Gill : Double century in 145 balls….